ETV Bharat / state

ಒಂದೇ ವೇದಿಕೆಯಲ್ಲಿ ಕಾಂಗ್ರೆಸ್, ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ: ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಲಿದೆ ಮೈಸೂರು - Congress BJP Rally - CONGRESS BJP RALLY

ಮೈಸೂರಿನ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಜನಾಂದೋಲನ ಮತ್ತು ಬಿಜೆಪಿ ಜೆಡಿಎಸ್ ಪಕ್ಷಗಳ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮಕ್ಕೆ ಸಿದ್ಧವಾದ ಬೃಹತ್ ವೇದಿಕೆ
ಕಾರ್ಯಕ್ರಮಕ್ಕೆ ಸಿದ್ಧವಾದ ಬೃಹತ್ ವೇದಿಕೆ (ETV Bharat)
author img

By ETV Bharat Karnataka Team

Published : Aug 8, 2024, 9:31 PM IST

ಮೈಸೂರು: ಒಂದೇ ಊರು, ಒಂದೇ ಮೈದಾನ, ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯ ಶಕ್ತಿ ಪ್ರದರ್ಶನದ ಸಮಾರಂಭಕ್ಕೆ ಇಲ್ಲಿನ ಮಹಾರಾಜ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಹೌದು, ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲಿ ಪ್ರತಿಪಕ್ಷಗಳ ಮೈಸೂರು ಚಲೋ ಪಾದಯಾತ್ರೆ ಮತ್ತು ಕಾಂಗ್ರೆಸ್ ಪಕ್ಷದ ಜನಾಂದೋಲನದ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆದಿದ್ದು, ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕಾಲೇಜು ಮೈದಾನದಲ್ಲಿ ಸಿದ್ಧವಾಗಿರುವ ಬೃಹತ್‌ ವೇದಿಕೆಯಲ್ಲಿ ಶುಕ್ರವಾರ ಕಾಂಗ್ರೆಸ್‌ ಪಕ್ಷದ ಜನಾಂದೋಲನ ಸಮಾರಂಭ ನಡೆಯಲಿದೆ. ಇದೇ ವೇದಿಕೆಯಲ್ಲಿ ಶನಿವಾರ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷ ಮೈಸೂರು ಚಲೋ ಸಮಾರೋಪ ಸಮಾರಂಭ ಆಯೋಜಿಸಿವೆ. ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳು ಸಮಾರೋಪ ಸಮಾರಂಭಗಳಿಗೆ ಹೆಚ್ಚಿನ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದರಿಂದ ಆಸನ ವ್ಯವಸ್ಥೆ, ವೇದಿಕೆ, ಶಾಮಿಯಾನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್: ಸಾಮಾನ್ಯವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಮಾತ್ರ ಅತಿ ಹೆಚ್ಚು ಪೊಲೀಸ್‌ ಭದ್ರತೆ ಮಾಡಲಾಗುತ್ತದೆ. ಆದರೆ ಇದೀಗ ಎರಡು ಪಕ್ಷಗಳ ಸಮಾರೋಪ ಸಮಾರಂಭದ ಕಾರ್ಯಕ್ರಮಗಳು ಒಂದೇ ಕಡೆ ನಡೆಯಲಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಂದಾಜು 2 ಸಾವಿರಕ್ಕೂ ಹೆಚ್ಚು ಪೊಲೀಸರು, 60ಕ್ಕೂ ಹೆಚ್ಚು ಕೆಎಸ್​​ಆರ್​​ಪಿ ತುಕಡಿಗಳು, 30ಕ್ಕೂ ಹೆಚ್ಚು ಡಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. 400ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಕಾರ್ಯಕ್ರಮದ ಸುತ್ತ ಹಾಗೂ ಸರ್ಕಲ್​​ಗಳಲ್ಲಿ ಮತ್ತು 400ಕ್ಕೂ ಹೆಚ್ಚು ಬಾಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ನಿತ್ಯ 6000 ಮಂದಿ ಪೊಲೀಸ್‌ ಹಾಗೂ ಇತರ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನ ಬಹುತೇಕ ಹೋಟೆಲ್​​ಗಳನ್ನು ಪೊಲೀಸರು ಹಾಗೂ ಇತರ ಅಧಿಕಾರಿಗಳಿಗಾಗಿ ಬುಕ್‌ ಮಾಡಲಾಗಿದೆ. ಮಹಾರಾಜ ಕಾಲೇಜು ಸುತ್ತ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಕಾರ್ಯಕ್ರಮಕ್ಕೆ ಸಿದ್ಧವಾದ ಬೃಹತ್ ವೇದಿಕೆ
ಕಾರ್ಯಕ್ರಮಕ್ಕೆ ಸಿದ್ಧವಾದ ಬೃಹತ್ ವೇದಿಕೆ (ETV Bharat)

