ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಬಂಧನ ಸಂಬಂಧ ಜಾರಿ ನಿರ್ದೇಶನಾಲಯವು ವಿಧಾನಸಭೆ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇ.ಡಿ ಅಧಿಕಾರಿಗಳು ಬಂಧನ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇ-ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ನಿನ್ನೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಶಾಸಕ ಬಸನಗೌಡ ದದ್ದಲ್ ಅವರ ಬಗ್ಗೆ ಇನ್ನೂ ಯಾವ ಮಾಹಿತಿಯಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಅಧಿವೇಶನ ನಡೆಯುವಾಗ, ಶಾಸಕರು ಕಲಾಪದಲ್ಲಿ ಭಾಗಿಯಾಗಿದ್ದಾಗ, ಬಂಧನ ಮಾಡಬೇಕು ಎಂದರೆ ಸ್ಪೀಕರ್ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮದ ಆರೋಪವಾಗಿ ಇ.ಡಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರರನ್ನು ಮೊನ್ನೆ ಬಂಧನ ಮಾಡಿದ್ದರು. ನಿಯಮದ ಪ್ರಕಾರ ಶಾಸಕರನ್ನು ಬಂಧಿಸಿದ ಮಾಹಿತಿಯನ್ನು ತನಿಖಾ ಏಜೆನ್ಸಿಗಳು ವಿಧಾನಸಭೆ ಸಭಾಧ್ಯಕ್ಷರಿಗೆ ನೀಡಬೇಕು. ಅದರಂತೆ ಇ.ಡಿ ಅಧಿಕಾರಿಗಳು ಬಿ.ನಾಗೇಂದ್ರ ಬಂಧನ ಮಾಹಿತಿಯನ್ನು ಸ್ಪೀಕರ್ಗೆ ನೀಡಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ ನಾಗೇಂದ್ರ ಕುಟುಂಬಸ್ಥರ ಬ್ಯಾಂಕ್ ವಹಿವಾಟಿನ ಬಗ್ಗೆ ED ತನಿಖೆ - Valmiki Corporation Scam