ETV Bharat / state

'ರಾಜಕೀಯದಲ್ಲಿ‌ ನಾನಿರುವವರೆಗೆ ಅಭಿಷೇಕ್ ಬರಲ್ಲ, ಮುಂದೆ ಏನಾಗುತ್ತೆ ನೋಡೋಣ': ಸುಮಲತಾ ಅಂಬರೀಶ್ - Sumalatha Ambareesh - SUMALATHA AMBAREESH

ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ಮಗನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.

Ambareesh Birthday celebration
ಮಂಡ್ಯದಲ್ಲಿ ಅಂಬರೀಶ್ ಜನ್ಮದಿನಾಚರಣೆ (ETV Bharat)
author img

By ETV Bharat Karnataka Team

Published : May 29, 2024, 8:21 PM IST

Updated : May 29, 2024, 8:39 PM IST

ಮಂಡ್ಯದಲ್ಲಿ ಅಂಬರೀಶ್ ಜನ್ಮದಿನಾಚರಣೆ (ETV Bharat)

ಮಂಡ್ಯ: ''ಚುನಾವಣೆ ಫಲಿತಾಂಶ ಏನಾಗಬಹುದು, ಸರ್ಕಾರ ಯಾವಾಗ ರಚನೆ ಆಗುತ್ತೆ ಎಂಬುದನ್ನು ಸದ್ಯ ಯೋಚಿಸುತ್ತಿದ್ದೇವೆ. ಯಾವ ಸ್ಥಾನವನ್ನೂ ನಾನೀಗ ಕೇಳಲ್ಲ. ಜೆ.ಪಿ ನಡ್ಡಾ ಸೇರಿ ಹಿರಿಯರು ಒಳ್ಳೆಯ ಭವಿಷ್ಯ ಇದೆಯೆಂದು ನನಗೆ ತಿಳಿಸಿದ್ದಾರೆ. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತದೆ. ಸದ್ಯಕ್ಕೆ‌ ನನಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ'' ಎಂದು ಸಂಸದೆ ಸುಮಲತಾ ಅಂಬರೀಶ್​ ತಿಳಿಸಿದರು.

ರೆಬಲ್ ಸ್ಟಾರ್ ಅಂಬರೀಶ್ ಅವರ 72ನೇ ಜನ್ಮದಿನವನ್ನು ಮಂಡ್ಯದಲ್ಲಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮತ್ತು ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಸುಮಲತಾ ಅಂಬರೀಶ್​ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡರು.

ಮೊದಲಿಗೆ ಅಂಬರೀಶ್ ಹುಟ್ಟೂರಾದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಅವರ ಸಮಾಧಿಗೆ ಪುತ್ರ-ನಟ ಅಭಿಷೇಕ್ ಅಂಬರೀಶ್ ಜೊತೆ ಸೇರಿ ಪೂಜೆ ಸಲ್ಲಿಸಿದರು. ಬಳಿಕ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಾಮಸ್ಥರ ಜೊತೆ ಸೇರಿ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದರು. ನಂತರ ಡಾ. ಅಂಬರೀಶ್ ಫೌಂಡೇಶನ್ ಹಾಗೂ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

''ಅಧಿಕಾರ ಶಾಶ್ವತವಲ್ಲ. ಮಂಡ್ಯ ಜನರ ಪ್ರೀತಿ ಶಾಶ್ವತ. ಮನೆಮನೆಯಲ್ಲಿ ವ್ಯಕ್ತಿ ಜನಿಸೋದು ಸಾಮಾನ್ಯ. ಅದ್ಭುತ ವ್ಯಕ್ತಿತ್ವ ಇರುವ ವ್ಯಕ್ತಿ ಜನಿಸೋದು ಅಪರೂಪ. ಅಂಬರೀಶ್ ಅದನ್ನು ಪಡೆದುಕೊಂಡು ಬಂದವರು. ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ'' ಎಂದು ತಿಳಿಸಿದರು.

''ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಕಾಯಬೇಕು. ನಾನು ಕೇಂದ್ರ ರಾಜಕೀಯದ ಕಡೆ ಗಮನ ಕೊಡಬೇಕು ಎಂದುಕೊಂಡಿದ್ದೇನೆ'' ಎಂದು ತಿಳಿಸಿದರು. ''ಎಂಪಿ ಚುನಾವಣೆಯ ಫಲಿತಾಂಶದ ಪ್ರಿಡಿಕ್ಷನ್​​, ನಿರೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನನ್ನ ಚುನಾವಣೆಯಲ್ಲಿಯೇ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಬಿಜೆಪಿ ಸೇರಿದ್ದೇನೆ. ಬಿಜೆಪಿ‌ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸೀಟ್‌ಗಳನ್ನು ಎನ್‌ಡಿಎ ಗೆಲ್ಲಲಿದೆ''. ಇನ್ನೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಯಾರೂ ನನ್ನನ್ನು ಕೇಳಿಲ್ಲ ಎಂದು ತಿಳಿಸಿದರು.

ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ: ''ರಾಜಕೀಯವಾಗಿ ನನ್ನ ಮಗನ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ರಾಜಕೀಯದಲ್ಲಿ‌ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ. ಅಭಿಷೇಕ್ ಸಹ ನಾನು ರಾಜಕೀಯದಲ್ಲಿ ಇರುವವರೆಗೆ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ'' ಎಂದು ತಿಳಿಸಿದರು.

'ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ''ಇದು ದುರಾದೃಷ್ಟಕರ ವಿಚಾರ. ನಾವು ಮಾಡಿರೋ ಒಳ್ಳೆಯ ವಿಚಾರಕ್ಕಿಂತ ಇಂಥ ವಿಚಾರಗಳಿಗೆ ಪಬ್ಲಿಸಿಟಿ ಸಿಗುತ್ತಿದ್ದು, ಇದು ನನಗೆ ಅರ್ಥ ಆಗುತ್ತಿಲ್ಲ. ಅಂಬರೀಶ್ ಅವರ ಹುಟ್ಟುಹಬ್ಬದ ದಿನ ನೆಗೆಟಿವ್ ವಿಚಾರಗಳ ಬಗ್ಗೆ ಕಮೆಂಟ್ ಮಾಡಲ್ಲ'' ಎಂದರು.

''ಮಂಡ್ಯದ ನನ್ನ ಚುನಾವಣೆ ಒಂದು ಇತಿಹಾಸ ಆಗಿದೆ. ಆ ರೀತಿಯ‌ ಚುನಾವಣೆ ಬರಲು ಇನ್ನಷ್ಟು ವರ್ಷಗಳು ಆಗುತ್ತೋ ಗೊತ್ತಿಲ್ಲ. ಆ ರೀತಿಯ ಚುನಾವಣೆ ನೋಡಲು ಬಹುಶಃ ಸಾಧ್ಯವಾಗಲ್ಲ. ಪಕ್ಷೇತರವಾಗಿ ನಿಂತು ಸರ್ಕಾರವನ್ನು ಎದುರಾಕಿಕೊಂಡು ಗೆದ್ದಿದ್ದ ಚುನಾವಣೆ ಅದು. ಪ್ರತೀ ಚುನಾವಣೆಗೂ ಬೇರೆ ಬೇರೆಯ ಬಣ್ಣಗಳಿರುತ್ತವೆ. ಬಿಜೆಪಿ ನಾಯಕರು ನನಗೆ ಸೂಕ್ತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ'' ಎಂದು ಹೇಳಿದರು.

ಡಾ. ಅಂಬರೀಶ್ ಫೌಂಡೇಶನ್ ಸ್ಥಾಪಿಸಿದ್ದೇವೆ. ಅವರ ಸಾಧನೆಗಳನ್ನು ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನಾನು ಜಿಲ್ಲೆಯ ಸೊಸೆಯಾಗಿ ಹೆಮ್ಮೆ ಪಡುತ್ತೇನೆ. ವಿವಿಧ ಕ್ಷೇತ್ರಗಳಲ್ಲಿ ಹಲವರು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸಹ ಸಾಧನೆ ಮಾಡಿದ್ದಾರೆ. ಮುಂದೆ ಜಿಲ್ಲೆಗೆ ಉತ್ತಮ ಹೆಸರು ಬರುತ್ತದೆ. ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೆನೆ ಎಂದರು.

ಜಿಲ್ಲೆಯ ಜನತೆ ಅಂಬರೀಶ್ ಅವರಿಗೆ ಪ್ರೀತಿ, ಅಭಿಮಾನ ಕೊಟ್ಟು ಬೆಳೆಸಿದರು. ಅಂಬರೀಶ್ ಅವರನ್ನು ರಾಜ್ಯದ ಜನರು ಇಷ್ಟಪಡುತ್ತಿದ್ದರು. ಅದ್ರೆ ಮಂಡ್ಯದವರನ್ನು ನೋಡಲು ಅಂಬರೀಶ್ ಇಷ್ಟ ಪಡ್ತಿದ್ರು. ಅವರ ಹುಟ್ಟುಹಬ್ಬದಂದು ಜನರು ನೋಡೋಕೆ ಬರುತ್ತಿದ್ದರು. ಅವರ ಅಗಲಿಕೆ ಬಳಿಕ ಮಂಡ್ಯದಲ್ಲೇ, ನಿಮ್ಮ ಜೊತೆ ನಾವು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇವೆ‌. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಸಂಸದೆ ಸ್ಥಾನ ಹೋದರೂ, ಜಿಲ್ಲೆಯ ಸೊಸೆ ಸ್ಥಾನ ಇದೆ. ಅದೆಂದಿಗೂ ನನ್ನನ್ನು ಬಿಟ್ಟುಹೋಗಲ್ಲ. ರಾಜಕಾರಣದಲ್ಲಿ ಏನೋ ಆಗಬೇಕೆಂದು ರಾಜಕಾರಣಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದೆ. ರಾಜಕಾರಣದಲ್ಲಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯ ಜನರ ಜೊತೆಗಿನ ಸಂಬಂಧ ನಿರಂತರ. ನಿಮ್ಮ ಸಹಕಾರ, ಆಶೀರ್ವಾದ ಎಂದೆಂದಿಗೂ ಇರಲಿ‌. ಅಂಬರೀಶ್ ಜೀವನ ಎಲ್ಲರ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು: ವಿಡಿಯೋ ನೋಡಿ - Pooja to Ambareesh Tomb

ಅಭಿಷೇಕ್ ಅಂಬರೀಶ್ ಮಾತನಾಡಿ, ಇಂದು ಕಾರ್ಯಕ್ರಮದ ಮೂಲಕ ಅವರ ಸಾಧನೆಗೆ ಗೌರವ ಸಲ್ಲಿಸುತ್ತಿದ್ದೇವೆ. ಅಂಬರೀಶ್ ಅವರನ್ನು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು. ಅವರ ಸಾಧನೆಗಳನ್ನು ನಾವು ಮರೆಯಬಾರದು. ಅವರ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ನಾವೆಂದಿಗೂ ಮಂಡ್ಯ ಬಿಟ್ಟು ಹೋಗಲ್ಲ. ನಿಮ್ಮ ಜೊತೆ ಸದಾ ಇರುತ್ತೇವೆಂದು ತಿಳಿಸಿದರು.

Last Updated : May 29, 2024, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.