ಇದನ್ನೂ ಓದಿ: ಭ್ರಷ್ಟಾಚಾರವೇ ನಿಮ್ಮ ತಾಯಿ - ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ: ಮೈತ್ರಿ ನಾಯಕರ ವಿರುದ್ಧ ಡಿಕೆಶಿ ಟೀಕೆ - D k shivakumar

ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಆಗಸ್ಟ್ 3ರಂದು ಬೆಂಗಳೂರಿನಿಂದ ಪಾದಯಾತ್ರೆ ಕೈಗೊಂಡಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು, ಪಾದಯಾತ್ರೆ ನಡೆಯುವ ಕಡೆಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಜನಾಂದೋಲನ ಸಮಾವೇಶ ನಡೆಸಿ ತಿರುಗೇಟು ನೀಡುತ್ತಿದೆ.

ಮೈತ್ರಿ ಪಕ್ಷಗಳ ಪಾದಯಾತ್ರೆ ವಿಫಲ- ಸಚಿವ ಮಹದೇವಪ್ಪ: ಯಾವುದೇ ಹುರುಳಿಲ್ಲದ ಮುಡಾ ಪ್ರಕರಣವನ್ನು ಇಟ್ಟುಕೊಂಡು ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಪಾದಯಾತ್ರೆ ಮಾಡುತ್ತಿವೆ. ಈ ಪಾದಯಾತ್ರೆಗೆ ಜನರೇ ಬರುತ್ತಿಲ್ಲ. ಪಾದಯಾತ್ರೆಯಲ್ಲಿ ಮೂರು ಗುಂಪುಗಳಿದ್ದು, ಸಂಪೂರ್ಣ ವಿಫಲವಾಗಿದೆ. ಮೈತ್ರಿ ಪಕ್ಷಗಳು ರಾಜಪಾಲರನ್ನು ಬಳಸಿಕೊಂಡು ಸಿಎಂ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷ ಬಿಡದಿಯಿಂದ ಜನಾಂದೋಲನ ಸಮಾವೇಶ ಆರಂಭಿಸಿದ್ದು, ಮೈಸೂರನಲ್ಲಿ ನಾಳೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ರಾಜ್ಯಪಾಲರನ್ನು ಬಳಸಿ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಸಮಾರಂಭದಲ್ಲಿ ಸಾರಲಿದ್ದೇವೆ. ಇದಕ್ಕೆ ಲಕ್ಷಾಂತರ ಜನ ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಬಗ್ಗೆ ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಾಹಿತಿ ನೀಡಿದರು.

ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಅವರ ಅಣ್ಣ ಜಮೀನು ಗಿಫ್ಟ್‌ ನೀಡಿದ್ದರು. ಆ ಜಾಗವನ್ನು ಮುಡಾ ಭೂಸ್ವಾಧೀನ ಮಾಡಿಕೊಂಡಿದೆ. ಅದಕ್ಕೆ ಸಿದ್ದರಾಮಯ್ಯ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಹಾಕಿದ್ದರು. ಮುಡಾ ಬದಲಿ ನಿವೇಶನ ಕೊಟ್ಟಿದೆ. ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ. ಜೆಡಿಎಸ್‌, ಬಿಜೆಪಿ ಸುಮ್ಮನೆ ಆರೋಪ ಮಾಡುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಪಾತ್ರ ಏನೂ ಇಲ್ಲ ಎಂದು ಸಿದ್ದರಾಮಯ್ಯ ಪರ ಸಚಿವ ಜಮೀರ್‌ ಹೇಳಿಕೆ ನೀಡಿದರು.

ಇದನ್ನೂ ಓದಿ: ಮೈಸೂರು ಚಲೋಗೆ ಚಾಲನೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಗಾರಿ ಬಾರಿಸಿದ ದೋಸ್ತಿಗಳು! - Mysuru Chalo padayatra

ETV Bharat Logo

Copyright © 2025 Ushodaya Enterprises Pvt. Ltd., All Rights Reserved.