ETV Bharat / state

'ಭಾರತೀಯ ಚೊಂಬು ಪಾರ್ಟಿ ಬಿಜೆಪಿ, ಕನ್ನಡಿಗರಿಗೆ ಅನ್ಯಾಯ ಮಾಡಿದೆ': ಸುರ್ಜೇವಾಲಾ - Surjewala

ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಭಾರತೀಯ ಚೊಂಬು ಪಾರ್ಟಿ ಬಿಜೆಪಿ, ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಸುರ್ಜೇವಾಲಾ

author img

By ETV Bharat Karnataka Team

Published : Apr 23, 2024, 5:07 PM IST

ಬೆಂಗಳೂರು: 'ಭಾರತೀಯ ಚೊಂಬು ಪಾರ್ಟಿ ಬಿಜೆಪಿ. 6.5 ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ' ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಮೊದಲು ನ್ಯಾಯ ಕೊಡಿ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ದಕ್ಷಿಣದ ಎಲ್ಲಾ ರಾಜ್ಯಗಳಿಗೂ ನ್ಯಾಯ ಸಿಗಬೇಕು. ದೇಶದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಆಗ ಎಲ್ಲರಿಗೆ ನ್ಯಾಯ ಸಿಗಲಿದೆ ಎಂದರು.

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನಾವು ಎಲ್ಲರನ್ನೂ ಭೇಟಿ ಮಾಡಿದ್ದೆವು. ಪ್ರಧಾನಿಯವರಿಗೆ ಹಾರ, ಶಾಲು ಹಾಕಿ ಮೈಸೂರು ಪೇಟ ತೊಡಿಸಿ ಬರ ಪರಿಹಾರ ಕೇಳಿದ್ದೆವು. ಕೊನೆಗೆ ಸುಪ್ರೀಂಕೋರ್ಟ್​ಗೆ ಹೋಗಿದ್ದೆವು. ಕಾನೂನು‌ ಹೋರಾಟಕ್ಕೆ ಕೊನೆಗೂ‌ ಜಯ ಸಿಕ್ಕಿದೆ. ಕೇಂದ್ರದ ಅನ್ಯಾಯದ ವಿರುದ್ಧ ನಮಗೆ ಜಯ ಸಿಕ್ಕಿದೆ. ನಿಮಗೆ ವೋಟು ಕೇಳುವ ಹಕ್ಕಿಲ್ಲ. ವಾರದಲ್ಲಿ ಡಿಸೈಡ್ ಮಾಡ್ತೇವೆ ಅಂದಿದ್ದೀರಿ. ನಿಮಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ಯಾ?. ಕಾಳಜಿ ಇದ್ದರೆ ತಕ್ಷಣ ಹಣವನ್ನು ರಿಲೀಸ್ ಮಾಡಿ. ನಿಮ್ಮ ಹಣ ನಾವು ಒಂದು ಪೈಸೆ ಇಟ್ಟುಕೊಳ್ಳಲ್ಲ. ಎಲ್ಲ ಹಣವನ್ನು ರೈತರ ಅಕೌಂಟಿಗೆ ಹಾಕ್ತೇವೆ. ತಕ್ಷಣ ಬರ ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಬರ ಪರಿಹಾರ ಕೊಟ್ಟು ಕರ್ನಾಟಕಕ್ಕೆ ಬನ್ನಿ, ಇಲ್ಲವಾದರೆ ಮತ ಕೇಳುವ ನೈತಿಕತೆ ಇಲ್ಲ: ಕೇಂದ್ರದ ವಿರುದ್ಧ ಸಿಎಂ ಗರಂ - congress protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.