ETV Bharat / state

ಇಲ್ಲದೇ ಇರುವ ಜಮೀನಿಗೆ ಹೇಗೆ ಪರ್ಯಾಯ ನಿವೇಶನ ಕೇಳ್ತಾರೆ?: ಟಿ.ಜೆ.ಅಬ್ರಹಾಂ - Social Activist T J Abraham

author img

By ETV Bharat Karnataka Team

Published : Aug 2, 2024, 9:18 PM IST

Updated : Aug 2, 2024, 9:40 PM IST

ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಈಗ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.

ಟಿ.ಜೆ.ಅಬ್ರಹಾಂ
ಟಿ.ಜೆ.ಅಬ್ರಹಾಂ (ETV Bharat)
ಟಿ.ಜೆ.ಅಬ್ರಹಾಂ (ETV Bharat)

ಬೆಂಗಳೂರು: ಕೆಸರೆ ಗ್ರಾಮದಲ್ಲಿ ಇಲ್ಲದೇ ಇರುವ ಜಮೀನಿಗೆ ಸಿದ್ದರಾಮಯ್ಯ ಪತ್ನಿ ಹೇಗೆ ಪರ್ಯಾಯ ಪರಿಹಾರ ನಿವೇಶನ ಪಡೆದುಕೊಳ್ಳುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಪ್ರಶ್ನಿಸಿದರು.

ಮುಡಾ ದಾಖಲೆಗಳನ್ನು ಮುಖ್ಯ ಕಾರ್ಯದರ್ಶಿಗೆ ನೀಡಲು ವಿಧಾನಸೌಧಕ್ಕೆ ಆಗಮಿಸಿ ಮಾತನಾಡಿದ ಅವರು, ಕೆಸರೆ ಗ್ರಾಮದಲ್ಲಿ ಇಲ್ಲದೇ ಇದ್ದ ಭೂಮಿಯನ್ನು ಖರೀದಿ ಮಾಡುತ್ತಾರೆ. ಅದನ್ನು ಭೂ ಪರಿವರ್ತನೆ ಮಾಡುತ್ತಾರೆ. ಇಲ್ಲದೇ ಇದ್ದ ಭೂಮಿಯನ್ನು ದಾನ ಪತ್ರ ಮಾಡುತ್ತಾರೆ. ಇಲ್ಲದಿದ್ದ ಜಮೀನಿಗೆ ಪರಿಹಾರವಾಗಿ ಪರ್ಯಾಯ ನಿವೇಶನ ಪಡೆದುಕೊಂಡಿದ್ದಾರೆ. 2004ರಲ್ಲಿ ಸರ್ವೆ ನಂ. 464ರ 3.16 ಎಕರೆ ಜಮೀನನ್ನು ದೇವರಾಜು ಸಿದ್ದರಾಮಯ್ಯರ ಭಾವಮೈದ ಮಲ್ಲಿಕಾರ್ಜುನರಿಗೆ ಮಾರಾಟ ಮಾಡುತ್ತಾರೆ. ಕೆಸರೆ ಗ್ರಾಮದ ಇದೇ ಸರ್ವೆ ನಂ.ನಲ್ಲಿ ದೇವನೂರು ಬಡಾವಣೆ 2001ರಲ್ಲಿ ನಿರ್ಮಾಣ ಆಗಿರುತ್ತದೆ. ನಿವೇಶನ, ರಸ್ತೆ, ಪಾರ್ಕ್‌ಗಳನ್ನು ಮಾಡಿ ಹಂಚಿಕೆ ಮಾಡಲಾಗಿದೆ. ಇದು ಕೃಷಿ ಭೂಮಿ ಹೇಗೆ ಆಗುತ್ತೆ?. ಯಾರಿಗೋ ಹಂಚಿಕೆಯಾದ ಜಮೀನನ್ನು ಕೃಷಿ ಭೂಮಿ ಎಂದು ಮಾರಾಟ ಮಾಡಲು ಸಾಧ್ಯವೇ ಎಂದರು.

