ಧಾರವಾಡ: ತೆಲುಗು ನಟ ಶ್ರೀಕಾಂತ್ ಅವರು ಭಾನುವಾರ ಧಾರವಾಡದ ಉಪವನ ಹೋಟೆಲ್ಗೆ ಭೇಟಿ ನೀಡಿದ್ದರು. ಗೆಳೆಯರ ಭೇಟಿಗೆಂದು ಪೇಡಾ ನಗರಿಗೆ ಬಂದು ಹೋಗಿದ್ದಾರೆ. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಓದಿದ್ದ ಶ್ರೀಕಾಂತ್, ಧಾರವಾಡದೊಂದಿಗೆ ಮೊದಲಿನಿಂದಲೂ ನಂಟು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗಾಗ ಧಾರವಾಡಕ್ಕೆ ಬರುವ ಶ್ರೀಕಾಂತ್, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿದ್ದರು. ಸ್ವಂತ ಊರು ಗಂಗಾವತಿಗೆ ತೆರಳಲು ಆಗಮಿಸಿದ್ದು, ಈ ವೇಳೆ ಧಾರವಾಡಕ್ಕೆ ಆಗಮಿಸಿ ಉಪಹಾರ ಸೇವನೆ ಮಾಡಿದರು.
ಧಾರವಾಡದ ಗೆಳೆಯ ಹಾಗೂ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವಿಸಿದರು. ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್ನಲ್ಲಿ ಶ್ರೀಕಾಂತ್ ಉಪಹಾರ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಾಗಲೆಲ್ಲ ಈ ಹೋಟೆಲ್ಗೆ ಮತ್ತು ಮಾಲೀಕರನ್ನು ಭೇಟಿ ಮಾಡಿ ತೆರಳುತ್ತಾರೆ. ನಟ ಶ್ರೀಕಾಂತ್ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೂಲ ನಿವಾಸಿಯಾಗಿದ್ದಾರೆ.
ಶ್ರೀಕಾಂತ್ ತೆಲುಗು ಚಿತ್ರರಂಗ ಮಾತ್ರವಲ್ಲದೆ, ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಯುಗಾದಿ', 'ದಿ ವಿಲನ್' ಹಾಗೂ ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದಲ್ಲಿಯೂ ಕೂಡ ಶ್ರೀಕಾಂತ್ ನಟಿಸಿದ್ದರು.
ಇದನ್ನೂ ಓದಿ: ಸೈಮಾ ಅವಾರ್ಡ್ 2024: ಸ್ಯಾಂಡಲ್ವುಡ್ಗೆ ಸಾಲು ಸಾಲು ಪ್ರಶಸ್ತಿ - SIIMA 2024