ಹಾವೇರಿ: ರಾಜ್ಯದ ಆರೋಗ್ಯ ಇಲಾಖೆ ಐಸಿಯುನಲ್ಲಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಟೀಕಿಸಿದರು.
ಸರಿಯಾಗಿ ಔಷಧಿ ಸಿಗ್ತಿಲ್ಲ. ಪ್ರತೀ ತಿಂಗಳು ಇಂಡೆಂಟ್ ಹಾಕ್ತಿದ್ದಾರೆ. ಪ್ರಮುಖ ಔಷಧಿಗಳನ್ನು ಯಾಕೆ ಸ್ಟಾಕ್ ಇಡಲ್ಲ. ಇದು ಸರ್ಕಾರ ಹಣಕಾಸಿನ ದಿವಾಳಿಯಾಗಿರುವ ಕುರುಹು ಎಂದರು.
ಸಾರ್ವಜನಿಕ ಆಸ್ಪತ್ರೆ ದರ ಹೆಚ್ಚಿಸಿದ್ದಾರೆ. ಬಾಣಂತಿಯರ ಸಾವಾಗಿದೆ. ಸಾವಿಗೆ ಏನ್ ದುಡ್ಡು ಕೊಟ್ಟರೂ ಪರಿಹಾರ ಸಿಕ್ಕಂತಾಗದು ಎಂದು ಹೇಳಿದರು.
ಇದುವರೆಗೂ ಒಂದು ತಲೆ ದಂಡ ಆಗಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?. ಇದು ಅಕ್ಷಮ್ಯ ಅಪರಾಧ ಎಂದರು.
ಆರೋಗ್ಯ ಇಲಾಖೆಯೇ ರೋಗಗ್ರಸ್ಥವಾಗಿದೆ. ಶಾಲೆ, ಆಸ್ಪತ್ರೆ ಯಾವುದೂ ಸರಿ ಇಲ್ಲ. ಸಾರ್ವಜನಿಕರ ಅಹವಾಲು ಹಾಗೂ ಅವುಗಳ ಸೂಕ್ತ ಪರಿಹಾರಕ್ಕಾಗಿ ಜನ ಸಂಪರ್ಕ ಕಾರ್ಯಾಲಯ ಮಾಡಿದ್ದೇನೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕೆಲಸ ಕಾರ್ಯಗಳಿಗೆ ಅಹವಾಲು ತಗೊಂಡು ಬರ್ತಾರೆ. ನಮ್ಮ ಕಚೇರಿಯಿಂದ ಬಂದಂತ ಪತ್ರಗಳು ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಸಕಾರಾತ್ಮಕ ಸ್ಪಂದನೆ ಮಾಡಬೇಕಾಗುತ್ತದೆ. ಈ ಕಚೇರಿಯಲ್ಲಿ ಹಲವು ಸಭೆ ಮಾಡಬೇಕಾಗುತ್ತೆ. ಗುರುವಾರ ಹಾವೇರಿ ಜಿಲ್ಲೆಗೆ ಮೀಸಲಿಡುತ್ತೇನೆ, ಶುಕ್ರವಾರ ಗದಗ ಜಿಲ್ಲೆಗೆ ಮೀಸಲಿಡುತ್ತೇನೆ ಎಂದು ತಿಳಿಸಿದರು.
ಹಾವೇರಿ ತಾಲೂಕು ಪಂಚಾಯಿತಿ ಕಚೇರಿ ಬಳಿ ಜನ ಸಂಪರ್ಕ ಕಾರ್ಯಾಲಯ ಹುಕ್ಕೇರಿ ಮಠದ ಸದಾಶಿವ ಶ್ರೀ ಉದ್ಘಾಟಿಸಿದರು.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿನ ಬಗ್ಗೆ ಪರಿಶೀಲನೆ: ಸಿಎಂ ಸಿದ್ದರಾಮಯ್ಯ