ETV Bharat / state

ದಾವಣಗೆರೆ: ಗಣೇಶ ನಿಮಜ್ಜನ ಮೆರವಣಿಗೆ ಮೇಲೆ ಕಲ್ಲು ತೂರಾಟ: ಅಗತ್ಯ ಬಿದ್ದರೆ ಸೆಕ್ಷನ್​ 144 ಜಾರಿ - SP - Stone Pelting

author img

By ETV Bharat Karnataka Team

Published : 5 hours ago

Updated : 5 hours ago

ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಸುಗಮ ನಿಮಜ್ಜನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ganesh immersion
ಮೆರವಣಿಗೆ ವೇಳೆ ಪೊಲೀಸ್​ ಬಂದೋಬಸ್ತ್​ (ETV Bharat)

ದಾವಣಗೆರೆ: ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನೆ ಬಗ್ಗೆ ಎಸ್​ಪಿ ಉಮಾ ಪ್ರಶಾಂತ್ ಮಾಹಿತಿ (ETV Bharat)

ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿ, ''ಗಣೇಶನ ಮೆರವಣಿಗೆಯು ನಗರದ ಅರಳಿಮರ ಸರ್ಕಲ್ ದಾಟಿ ಚಾಮರಾಜಪೇಟೆ ಸರ್ಕಲ್​ ಬಳಿ ಹೋಗುವಾಗ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗಣಪತಿ ನಿಮಜ್ಜನಕ್ಕೆ ಮೆರವಣಿಗೆಯು ಮುಂದೆ ತೆರಳಿದೆ'' ಎಂದು ತಿಳಿಸಿದರು.

''ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್​ ಜಾರಿಗೊಳಿಸಲಾಗುವುದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತಾಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ನಿನ್ನೆ ನಡೆದ ಪ್ರಚೋದನಾತ್ಮಕ ಭಾಷಣವೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದವರ ಮೇಲೆಯೂ ಕ್ರಮ ಜರುಗಿಸಲಾಗುವುದು. ಪ್ರಚೋದನಾತ್ಮಕ ಭಾಷಣಗಳ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದರು.

ಅಂಗಡಿ‌ ಮುಗ್ಗಟ್ಟು ಬಂದ್: ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದರಿಂದ ಬೇತೂರ್ ವೃತ್ತ, ಅರಳಿಮರ ವೃತ್ತ, ಎನ್ಆರ್ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಲಿಸರು ಅಂಗಡಿ‌ ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಾರೆ‌. ಎಸ್​​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ: ಸತತ 32 ಗಂಟೆ ನಿಮಜ್ಜನ ಮೆರವಣಿಗೆ: ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ - Ganeshotsava Procession

Last Updated : 5 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.