ETV Bharat / state

ಹುಬ್ಬಳ್ಳಿ - ಜೋಗ್ ಫಾಲ್ಸ್ ನಡುವೆ ವಿಶೇಷ ಬಸ್​ಗೆ ಹೆಚ್ಚಿದ ಬೇಡಿಕೆ; ಬಸ್​ಗಳ ಸಂಖ್ಯೆ ಹೆಚ್ಚಳ - Jog Falls buses increased

author img

By ETV Bharat Karnataka Team

Published : Jul 12, 2024, 6:20 PM IST

ಹುಬ್ಬಳ್ಳಿ ಹಾಗೂ ಜೋಗ್​ ಫಾಲ್ಸ್ ನಡುವೆ ವಿಶೇಷ ಬಸ್​ಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಬಸ್​ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್​. ರಾಮನಗೌಡರ್ ತಿಳಿಸಿದ್ದಾರೆ.

Special Bus for Jog Falls View
ಜೋಗ್ ಫಾಲ್ಸ್ ವೀಕ್ಷಣೆಗೆ ವಿಶೇಷ ಬಸ್ (ETV Bharat)

ಹುಬ್ಬಳ್ಳಿ : ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಜೋಗ್ ಫಾಲ್ಸ್ ವೀಕ್ಷಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ವಿಶೇಷ ಬಸ್​ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಬಸ್​ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.

Airavata Club Class Bus
ಐರಾವತ ಕ್ಲಬ್ ಕ್ಲಾಸ್ ಬಸ್ (ETV Bharat)

ಕಳೆದ ಕೆಲ ದಿನಗಳಿಂದ ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೊತೆಗೆ ಸುತ್ತಲಿನ ರುದ್ರ ರಮಣೀಯ ನಿಸರ್ಗ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮನಸಿಗೆ ಮುದ ನೀಡುವ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ.

special-buses
ವಿಶೇಷ ಬಸ್​ (ETV Bharat)

ಕುಟುಂಬ ಸಮೇತ ಹೋಗಿ ಬರಲು ಅನುಕೂಲವಾಗುವಂತೆ ವಾರಂತ್ಯದಲ್ಲಿ ಜುಲೈ 14 ರಿಂದ ಪ್ರತಿ ಭಾನುವಾರ ಒಂದು ಮಲ್ಟಿ ಆಕ್ಸೆಲ್ ವೋಲ್ವೋ ಐರಾವತ ಎಸಿ ಹಾಗೂ ಒಂದು ರಾಜಹಂಸ ವಿಶೇಷ ಬಸ್​ನ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ, ವೈಯಕ್ತಿಕ ವಾಹನ ಪ್ರಯಾಣಕ್ಕಿಂತ ಹೆಚ್ಚು ಆರಾಮದಾಯಕ ಹಾಗೂ ಮಿತವ್ಯಯಕರವಾಗಿರುವುದರಿಂದ ಮಾಹಿತಿ ಪ್ರಕಟಿಸಿದ 48 ತಾಸುಗಳಲ್ಲಿ ಎರಡೂ ಬಸ್​ಗಳು ಭರ್ತಿಯಾಗಿದ್ದು, ಹೆಚ್ಚುವರಿ ಬಸ್​ಗಳಿಗಾಗಿ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಮಲ್ಟಿ ಆ್ಯಕ್ಸಲ್ ವೋಲ್ವೋ ಎಸಿ ಐರಾವತ ಬಸ್ ಹಾಗೂ ರಾಜಹಂಸ ಬಸ್​ನ ವ್ಯವಸ್ಥೆ ಮಾಡಲಾಗಿದೆ. ಈ ಬಸ್​ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.

www.ksrtc.in ಅಥವಾ KSRTC Mobile App ಮೂಲಕ ಆನ್​ಲೈನ್​ನಲ್ಲಿ ಹಾಗೂ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಜೋಗ ಜಲಪಾತದ ದೃಶ್ಯ ವೈಭವ ಕೆಲವೇ ದಿನಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಹಲವಾರು ನೌಕರರಿಗೆ ಭಾನುವಾರ ಕೆಲಸದ ದಿನವಾಗಿದ್ದು, ವಾರದ ಮಧ್ಯದಲ್ಲಿ ರಜೆ ಇರುತ್ತದೆ. ಅಂತಹವರಿಗೆ ಹಾಗೂ ಇತರ ಆಸಕ್ತರಿಗೆ ಅನುಕೂಲವಾಗುವಂತೆ ಶನಿವಾರ ಮತ್ತು ವಾರದ ದಿನಗಳಲ್ಲಿಯೂ ಸಹ ವಿಶೇಷ ಬಸ್​ನ ವ್ಯವಸ್ಥೆ ಮಾಡುವಂತೆ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಬೇಡಿಕೆ ಬರುತ್ತಿದೆ.

ಜುಲೈ 20ರಿಂದ ಶನಿವಾರ ಹಾಗೂ ಭಾನುವಾರ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ರಾಜಹಂಸ ಬಸ್​ಗೆ ಕನಿಷ್ಠ 35 ಹಾಗೂ ವೋಲ್ವೊ ಬಸ್​ಗೆ ಕನಿಷ್ಟ 45 ಜನ ಪ್ರಯಾಣಿಕರು ಇದ್ದಲ್ಲಿ ಅವರು ಬಯಸಿದ ದಿನ ಹಾಗೂ ಸಮಯಕ್ಕೆ ವಿಶೇಷ ಬಸ್​ನ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ದೂರವಾಣಿ ಸಂಖ್ಯೆ 7760 991682 / 7760 991674 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್​. ರಾಮನಗೌಡರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಜೋಗ ಜಲಪಾತದ ವೈಭವ ಸವಿಯಲು ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ - Special Bus For Jog Falls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.