ETV Bharat / state

ಸಿಎಂ ಬಳಿಗೆ ರಿವಾಲ್ವರ್​ ತೆಗೆದುಕೊಂಡು ಹೋಗ್ತಾರೆ ಎಂದರೆ, ತಾಲಿಬಾನ್​ ಸರ್ಕಾರವಲ್ಲದೇ ಮತ್ತೇನು?: ಪಿ ರಾಜೀವ್ ಪ್ರಶ್ನೆ - P Rajeev

author img

By ETV Bharat Karnataka Team

Published : Apr 9, 2024, 7:57 PM IST

Updated : Apr 9, 2024, 8:20 PM IST

ಸಿಎಂ ಸಿದ್ದರಾಮಯ್ಯ ಬಳಿ ರಿವಾಲ್ವರ್​ ತೆಗೆದುಕೊಂಡು ಹೋಗಿರುವ ವಿಚಾರವಾಗಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್ ಕಿಡಿಕಾರಿದ್ದಾರೆ.

ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್
ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್

ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್ ವಾಗ್ದಾಳಿ

ಚಿಕ್ಕೋಡಿ : ಮಾನ್ಯ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ರಿವಾಲ್ವರ್​ ತೆಗೆದುಕೊಂಡು ಹೋಗುತ್ತಾರೆ ಎಂದರೆ, ಇದು ತಾಲಿಬಾನ್​ ಸರ್ಕಾರವಲ್ಲದೇ ಮತ್ತೇನು? ಎಂದು ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್ ಪ್ರಶ್ನಿಸಿದ್ದಾರೆ. ಮಂಗಳವಾರ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗವಾಗಿ ಸಿಎಂ ಬಳಿ ರಿವಾಲ್ವರ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಪರೋಕ್ಷ ತಾಲಿಬಾನ್ ಮಾದರಿ ಆಡಳಿತ ನಡೆಯುತ್ತಿದೆ. ಮುಖ್ಯಮಂತ್ರಿ ಬಳಿ ರಿವಾಲ್ವರ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿದೆ. ಮುಖ್ಯಮಂತ್ರಿ ಬಳಿ ರಿವಾಲ್ವರ್ ತೋರಿಸಿ ಯಾರನ್ನೂ ಹೆದರಿಸಲು ನೀವು ನೋಡುತ್ತಿದ್ದೀರಿ?. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರು ಇವತ್ತು ಎಸಿ ರೂಮಿನಲ್ಲಿ ಕುಳಿತಿದ್ದಾರೆ. ರಾಜ್ಯದ ಒಬ್ಬ ಸಚಿವ ನರೇಂದ್ರ ಮೋದಿ ಹೆಸರನ್ನು ತೆಗೆದುಕೊಂಡರೆ ಕಪಾಳಕ್ಕೆ ಹೊಡಿರಿ ಎನ್ನುತ್ತಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಪಘಾತವಾದ ವ್ಯಕ್ತಿಗೆ ಸಹಾಯ ಮಾಡಬಾರದೇ? : ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಾಳುವನ್ನು ರಕ್ಷಿಸಿದ್ದ ವ್ಯಕ್ತಿಯ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅಪಘಾತಗೊಳಗಾದವರ ಜೀವ ಉಳಿಸಬೇಕೆಂದು ಸುಪ್ರಿಂಕೋರ್ಟ್ ಸೂಚನೆಯಿದೆ. ಈತ ಅಪಘಾತ ಮಾಡಿವನಲ್ಲ. ಆದರೂ ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದವನ ಮೇಲೆ ಪೊಲೀಸರ ದೌರ್ಜನ್ಯ ನಡೆದಿದೆ. ಅವನ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಯಾವ ರೀತಿಯ ಆಡಳಿತವನ್ನು ನೀವು ರಾಜ್ಯದಲ್ಲಿ ಕೊಡುತ್ತಿದ್ದೀರಾ?. ಒಂದು ಸಮುದಾಯ ತುಷ್ಟೀಕರಣವನ್ನು ಎಲ್ಲಿಗೆ ಮುಟ್ಟಿಸುತ್ತಿದ್ದೀರಿ? ಎಂದು ರಾಜೀವ್​ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸುವ ಪ್ರಕರಣಗಳು ನಡೆಯುತ್ತಿದೆ. ಇನ್ನೊಬ್ಬರ ಆಸ್ತಿಯನ್ನು ಅತಿಕ್ರಮಣ ಮಾಡುವುದು ಯಥೇಚ್ಛವಾಗಿ ನಡೆಯುತ್ತಿದೆ. ಮುಖ್ಯಮಂತ್ರಿಗಳನ್ನು ರಕ್ಷಣೆ ಮಾಡುವುದಕ್ಕೆ ಸಾಧ್ಯವಿಲ್ಲದಷ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಸಿಎಂ ಒಂದು ಪಕ್ಷದ ಆಸ್ತಿಯಲ್ಲ. ಸಿದ್ದರಾಮಯ್ಯ ಅವರು ವೈಯಕ್ತಿಕ ಅಲ್ಲ. ಈ ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ರಾಜ್ಯ ಒಬ್ಬ ಪ್ರಜೆಯಾಗಿ ಸಿಎಂ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಇದನ್ನೂ ಓದಿ : ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್​​ಕುಮಾರ್ - Geetha Shivarajkumar Ugadi

Last Updated : Apr 9, 2024, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.