ETV Bharat / state

ಪ್ರಯಾಣಿಕರೇ ಗಮನಿಸಿ: ಘಾಟ್​ನಲ್ಲಿ ಸಂಚಾರ ಸಮಸ್ಯೆ; ಮಂಗಳೂರು - ಬೆಂಗಳೂರು ನಡುವೆ ವಿಶೇಷ ರೈಲು ಸೇವೆ - Special Train - SPECIAL TRAIN

ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು - ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ ಸೇವೆ ಒದಗಿಸಲು ನೈರುತ್ಯ ರೈಲ್ವೆಯು ಮುಂದಾಗಿದೆ.

train
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jul 19, 2024, 5:33 PM IST

ಹುಬ್ಬಳ್ಳಿ/ಮಂಗಳೂರು: ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ನೈರುತ್ಯ ರೈಲ್ವೆಯು ಮಂಗಳೂರು - ಬೆಂಗಳೂರು ನಡುವೆ ವಿಶೇಷ ಎಕ್ಸ್​ಪ್ರೆಸ್​​​ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ವಿಶೇಷ ರೈಲುಗಳು ಯಾವುವು ಹಾಗೂ ಯಾವ ದಿನಗಳಂದು ಸಂಚರಿಸಲಿವೆ ಎಂಬ ಮಾಹಿತಿ ಇಲ್ಲಿದೆ.

ಶಿರಾಡಿ ಘಾಟ್​​ನಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಸಂಪಾಜೆ ಘಾಟ್​​ನಲ್ಲಿ ರಾತ್ರಿ 8 ಗಂಟೆ ಬಳಿಕ ವಾಹನ ಸಂಚಾರಕ್ಕೆ ನಿಷೇಧವಿದೆ. ಇವೆರಡೂ ಕೂಡ ಮಂಗಳೂರು - ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳಾಗಿವೆ. ಚಾರ್ಮಾಡಿ ರಸ್ತೆಯ ಅಗಲ‌ ಕಿರಿದಾಗಿದ್ದು, ಎರಡೂ ರಸ್ತೆಗಳ ಸಂಚಾರ ಬಂದ್ ಆಗಿರುವುದರಿಂದ‌ ಚಾರ್ಮಾಡಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

South Western Railway
ನೈರುತ್ಯ ರೈಲ್ವೆ ಮಾಹಿತಿ (South Western Railway)

ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಆರಂಭಿಸಲಾಗಿದೆ. ಈ ಬಗ್ಗೆ ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ರೈಲ್ವೆ ಇಲಾಖೆಯು ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಸೇವೆಗೆ ಆದೇಶಿಸಿದೆ.

ವಿಶೇಷ ರೈಲುಗಳ ವಿವರ:

1. ಕೆಎಸ್ಆರ್ ಬೆಂಗಳೂರು - ಮಂಗಳೂರು ಜಂಕ್ಷನ್ - ಯಶವಂತಪುರ ಸ್ಪೆಷಲ್ ಎಕ್ಸ್​ಪ್ರೆಸ್ (ರೈಲು ಸಂಖ್ಯೆ 06547/06548): ರೈಲು ಸಂಖ್ಯೆ 06547 ಜುಲೈ 19ರಂದು ರಾತ್ರಿ 11 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಬೆಂಗಳೂರು ಕಂಟೋನ್ಮೆಂಟ್ (11:10/11:12 pm), ಎಸ್ಎಂವಿಟಿ ಬೆಂಗಳೂರು (11:25/11:27 pm), ಚಿಕ್ಕಬಾಣಾವರ (12:08/12:10 am), ನೆಲಮಂಗಲ (12:23/12:25 am), ಚನ್ನರಾಯಪಟ್ಟಣ (02:18/02:20 am), ಹಾಸನ (03:55/04:00 am), ಸಕಲೇಶಪುರ (04:50/05:00 am), ಸುಬ್ರಹ್ಮಣ್ಯ ರೋಡ್ (08:35/08:45 am) ಮತ್ತು ಕಬಕಪುತ್ತೂರು (09:33/09:35 am) ಹಾಗೂ ಬಂಟ್ವಾಳ (10:03/10:05 am) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 06548 ಜುಲೈ 20ರಂದು ಮಧ್ಯಾಹ್ನ 1:40ಕ್ಕೆ ಮಂಗಳೂರು ಜಂಕ್ಷನ್​ನಿಂದ ಹೊರಟು, ಅದೇ ದಿನ ರಾತ್ರಿ 11:15 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ಮಾರ್ಗದಲ್ಲಿ ಈ ರೈಲು ಬಂಟ್ವಾಳ (02:08/02:10 pm), ಕಬಕಪುತ್ತೂರು (02:38/02:40 pm), ಸುಬ್ರಹ್ಮಣ್ಯ ರೋಡ್ (03:20/03:30 pm), ಸಕಲೇಶಪುರ (05:50/06:00 pm), ಹಾಸನ (06:40/06:50 pm), ಚನ್ನರಾಯಪಟ್ಟಣ (07:28/07:30 pm), ನೆಲಮಂಗಲ (09:43/09:45 pm) ಮತ್ತು ಚಿಕ್ಕಬಾಣಾವರ (10:33/10:35pm) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

