ETV Bharat / state

ಬೆಂಗಳೂರು: ರೇಣುಕಾಸ್ವಾಮಿ ಶವ ಎಸೆದಿದ್ದ ಜಾಗ ತೋರಿಸಿದ ಆರೋಪಿಗಳು - Renukaswamy Murder case - RENUKASWAMY MURDER CASE

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತದೇಹವನ್ನು ಬಿಸಾಡಿದ್ದ ಸ್ಥಳಕ್ಕೆ ನಾಲ್ಕು ಜನ ಆರೋಪಿಗಳನ್ನು ಕರೆದೊಯ್ದ ಪೊಲೀಸರು ಇಂದು ಸ್ಥಳ ಮಹಜರು ನಡೆಸಿದ್ದಾರೆ.

Renukaswamy Murder case - Spot verification
ರೇಣುಕಾಸ್ವಾಮಿ ಕೊಲೆ ಪ್ರಕರಣ - ಸ್ಥಳ ಮಹಜರು (ETV Bharat)
author img

By ETV Bharat Karnataka Team

Published : Jun 12, 2024, 2:25 PM IST

Updated : Jun 12, 2024, 3:26 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣ - ಸ್ಥಳ ಮಹಜರು (ETV Bharat)

ಬೆಂಗಳೂರು: ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಶರವೇಗದಲ್ಲಿ ಸಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಜನರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಇಂದು ಮೂವರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಿದ್ದ ಸ್ಥಳಕ್ಕೆ ಮೂವರು ಆರೋಪಿಗಳನ್ನು ಪೊಲೀಸರು ಕರೆದೊಯ್ದರು. ಈ ವೇಳೆ, ಶವ ಬಿಸಾಕಿರುವ ಸ್ಥಳವನ್ನು ಆರೋಪಿಗಳು ಪೊಲೀಸರಿಗೆ ತೋರಿಸಿದ್ದಾರೆ.

ಆರೋಪಿಗಳಾದ ಕಾರ್ತಿಕ್, ನಿಖಿಲ್ ಹಾಗೂ ರಾಘವೇಂದ್ರ ಅವರನ್ನು ಇಂದು ಮಧ್ಯಾಹ್ನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಕರೆತಂದರು. ಶವ ಬಿಸಾಕಿದ್ದ ಜಾಗವನ್ನು ಆರೋಪಿಗಳು ತೋರಿಸಿದರು. ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸಿ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು.

ಹಲ್ಲೆ ಬಳಿಕ ಹತ್ಯೆ ಮಾಡಲಾಗಿದ್ದ ಪಟ್ಟಣಗೆರೆಯ ಶೆಡ್​​ಗೆ ಸಂಜೆಯೊಳಗೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕರೆತಂದು, ಸ್ಥಳ ಮಹಜರಿಗೆ ಒಳಪಡಿಸಲಿದ್ದಾರೆ. ಶೆಡ್​ನಲ್ಲಿ ಎಷ್ಟು ಮಂದಿಯಿದ್ದರು. ಹಲ್ಲೆ ಮಾಡುವಾಗ ಹಾಗೂ ಹತ್ಯೆ ಬಳಿಕ ಯಾರೆಲ್ಲಾ ಸ್ಥಳದಲ್ಲಿದ್ದರು ಹಾಗೂ ಹಲ್ಲೆ ಮಾಡಲು ಬಳಸಿದ ವಸ್ತುಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಲಿದ್ದಾರೆ. ಒಂದು ವೇಳೆ ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ಎಲ್ಲಾದರೂ ಎಸೆದಿದ್ದರೆ, ಅದರ ಜಾಗವನ್ನೂ ಹುಡುಕಿ ವಸ್ತುಗಳನ್ನು ವಶಪಡಿಸಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಪಟ್ಟಣಗೆರೆ ಗೋದಾಮಿನಲ್ಲಿ ಎಫ್​​​ಎಸ್ಎಲ್ ತಂಡ ಸಾಕ್ಷ್ಯ ಸಂಗ್ರಹಿಸಿತ್ತು. ಇಂದು ಸಹ ಸ್ಥಳಕ್ಕೆ ಬಂದ ತಂಡವು ಸಿಗಬಹುದಾದ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ನಿರತವಾಗಿದೆ.

ಇದನ್ನೂ ಓದಿ: 'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

ವಾಹನಗಳು ವಶಕ್ಕೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ವಿನಯ್ ಮತ್ತು ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿರುವ ಕೆಂಪು ಬಣ್ಣದ ಒಂದು ಜೀಪ್, ಕಪ್ಪು ಬಣ್ಣದ ಸ್ಕಾರ್ಪಿಯೋ ಗಾಡಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಇನ್ನೂ ನಟ ದರ್ಶನ್​ ಪರ ವಕೀಲ ನಾರಾಯಣಸ್ವಾಮಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, 'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್ ಅಮಾಯಕ' ಎಂದು ತಿಳಿಸಿದ್ದಾರೆ. ನಟನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳದ ಅವರು, ನಿರಪರಾಧಿಗಳಿಗೆ ಯಾವ ರೀತಿಯಿಂದಲೂ ತೊಂದರೆಯಾಗಬಾರದು ಎಂದು ಹೇಳಿದರು.

Last Updated : Jun 12, 2024, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.