ETV Bharat / state

ಮೈಸೂರು: ಮರು ಮೌಲ್ಯಮಾಪನದಲ್ಲಿ ಶೇ.97ರಷ್ಟು ಅಂಕ ಪಡೆದರೂ ಸಿಗದ ಸೀಟು! - SSLC Re Evaluation - SSLC RE EVALUATION

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಪಡೆದರೂ ಪ್ರವೇಶಾತಿ ಸಮಯ ಮುಗಿದಿರುವುದರಿಂದ ಪದವಿಪೂರ್ವ ಕಾಲೇಜುಗಳಲ್ಲಿ ಸೀಟು ಸಿಗದೇ ಕಂಗಾಲಾಗಿದ್ದಾರೆ.

ಮರು ಮೌಲ್ಯಮಾಪನದಲ್ಲಿ ಶೇ.97 ರಷ್ಟು ಅಂಕ ಪಡೆದರೂ ಸಿಗದ ಸೀಟು
ಮರು ಮೌಲ್ಯಮಾಪನದಲ್ಲಿ ಶೇ.97 ರಷ್ಟು ಅಂಕ ಪಡೆದರೂ ಸಿಗದ ಸೀಟು (ETV Bharat)
author img

By ETV Bharat Karnataka Team

Published : Jun 7, 2024, 6:05 PM IST

ಮೈಸೂರು: ಮೌಲ್ಯಮಾಪಕರ ಬೇಜವಾಬ್ದಾರಿಯಿಂದಾಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದರೂ ಕೂಡಾ ಕಾಲೇಜು ಪ್ರವೇಶಾತಿ ಸಮಯ ಮುಗಿದಿರುವ ಹಿನ್ನೆಲೆಯಲ್ಲಿ ಸೀಟು ಸಿಗದೇ ಕಂಗಾಲಾಗಿದ್ದಾರೆ.

ಟಿ.ನರಸೀಪುರ ತಾಲೂಕಿನ ಕೊಡಗಳ್ಳಿ ಗ್ರಾಮದ ಶ್ರೀನಿವಾಸ್-ಸುಮ ದಂಪತಿಯ ಪುತ್ರಿ ಶ್ರಾವ್ಯ ಎಸ್​ಎಸ್‌ಎಲ್​ಸಿ ಪರೀಕ್ಷೆ ಬರೆದು 545 ಗಳಿಸಿದ್ದರು. ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಾರದ ಕಾರಣ ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ವಿದ್ಯಾರ್ಥಿನಿ 606 ಅಂಕ ಪಡೆದಿದ್ದಾರೆ.

ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ವಿದ್ಯಾರ್ಥಿನಿಯ ತಾಯಿ ಸುಮ ಶ್ರೀನಿವಾಸ್ ಮಾತನಾಡಿ, "ಎಸ್‌ಎಸ್‌ಎಲ್​ಸಿ ಪರೀಕ್ಷಾ ಫಲಿತಾಂಶದಲ್ಲಿ ತಮ್ಮ ಪುತ್ರಿ ಕೆ.ಎಸ್.ಶ್ರಾವ್ಯಳಿಗೆ 545 (ಶೇ.87) ಅಂಕ ಬಂದಿತ್ತು. ಆದರೆ ಪುತ್ರಿ ಹೆಚ್ಚು ಅಂಕಗಳಿಸುವ ವಿಶ್ವಾಸವಿದ್ದುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೆವು. ಬಳಿಕ 606 (ಶೇ.97) ಅಂಕಗಳು ಬಂದಿವೆ. ಯಾರದೋ ತಪ್ಪಿಗೆ ಮಗಳು ನೋವು ಅನುಭವಿಸಿದಳು. ಮೊದಲ ಫಲಿತಾಂಶದಲ್ಲಿ ಗಣಿತದಲ್ಲಿ 33+20=53 ಅಂಕ, ವಿಜ್ಞಾನದಲ್ಲಿ 55+20=75 ಬಂದಿತ್ತು. ಮರು ಮೌಲ್ಯಮಾಪನದಲ್ಲಿ ಕ್ರಮವಾಗಿ 74+20=94 ಮತ್ತು 75+20= 95 ಅಂಕ ಬಂದಿದೆ" ಎಂದು ಹೇಳಿದರು.

"ಯಾರೂ ಕೂಡಾ ತಾವು ಚೆನ್ನಾಗಿ ಓದಿದ್ದರೂ ಕಡಿಮೆ ಅಂಕ ಬಂದಿದೆ ಎಂದು ಆತಂಕಕ್ಕೆ ಒಳಗಾಗುವುದು ಬೇಡ. ಧೈರ್ಯದಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಬೇಕು. ಶ್ರೀರಂಗಪಟ್ಟಣದ ಅರಕೆರೆಯಲ್ಲಿರುವ ಜಿವೋದಯ ಶಾಲೆಯ ಪ್ರಾಚಾರ್ಯರು ತಮಗೆ ಧೈರ್ಯ ತುಂಬಿ, ನಿಮ್ಮ ಮಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದಾಳೆ. ಮರು ಮೌಲ್ಯಮಾಪನಕ್ಕೆ ಹಾಕಿ ಎಂದು ಸಲಹೆ ನೀಡಿದರು. ಹೀಗಾಗಿ ತಾವು ಮರು ಮೌಲ್ಯಮಾಪನಕ್ಕೆ ಹಾಕಿದ ಬಳಿಕ ನಿರೀಕ್ಷೆಗೆ ತಕ್ಕ ಫಲಿತಾಂಶ ದೊರೆತಿದೆ. ಫಲಿತಾಂಶ ನೋಡಿದಾಗ ಮೊದಲು ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾಪನಕ್ಕೆ ಹಾಕಿದ ಬಳಿಕ ಪಿಯುಸಿ ಪ್ರವೇಶಕ್ಕೆ ಅರ್ಜಿ ಹಾಕೋಣ ಎಂದು ಸುಮ್ಮನಿದ್ದೆವು. ಈಗ ಶೇ.97ರಷ್ಟು ಅಂಕ ಬಂದಿದೆ. ಆದರೆ ಕೊನೆ ದಿನಾಂಕ ಮುಗಿದಿರುವ ಕಾರಣ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ. ಇದಕ್ಕೆ ಯಾರು ಹೊಣೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್; ಸಾಧನೆ ಬಗ್ಗೆ ವಿದ್ಯಾರ್ಥಿ ಕಲ್ಯಾಣ್​ ಹೇಳಿದ್ದೇನು? - NEET Topper

ETV Bharat Logo

Copyright © 2025 Ushodaya Enterprises Pvt. Ltd., All Rights Reserved.