ETV Bharat / state

ಹುಬ್ಬಳ್ಳಿ: ಬಾಡಿಗೆದಾರರ ಮನೆಯಲ್ಲೇ ಚಿನ್ನಾಭರಣ, ನಗದು ದೋಚಿದ ಆರೋಪಿ ಬಂಧನ

ಮನೆಯ ಮಾಲೀಕನ ಮಗನೇ ಬಾಡಿಗೆದಾರರ ಮನೆ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

author img

By ETV Bharat Karnataka Team

Published : 5 hours ago

ಆರೋಪಿ ವಶಪಡಿಸಿಕೊಂಡ ಚಿನ್ನಾಭರಣ, ನಗದು
ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣ, ನಗದು (ETV Bharat)

ಹುಬ್ಬಳ್ಳಿ: ಮನೆಯ ಮಾಲೀಕನ ಮಗನೇ ಬಾಡಿಗೆದಾರರ ಮನೆ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯ ಮೌಲಾಲಿ ಬ್ಲಾಕ್ ರಾಯ್ಕರ್ ಕಿರೋಸಿನ ಪಂಪ್​ ಹತ್ತಿರ ನಡೆದಿದೆ. ಈ ಸಂಬಂಧ ಆರೋಪಿ ಜುನೇದ್ ಅಕ್ಬರ್ ಅಲಿ ಮಲಬಾರ್ (19) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ತಮ್ಮ ಮನೆಯಲ್ಲಿ ಬಾಡಿಗೆ ಇವರು ಅಸ್ಲಂ ಮಹಮ್ಮದ್ ಜಕ್ರಿಯಾ ಮನಿಯಾರ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ.

ಅ.10 ರಂದು ಅಸ್ಲಂ ತಮ್ಮ ಕುಟುಂಬದ ಸಮೇತವಾಗಿ ಅರಿಸಿಕೇರಿ ದರ್ಗಾಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ಹಾಕಿದ್ದ ಬೀಗ ಮುರಿದು ಮನೆಯಲ್ಲಿದ್ದ 20 ಗ್ರಾಂ ತೂಕದ ಬಂಗಾರ, 275 ಗ್ರಾಂ ತೂಕದ ಬೆಳ್ಳಿ ಮತ್ತು 10 ಸಾವಿರ ನಗದನ್ನು ದೋಚಿದ್ದ. ಮರುದಿನ ಊರಿಂದ ಬಂದ ಅಸ್ಲಂ ಮನೆಯ ಬೀಗ ಮುರಿದಿದ್ದನ್ನು ಗಮನಿಸಿ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅದೇ ದಿನ ಶಹರ್​ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಶಹರ್​ ಪೊಲೀಸ್ ಠಾಣೆಯ ಪೊಲೀಸರು, ಡಿಸಿಪಿ ಕ್ರೈಂ ರವೀಶ್ ಸಿ. ಆರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 1,41,100 ರೂ. ಮೌಲ್ಯದ ನಗ, ನಾಣ್ಯ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಹರ್​ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಸಾಲ, ಬಡ್ಡಿ ಹಣ ಕೊಟ್ಟಿಲ್ಲವೆಂದು ಬಾಲಕಿ ಮೇಲೆ ಅತ್ಯಾಚಾರ ಆರೋಪ, ಓರ್ವ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.