ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ 'TCS 10K' ಮ್ಯಾರಥಾನ್‌ಗೆ ತೆರೆ ಬಿದ್ದಿದೆ. ಇಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪರೇಡ್ ಮೈದಾನದಿಂದ ಆರಂಭವಾಗಿ ವಿಧಾನಸೌಧ, ಹಲಸೂರು ಲೇಕ್ ಮತ್ತಿತರ ಸ್ಥಳಗಳಿಂದ ಸಾಗಿ ಅಂತ್ಯಗೊಂಡ ಮ್ಯಾರಥಾನ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು 28,600 ಉತ್ಸಾಹಿ ಓಟಗಾರರು ಭಾಗಿಯಾಗಿದ್ದರು.
![TCS World 10K Bengaluru](https://etvbharatimages.akamaized.net/etvbharat/prod-images/28-04-2024/kn-bng-04-tcs-10k-7211560_28042024135626_2804f_1714292786_130.jpg)
ಓಟ ಪೂರ್ಣಗೊಳಿಸಿದ 96ರ ಉತ್ಸಾಹಿ: 96 ವರ್ಷ ಹರೆಯದ ಎನ್.ಎಸ್.ದತ್ತಾತ್ರೇಯ 'ಓಪನ್ 10K' ಪೂರ್ಣಗೊಳಿಸಿದ ಹಿರಿಯ ಓಟಗಾರ ಎನಿಸಿಕೊಂಡರು. ಅವರಷ್ಟೇ ಅಲ್ಲದೇ ಜನರಲ್ ರಾಜಿಂದರ್ ದಿವಾನ್, ಮೇಜರ್ ಜನರಲ್ ರವಿ ಮುರುಗನ್, ಲೆಫ್ಟಿನೆಂಟ್ ಜನರಲ್ ಡಾ. ಪ್ರದೀಪ್ ಸಿ.ನಾಯರ್, ರಾಜ್ಯ ಪೋಲೀಸ್‌ನ ಹೆಚ್ಚುವರಿ ಆಯುಕ್ತ ಎಸ್.ರವಿ, ಐಜಿಪಿ ಸಂದೀಪ್ ಪಾಟೀಲ್ ಸೇರಿದಂತೆ 18,433 ಓಟಗಾರರು ಓಪನ್ 10K ವಿಭಾಗದಲ್ಲಿ ಭಾಗಿಯಾಗಿದ್ದರು. 5 ಕಿ.ಮೀ ಮಜಾ ರನ್ ವಿಭಾಗದಲ್ಲಿ 9,932 ಮಂದಿ, ಹಿರಿಯ ನಾಗರಿಕರ ಸಿಲ್ಬರ್ ರನ್ ವಿಭಾಗದಲ್ಲಿ 1318 ಜನರು, 513 ವಿಶೇಷಚೇತನರು ಚಾಂಪಿಯನ್ಸ್‌ನಲ್ಲಿ ಭಾಗವಹಿಸಿ ವೈಯಕ್ತಿಕ ಮೈಲಿಗಲ್ಲು ಸೃಷ್ಟಿಸಿದರು.
![TCS World 10K Bengaluru](https://etvbharatimages.akamaized.net/etvbharat/prod-images/28-04-2024/kn-bng-04-tcs-10k-7211560_28042024135626_2804f_1714292786_794.jpg)
ಮತ್ತೆ ಪ್ರಶಸ್ತಿ ಕೀನ್ಯಾ ಪಾಲು: 00:28:15 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ತಲುಪಿದ ಕೀನ್ಯಾದ ಪೀಟರ್ ಮ್ವಾನಿಕಿ 'TCS ವರ್ಲ್ಡ್ 10K ಬೆಂಗಳೂರು - 2024'ರ ಪುರುಷರ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಮಹಿಳಾ ವಿಭಾಗದಲ್ಲಿ ಕೀನ್ಯಾದವರೇ ಆದ ಲಿಲಿಯನ್ ಕಸಾಯಿಟ್ 00:30:56 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ದಾಟುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದರು.
![TCS World 10K Bengaluru](https://etvbharatimages.akamaized.net/etvbharat/prod-images/28-04-2024/kn-bng-04-tcs-10k-7211560_28042024135626_2804f_1714292786_865.jpg)
ಭಾರತೀಯರ ಸಾಧನೆ: ಭಾರತೀಯ ಪುರುಷ ವಿಭಾಗದಲ್ಲಿ 00:29:32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕಿರಣ್ ಮಾತ್ರೆ ಟಾಪರ್ ಎನಿಸಿದರೆ, ಮಹಿಳಾ ವಿಭಾಗದಲ್ಲಿ 00:34:03 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಸಂಜೀವನಿ ಜಾಧವ್ ಟಾಪರ್ ಆಗಿ ಹೊರಹೊಮ್ಮಿದರು.
![TCS World 10K Bengaluru](https://etvbharatimages.akamaized.net/etvbharat/prod-images/28-04-2024/kn-bng-04-tcs-10k-7211560_28042024135626_2804f_1714292786_712.jpg)
ಮುಂಜಾನೆ 4 ಗಂಟೆಯಿಂದಲೇ ರಾಜೇಂದ್ರ ಸಿಂಗ್‌ಜಿ ಆರ್ಮಿ ಆಫೀಸರ್ಸ್ ಇನ್‌ಸ್ಟಿಟ್ಯೂಟ್ ಕ್ರಿಕೆಟ್ ಮೈದಾನದ ಬಳಿ ಜಮಾಯಿಸಿದ ಸಾವಿರಾರು ಜನ ಆಟಗಾರರು ಸ್ಯಾಮ್ ಮಾಣೆಕ್ ಶಾ ಪರೇಡ್ ಮೈದಾನದಿಂದ ತಮ್ಮ ಉತ್ಸಾಹದ ಓಟವನ್ನು ಪ್ರಾರಂಭಿಸಿರು. ನಂತರ ವಿಧಾನಸೌಧ ಮತ್ತು ಹಲಸೂರು ಲೇಕ್ ಸೇರಿ ಮತ್ತಿತರ ಸ್ಥಳಗಳನ್ನು ಸುತ್ತುವರೆದು ನಿಗದಿತ ಸ್ಥಳ ತಲುಪಿದರು.
