ETV Bharat / state

ಅಕ್ಷರಧಾತೆಗೆ ಒಲಿದ ಪ್ರಶಸ್ತಿಯ ಗರಿ; ಆರು ಸಹೋದರಿಯರು ಶಿಕ್ಷಕಿಯರು, ಕೈಹಿಡಿದ ಪತಿಯೂ ಮೇಷ್ಟ್ರು, ಮಗಳೂ ಅಧ್ಯಾಪಕಿ! - State Level Best Teacher Award

ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಿ ಎಂ. ಹೆಚ್​ ಅವರಿಗೆ 2024ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಇವರು ಎರಡು ಕೊಠಡಿಗಳ ಸರ್ಕಾರಿ ಶಾಲೆಯನ್ನು 10 ಕೊಠಡಿಗಳ ವಿಶಾಲ ಶಾಲೆಯನ್ನಾಗಿ ಮಾಡಿದ್ದಾರೆ. ಶಾಲೆಗೆ ಹೈಟೆಕ್ ಸ್ಪರ್ಶವನ್ನೂ ನೀಡಿ ಗಮನ ಸೆಳೆದಿದ್ದಾರೆ.

teachers
ಆರು ಮಂದಿ ಸಹೋದರಿಯರು (ETV Bharat)
author img

By ETV Bharat Karnataka Team

Published : Sep 5, 2024, 6:23 PM IST

Updated : Sep 5, 2024, 6:41 PM IST

ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಮಂಗಳಗೌರಿ ಎಂ ಹೆಚ್​ ಮಾತನಾಡಿದರು (ETV Bharat)

ದೊಡ್ಡಬಳ್ಳಾಪುರ : ಎರಡು ಕೊಠಡಿಗಳ ಸರ್ಕಾರಿ ಶಾಲೆಯನ್ನ 10 ಕೊಠಡಿಗಳ ವಿಶಾಲ ಶಾಲೆಯಾಗಿ ಮಾಡಿದ್ದಲ್ಲದೇ, ಶಾಲೆಗೆ ಹೈಟೆಕ್ ಸ್ವರ್ಶ ನೀಡಿದ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ. ಶಿಕ್ಷಕ ಮನೆತನದ ಹಿನ್ನೆಲೆ ಹೊಂದಿರುವ ಅವರ ಒಡಹುಟ್ಟಿದ ಆರು ಮಂದಿ ಸಹೋದರಿಯರೂ ಟೀಚರ್ಸ್​​. ಕೈಹಿಡಿದ ಗಂಡ ಶಿಕ್ಷಕ ಹಾಗೂ ಮಗಳು ಸಹ ಮೇಷ್ಟ್ರಾಗಿರುವುದು ವಿಶೇಷವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಿ ಎಂ. ಹೆಚ್ ಅವರಿಗೆ 2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ತಮ್ಮ 21ನೇ ವಯಸ್ಸಿನಲ್ಲೇ ಶಿಕ್ಷಕ ವೃತ್ತಿಯನ್ನ ಆರಂಭಿಸಿರುವ ಅವರು, 34 ವರ್ಷಗಳವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಾವಿರಾರು ಮಕ್ಕಳಿಗೆ ವಿದ್ಯೆಯನ್ನ ಧಾರೆ ಎರೆದಿದ್ದಾರೆ.

2016ರಲ್ಲಿ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಂದ ಅವರು, ಶಾಲೆಯ ವಾತಾವರಣವನ್ನ ಬದಲಾಯಿಸಿದರು. ಎರಡು ಕೊಠಡಿಯಿದ್ದ ಶಾಲೆಯನ್ನ ಇವತ್ತು 10 ಕೊಠಡಿಗಳ ವಿಶಾಲ ಶಾಲೆಯನ್ನಾಗಿ ಬದಲಾಯಿಸಿದ್ದಾರೆ. ದಾನಿಗಳು ಮತ್ತು ವಿವಿಧ ಕಂಪನಿಗಳ ಸಿಎಸ್​ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಎರಡು ಎಕರೆ ವಿಸ್ತೀರ್ಣ ಇರುವ ಶಾಲೆಯನ್ನ ಉದ್ಯಾನವನದಂತೆ ಬದಲಾಯಿಸಿದ್ದಾರೆ. ಇದರ ಜೊತೆಯಲ್ಲಿ ಸೋಲಾರ್, ವಿದ್ಯುತ್, ಕಂಪ್ಯೂಟರ್, ವಿಶಾಲವಾದ ಡೈನಿಂಗ್ ಹಾಲ್ ಮತ್ತು ಹೈಟೆಕ್ ಶೌಚಾಲಯದ ಸೌಲಭ್ಯವನ್ನ ಶಾಲೆಗೆ ತರುವಲ್ಲಿ ಶ್ರಮಿಸಿದ್ದಾರೆ.