2. ಯಶವಂತಪುರ - ಮಂಗಳೂರು ಜಂಕ್ಷನ್ - ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ (06549/06550): ರೈಲು ಸಂಖ್ಯೆ 06549 ಜುಲೈ 21 ಮತ್ತು 22ರ ಮಧ್ಯರಾತ್ರಿ 12:30 ಗಂಟೆಗೆ ಯಶವಂತಪುರದಿಂದ ಹೊರಟು, ಅದೇ ದಿನ ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಚಿಕ್ಕಬಾಣಾವರ (12:40/12:42am), ನೆಲಮಂಗಲ (12:58/01:00am), ಚನ್ನರಾಯಪಟ್ಟಣ (03:08/03:10am), ಹಾಸನ (03:55/04:00am), ಸಕಲೇಶಪುರ (04:50/05:00am), ಸುಬ್ರಹ್ಮಣ್ಯ ರೋಡ್ (08:35/08:45 am), ಕಬಕಪುತ್ತೂರು (09:33/09:35 am) ಮತ್ತು ಬಂಟವಾಳ (10:03/10:05 am) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 06550 ಜುಲೈ 21 ಮತ್ತು 22ರಂದು ಮಧ್ಯಾಹ್ನ 1.40ಕ್ಕೆ ಮಂಗಳೂರು ಜಂಕ್ಷನ್​ನಿಂದ ಹೊರಟು, ಅದೇ ದಿನ ರಾತ್ರಿ 11.15ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ. ಮಾರ್ಗದಲ್ಲಿ ಈ ರೈಲು ಬಂಟ್ವಾಳ (02:08/02:10 pm), ಕಬಕಪುತ್ತೂರು (02:38/02:40 pm), ಸುಬ್ರಹ್ಮಣ್ಯ ರೋಡ್ (03:20/03:30pm), ಸಕಲೇಶಪುರ (05:50/06:00 pm), ಹಾಸನ (06:40/06:50 pm), ಚನ್ನರಾಯಪಟ್ಟಣ (07:28/07:30 pm), ನೆಲಮಂಗಲ (09:43/09:45 pm) ಮತ್ತು ಚಿಕ್ಕಬಾಣಾವರ (10:33/10:35 pm) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಈ ವಿಶೇಷ ರೈಲುಗಳು (06547/48 ಮತ್ತು 06549/50) ಎಸಿ-2 ಟೈಯರ್-2, ಎಸಿ-3 ಟೈಯರ್-2, ಸ್ಲೀಪರ್ ಕ್ಲಾಸ್-6, ಸಾಮಾನ್ಯ ದ್ವಿತೀಯ ದರ್ಜೆ-6 ಮತ್ತು ಎಸ್ಎಲ್ಆರ್/ಡಿ-2 ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರಲಿವೆ.

ಇದನ್ನೂ ಓದಿ: ನೈರುತ್ಯ ರೈಲ್ವೆ ಸೇವೆಯಲ್ಲಿ ಬದಲಾವಣೆ: ಯಾವಾಗ, ಯಾವ ರೈಲುಗಳ ಸಂಚಾರ.. ಇಲ್ಲಿದೆ ಮಾಹಿತಿ - South Western Railway

ETV Bharat Logo

Copyright © 2025 Ushodaya Enterprises Pvt. Ltd., All Rights Reserved.