![TCS ವರ್ಲ್ಡ್ 10K](https://etvbharatimages.akamaized.net/etvbharat/prod-images/28-04-2024/21335899_sdrwefdsred.jpg)
ಬೆಂಗಳೂರಿನ ಶಾಲೆಯೊಂದರಲ್ಲಿ ಕ್ರೀಡಾ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಯುನೈಟೆಡ್ ಕಿಂಗ್‌ಡಮ್‌ನ 33 ವರ್ಷದ ಹ್ಯಾರಿ ಮಾರ್ಟಿನ್ ಅವರು ಮೂರನೇ ಬಾರಿಗೆ ಓಪನ್ 10Kನಲ್ಲಿ ಭಾಗವಹಿಸಿದ್ದರು.
![TCS ವರ್ಲ್ಡ್ 10K](https://etvbharatimages.akamaized.net/etvbharat/prod-images/28-04-2024/21335899_sdrwef.jpg)
ಓಟದ ಬಳಿಕ ಮಾತನಾಡಿದ ಅವರು, ''ಬೆಂಗಳೂರು ಒಂದು ಸುಂದರ ನಗರ. ಅಪ್ರತಿಮ ಹೆಗ್ಗುರುತುಗಳ ಸುತ್ತಲೂ ಓಡುವ ಅವಕಾಶ ನಿಜವಾಗಿಯೂ ಅದ್ಭುತ ಅನುಭವ. ಇದಲ್ಲದೇ, ಎಲ್ಲರಲ್ಲೂ ಹೆಚ್ಚಿನ ಶಕ್ತಿ ಇತ್ತು. ಆಯೋಜಕರು ನಿಜವಾಗಿಯೂ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಮುಂದಿನ ವರ್ಷ ಮತ್ತೆ ಬರಲು ನಾನು ಎದುರು ನೋಡುತ್ತಿದ್ದೇನೆ'' ಎಂದು ತಿಳಿಸಿದರು.
![TCS ವರ್ಲ್ಡ್ 10K](https://etvbharatimages.akamaized.net/etvbharat/prod-images/28-04-2024/21335899_szdrsefdf.jpg)
ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು: ರಂಭಾಪುರಿ ಶ್ರೀ ಆಗ್ರಹ - Neha Hiremath Murder Case
96 ವಯಸ್ಸಿನ ಎನ್.ಎಸ್.ದತ್ತಾತ್ರೇಯ ಅವರು ರನ್ ಪೂರ್ಣಗೊಳಿಸುವ ಮೂಲಕ ಹೊಸ ಪೀಳಿಗೆಯ ಹವ್ಯಾಸಿ ಓಟಗಾರರನ್ನು ಪ್ರೇರೇಪಿಸಿದರು. ಬಳಿಕ ಮಾತನಾಡಿದ ಅವರು, "ಈ ಹೊಸ ಮಾರ್ಗ ಬಹಳ ಸುಂದರವಾಗಿತ್ತು. ಹಲಸೂರು ಕೆರೆಯಂತಹ ಹೆಗ್ಗುರುತುಗಳ ಪಕ್ಕದಲ್ಲಿನ ಓಟವು ಹಳೆಯ ಬೆಂಗಳೂರಿನ ನೆನಪುಗಳನ್ನು ತಂದಿತು. ಮಾರ್ಗ ವಿಭಿನ್ನವಾಗಿದ್ದರೂ ಸಹ ಬೆಂಗಳೂರಿನ ಉತ್ಸಾಹಭರಿತ ವಾತಾವರಣವು ಒಂದೇ ಆಗಿತ್ತು. ನನ್ನ ಮಗ ಮತ್ತು ನನಗೂ ತುಂಬಾ ಸಂತೋಷವಾಯಿತು'' ಎಂದು ಹೇಳಿದರು.
![TCS ವರ್ಲ್ಡ್ 10K](https://etvbharatimages.akamaized.net/etvbharat/prod-images/28-04-2024/21335899_sdredf.jpg)
ಇದನ್ನೂ ಓದಿ: ಬೆಳಗಾವಿಯಲ್ಲಿ ಮೋದಿ: ಜಗದೀಶ್ ಶೆಟ್ಟರ್ ಪತ್ನಿ, ಸೊಸೆಯಂದಿರು ಹೇಳಿದ್ದೇನು ಗೊತ್ತಾ? - Modi In Belagavi
TCS ವರ್ಲ್ಡ್ 10K-2024ನ ರಾಯಭಾರಿ ಡೇಮ್ ವ್ಯಾಲೆರಿ ಆಡಮ್ಸ್, ಟಿಸಿಎಸ್ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್, ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಅಂಜು ಬಾಬಿ ಜಾರ್ಜ್, ಅಶ್ವಿನಿ ನಾಚಪ್ಪ ಮತ್ತಿತರರು ಭಾಗಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೆಗಾ ಈವೆಂಟ್ ಯಶಸ್ವಿಗೊಳಿಸಲು ಸಹಕರಿಸಿದ ರಾಜ್ಯ ಸರ್ಕಾರ, ಪೊಲೀಸ್ ಮತ್ತಿತರ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಲಾಯಿತು.