ETV Bharat / state

ಪರಿಶಿಷ್ಟ ವರ್ಗದವರ ಭೂಮಿ ಮಾರಾಟ, ವರ್ಗಾವಣೆಗೆ ನಿಯಮ ಬಿಗಿ: ರಾಜ್ಯ ಸರ್ಕಾರ ಆದೇಶ - SC ST Land Sale Rules - SC ST LAND SALE RULES

ರಾಜ್ಯ ಸರ್ಕಾರವು ಪರಿಶಿಷ್ಟ ವರ್ಗದವರ ಭೂಮಿ ಮಾರಾಟ, ವರ್ಗಾವಣೆಗೆ ನಿಯಮ ಬಿಗಿಗೊಳಿಸಿದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) (ತಿದ್ದುಪಡಿ) ನಿಯಮ 2024 ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿದೆ.

STATE GOVERNMENT ORDER
ವಿಧಾನಸೌಧ (ETV Bharat)
author img

By ETV Bharat Karnataka Team

Published : Jun 28, 2024, 8:21 AM IST

ಬೆಂಗಳೂರು: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) (ತಿದ್ದುಪಡಿ) ನಿಯಮ 2024 ಜಾರಿ ಸಂಬಂಧ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಪರಿಶಿಷ್ಟರ ಭೂಮಿ ವರ್ಗಾವಣೆ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಭೂಮಿ ಮಾರಾಟದ ಮುನ್ನ ಹಲವು ಪರಿಶೀಲನಾ ಪ್ರಕ್ರಿಯೆಯನ್ನು ಬಿಗಿಗೊಳಿಸುವ ನಿಯಮವನ್ನು ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ. ಪರಿಶಿಷ್ಟರ ಭೂಮಿಯನ್ನು ಪರಾಭಾರೆ ಮಾಡಲು ಸದ್ಯ ಇರುವ ಕಾಯ್ದೆಯಲ್ಲಿನ ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮಂಜೂರು ಮಾಡಿದ ಜಮೀನನ್ನು ಮಾರಾಟ ಅಥವಾ ವರ್ಗಾವಣೆ ಮಾಡಲು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿದ ಬಳಿಕ ಅನುಮತಿ ನೀಡುವ ನಿಟ್ಟಿನಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

ತಿದ್ದುಪಡಿ ನಿಯಮದಲ್ಲಿ ಏನಿದೆ?: ಮಂಜೂರಾತಿ ಪಡೆದವನು ಅಥವಾ ಆತನ ವಾರಸುದಾರನು ಭೂಮಿ ವರ್ಗಾವಣೆಗೆ ಪೂರ್ವಾನುಮತಿ ಕೋರಲು ನಮೂನೆ 3ರಲ್ಲಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರನಿಗೆ ಅರ್ಜಿಯನ್ನು ಖುದ್ದಾಗಿ ಸಲ್ಲಿಸಬೇಕು. ತಹಶೀಲ್ದಾರ್ ಸೂಕ್ತ ವಿಚಾರಣೆಗಳನ್ನು ಮಾಡಿದ ಬಳಿಕ ಸಲ್ಲಿಸಲಾದ ದಾಖಲೆಗಳು, ಕಡತಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ, ವರದಿಯಲ್ಲಿ ತನ್ನ ಅಭಿಪ್ರಾಯಗಳನ್ನು ದಾಖಲಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು.

ಉಪವಿಭಾಗಾಧಿಕಾರಿಯು ವರದಿಯನ್ನು ಸ್ವೀಕರಿಸಿದ ಬಳಿಕ ವರದಿಯನ್ನು ಪರ್ಯಾಲೋಚಿಸಿ, ಭೂಮಿಯ ವರ್ಗಾವಣೆಗಾಗಿ ಅನುಮತಿ ನೀಡಬಹುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಶಿಫಾರಸು ಮಾಡಬೇಕು. ಉಪವಿಭಾಗಾಧಿಕಾರಿ ಭೂಮಿ ವರ್ಗಾವಣೆಯಲ್ಲಿ ದಬ್ಬಾಳಿಕೆ, ಲೋಪ, ಮೋಸ ಅಥವಾ ಭೂಮಿಯ ತಪ್ಪು ಮೌಲ್ಯನಿರ್ಧರಣೆ ಆಗಿದೆಯೇ ಎಂಬ ಬಗ್ಗೆ ತಿಳಿಯುವ ಸಂಬಂಧ ವಿಚಾರಣೆಯನ್ನು ನಡೆಸುವ ಅಧಿಕಾರ ಹೊಂದಿರಲಿದ್ದಾರೆ.

ಲೋಪಗಳು ಕಂಡು ಬಂದರೆ, ಭೂಮಿಯ ವರ್ಗಾವಣೆಗಾಗಿ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡಬೇಕು. ಜಿಲ್ಲಾಧಿಕಾರಿ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ದಾಖಲಾತಿಗಳು ಹಾಗೂ ವರದಿಗಳನ್ನು ಪರಿಶೀಲಿಸಿದ ಬಳಿಕ, ಕಂದಾಯ ಆಯುಕ್ತರಿಗೆ ಭೂಮಿಯ ವರ್ಗಾವಣೆಯ ಕುರಿತ ಅನುಮತಿಯ ಅರ್ಜಿಯನ್ನು ತಮ್ಮ ಶಿಫಾರಸುಗಳೊಂದಿಗೆ ಸಲ್ಲಿಸಬೇಕು.

ಕಂದಾಯ ಆಯುಕ್ತರು ವರದಿಯನ್ನು ಸ್ವೀಕರಿಸಿದ ನಂತರ, ಅರ್ಜಿಯನ್ನು ಪರಿಷ್ಕರಿಸಿ, ಭೂಮಿಯ ವರ್ಗಾವಣೆಗೆ ಸರ್ಕಾರದ ಅನುಮತಿ/ ನಿರ್ಧಾರಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರಿಗೆ ಭೂಮಿಯ ವರ್ಗಾವಣೆಯ ಅನುಮತಿ ಕುರಿತ ಎಲ್ಲಾ ಅರ್ಜಿಗಳನ್ನು ತಮ್ಮ ಶಿಫಾರಸುಗಳೊಂದಿಗೆ ಸಲ್ಲಿಸಬೇಕು.

ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರು, ಅರ್ಜಿಯನ್ನು ಸ್ವೀಕರಿಸಿದ ನಂತರ ಮತ್ತು ತಹಶೀಲ್ದಾರರು ಸಲ್ಲಿಸಿದ ವರದಿಯನ್ನು ಹಾಗೂ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಕಂದಾಯ ಆಯುಕ್ತರು ಸಲ್ಲಿಸಿದ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸರ್ಕಾರದ ಅನುಮತಿ/ ಅನುಮೋದನೆ ಪಡೆದ ನಂತರ, ಸರ್ಕಾರದ ಪರವಾಗಿ ಅನುಮತಿ/ ಅನುಮೋದನೆ/ ನಿರ್ಧಾರವನ್ನು ಕಂದಾಯ ಆಯುಕ್ತರಿಗೆ ತಿಳಿಸಬೇಕು.

ಭೂಮಿಯ ವರ್ಗಾವಣೆಗೆ ಅನುಮೋದನೆಯನ್ನು ಪಡೆದ ಮೇಲೆ, ಕಂದಾಯ ಆಯುಕ್ತರು ಭೂಮಿಯ ವರ್ಗಾವಣೆಗಾಗಿ ಅಗತ್ಯ ಅನುಮತಿಯನ್ನು ನೀಡಿ ಆದೇಶ ಹೊರಡಿಸಬೇಕು. ಇತ್ತ ಕಂದಾಯ ಆಯುಕ್ತರು ಅಗತ್ಯ ಅನುಮತಿಯನ್ನು ನೀಡಿದ್ದಲ್ಲಿ, ಉಪವಿಭಾಗಾಧಿಕಾರಿ ಭೂಮಿಯ ವರ್ಗಾವಣೆಗೆ ಅನುವಾಗುವಂತೆ ಸದರಿ ಭೂಮಿಯಿಂದ ಪಿಟಿಸಿಎಲ್ ನಿಶಾನೆಯನ್ನು ತೆಗೆದು ಹಾಕಬೇಕು.

ಭೂ ವರ್ಗಾವಣೆಗೆ ಅನುಮತಿಯನ್ನು ನೀಡಿರುವ ಅಥವಾ ಅನುಮತಿಯನ್ನು ನಿರಾಕರಿಸಿರುವ ಕಂದಾಯ ಆಯುಕ್ತರ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿ, ಆ ಆದೇಶವನ್ನು ಹೊರಡಿಸಿದ ದಿನಾಂಕದಿಂದ 30 ದಿನಗಳ ಅವಧಿಯೊಳಗೆ ಆದೇಶವನ್ನು ಪುನರಾವಲೋಕಿಸುವಂತೆ ಕೋರಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ.‌

ಇದನ್ನೂ ಓದಿ: ಬಿಇಎಂಎಲ್ ನೇಮಕಾತಿಗೆ ಹೈಕೋರ್ಟ್ ಮಧ್ಯಂತರ ತಡೆ - BEML Recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.