teachers
ಶಿಕ್ಷಕಿಯರು (ETV Bharat)

ರಾಜ್ಯ ಮಟ್ಟದ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿರುವ ಮಂಗಳಗೌರಿ ಎಂ. ಹೆಚ್ ಅವರನ್ನ ಗಣ್ಯರು ಸನ್ಮಾನಿಸುವ ಮೂಲಕ ಅಭಿನಂದಿಸಿದ್ದಾರೆ. ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಭಾರತ ಸೇವಾದಳ ತಾಲೂಕು ಅಧ್ಯಕ್ಷರಾದ ಆರ್. ವಿ ಮಹೇಶ್ ಕುಮಾರ್, ಮಂಗಳಗೌರಿಯವರು ವಿದ್ಯಾರ್ಥಿಗಳನ್ನ ತಮ್ಮ ಮಕ್ಕಳಂತೆ ಕಂಡವರು. ತಮ್ಮ 34 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿರುವುದು ನಮಗೂ ಖುಷಿ ತಂದಿದೆ ಎಂದರು.

ಶಿಕ್ಷಕ ವೃತ್ತಿಯಿಂದ ಜೀವನ ಸಾರ್ಥಕ: ಈ ಬಗ್ಗೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಮುಖ್ಯಶಿಕ್ಷಕಿ ಮಂಗಳಗೌರಿ ಎಂ. ಹೆಚ್ ಅವರು ಮಾತನಾಡಿ, 'ಸರ್ಕಾರಿ ಶಾಲೆ ಶಿಕ್ಷಕರಾಗಲೇಬೇಕು, ಇದರಿಂದ ಜೀವನ ಸಾರ್ಥಕವಾಗುತ್ತೆ ಎಂಬುದಕ್ಕೆ ಕೆಲವು ಉದಾಹರಣೆಗಳಿವೆ. ನಮ್ಮ ವಿದ್ಯಾರ್ಥಿಗಳು ವಿವಿಧ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಆಗಿದ್ದಾರೆ. ಜೊತೆಗೆ ಒಳ್ಳೊಳ್ಳೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ವಿದ್ಯಾರ್ಥಿಗಳು ಈಗಲೂ ಕೂಡ ಫೋನ್ ಮಾಡಿ ತಮ್ಮ ಅಭಿಪ್ರಾಯ, ಅನಿಸಿಕೆ ತಿಳಿಸುತ್ತಾರೆ. ನಾವು ಹೇಗೆ ಅವರಿಗೆ ಪಾಠ ಮಾಡುತ್ತಿದ್ದೆವು ಎಂಬುದನ್ನ ಹೇಳಿಕೊಂಡಾಗ ನಮ್ಮ ಶಿಕ್ಷಕ ವೃತ್ತಿಯಿಂದ ಜೀವನ ಸಾರ್ಥಕವಾಯಿತು ಎಂದು ಅನ್ನಿಸುತ್ತೆ' ಎಂದಿದ್ದಾರೆ.

ರಾಜ್ಯಕ್ಕೆ ಮಾದರಿಯಾಗಿದ್ದಾರೆ : ಮುಖಂಡರಾದ ರವಿಸಿದ್ಧಪ್ಪ ಮಾತನಾಡಿ, 'ಮಂಗಳಗೌರಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಸುಖಾಸುಮ್ಮನೆ ಸಿಕ್ಕಿಲ್ಲ. ಏನೂ ಇಲ್ಲದ ಶಾಲೆಗೆ ಅತ್ಯಾಧುನಿಕ ಸೌಲಭ್ಯಗಳನ್ನ ತರುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿರೋದು ತೂಬಗೆರೆ ಹೋಬಳಿಗೆ ಗೌರವ ತಂದಿದೆ' ಎಂದು ಹೇಳಿದ್ದಾರೆ.

ಇದೇ ವೇಳೆ, ವಕೀಲರಾದ ಆರ್. ವಿ ಮನುಕುಮಾರ್, ನಿವೃತ್ತ ಶಿಕ್ಷಕರಾದ ಶಿವಕುಮಾರ್, ಸಹ ಶಿಕ್ಷಕರಾದ ಎನ್. ಪೂಜಪ್ಪ, ಬಿ. ಎಂ ಉಷಾರಾಣಿ, ರಘು ವೈ, ಅಡುಗೆ ಸಿಬ್ಬಂದಿ ಸುಧಾ, ನಾಗರತ್ನಮ್ಮ ಇದ್ದರು.

ಇದನ್ನೂ ಓದಿ : ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ: ಸಿಎಂ ಸಿದ್ದರಾಮಯ್ಯರಿಂದ ಶಿಕ್ಷಕರಿಗೆ ಕಿವಿಮಾತು - Teachers Day celebration

Last Updated : Sep 5, 2024, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.