ಯಾರಿಗೋ ಹಂಚಿಕೆಯಾದ ಜಮೀನನ್ನು ಇದು ನಮ್ಮ ಜಮೀನು ಎಂದು ಹೇಳಬಹುದಾ?. 2004ರಲ್ಲಿ ನೀವು ಖರೀದಿ ಮಾಡಿದಾಗ ಅದು ಕೃಷಿ ಭೂಮಿ ಎಲ್ಲಾಗಿತ್ತು?. ನೀವು ಖರೀದಿ ಮಾಡಿದ ಭೂಮಿ ಎಲ್ಲಿದೆ ಎಂಬುದನ್ನು ತೋರಿಸಿ. ಈಗಾಗಲೇ ಅಭಿವೃದ್ಧಿ ಗೊಂಡ ನಿವೇಶನವನ್ನು ಕೃಷಿ ಭೂಮಿ ಎಂದು ಖರೀದಿ ಮಾಡಿರುವುದು ತಪ್ಪಲ್ಲವೇ?. ಭೂ ಪರಿವರ್ತನೆಗೆ ತಹಶೀಲ್ದಾರ್ ಒಪ್ಪಿಗೆ ಕೊಡ್ತಾರೆ ಮತ್ತು ಸ್ಥಳ ಪರಿಶೀಲನೆ ಮಾಡುತ್ತಾರೆ. ಬಳಿಕ ಅದನ್ನು ಭೂ ಪರಿವರ್ತನೆ ಮಾಡಬಹುದು ಎಂದು ತಹಶೀಲ್ದಾರ್ ವರದಿ ಕೊಟ್ಟಿರುತ್ತಾರಂತೆ. ಡಿಸಿ ಕೂಡ ಸ್ಥಳಕ್ಕೆ ಹೋಗಿದ್ದರಂತೆ. ಈಗಾಗಲೇ ಹಂಚಿಕೆಯಾದ ನಿವೇಶನದಲ್ಲಿ ಅವರಿಗೆ ಕೃಷಿ ಭೂಮಿ ಎಂಬುದು ಎಲ್ಲಿ ಕಾಣಿಸಿತು?. ಹೀಗಿದ್ದಾಗ ಭೂ ಪರಿವರ್ತನೆ ಮಾಡಿರುವುದು ಅಪರಾಧವಲ್ಲವೇ? ಎಂದು ದೂರಿದರು.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಲ್ಲಿ ಸಿಎಂ ಇರಲಿ, ಡಿಸಿಎಂ, ಶಾಸಕನೇ ಇರಲಿ ನೇರವಾಗಿ ಅವರ ಸಹಿ ಇರಬೇಕಾಗಿಲ್ಲ. ಅವರ ಪ್ರಭಾವ ಬಳಸಿ ದುರ್ಬಳಕೆ ಆದಲ್ಲಿ ಅದು ಕೂಡ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ಒಳಪಡುತ್ತೆ. ಯಡಿಯೂರಪ್ಪ ಪ್ರಕರಣದಲ್ಲಿ ಅವರ ಸಹಿ ಎಲ್ಲಿತ್ತು?. ಬೋಗಸ್ ಕಂಪನಿಗಳಿಂದ ಹಣ ಪಡೆಯಲಾಗಿದೆ ಎಂದು ನಾನು ದೂರು ಕೊಟ್ಟ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರ ಸಹಿ ಇರಲಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ವ್ಯವಹಾರ ನಡೆದಿತ್ತು. ಹಾಗಾಗಿ ಇದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಬರುತ್ತದೆ ಎಂದು ಹೇಳಿದರು.

ನೇರವಾಗಿ ಸಿಎಂ ಅವರ ರುಜು ಇರುವ ಅಗತ್ಯ ಇಲ್ಲ‌. ಅವರು ಪ್ರಭಾವ ಬಳಸಿ ಡಿನೋಟಿಫೈ ಮಾಡಿದರೆ ಅದು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಬರುತ್ತೆ. 2001ರಲ್ಲಿ ಅಭಿವೃದ್ಧಿ ಮಾಡಲಾದ ಬಡವಾಣೆಯ ನಿವೇಶನಕ್ಕೆ 2010ರಲ್ಲಿ ದಾನಪತ್ರ ಆಗುತ್ತೆ. ಹಾಗಾದರೆ ಇದರಲ್ಲಿ ತಪ್ಪೇ ಇಲ್ವಾ?. 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕುತ್ತಾರೆ. ನಮಗೆ ಪರ್ಯಾಯ ಪರಿಹಾರ ನಿವೇಶನ ಕೊಡಿ ಅಂತ ಕೋರುತ್ತಾರೆ. ಅವರಿಗೆ ಯಾವ ಜಮೀನಿಗೆ ಪರಿಹಾರ ಕೊಡಬೇಕು. ನಿಮ್ಮ ಸಹೋದರ ಕೊಂಡುಕೊಂಡ ಕೃಷಿ ಭೂಮಿನೇ ಅಲ್ಲಿ ಇರಲಿಲ್ಲ. ದಾನಪತ್ರ ಮಾಡಿದಾಗಲೂ ಜಮೀನು ಇರಲಿಲ್ಲ. ಹಾಗಾದರೆ ಯಾವ ಜಮೀನಿಗೆ ಪರ್ಯಾಯ ಜಮೀನು ನೀಡಬೇಕು?. 2004ರಲ್ಲಿ ಜಮೀನು ಕೊಂಡಾಗ ಭಾವಮೈದ ಸ್ಥಳಕ್ಕೆ ಹೋಗದೇ ಜಮೀನು ತಗೊಂಡರಾ?.‌ ಜಮೀನು ಪರಿಶೀಲನೆ ಮಾಡದೇ ತಗೊಂಡರಾ?. ಆಗ ಕೃಷಿ ಭೂಮಿ ಇತ್ತಾ?. ಇದು ವಂಚನೆ ಅಲ್ವಾ?. ಡಿಕೆಶಿ ಈ ಬಗ್ಗೆ ಒನ್ ಟು ಒನ್ ಚರ್ಚೆಗೆ ಬರುತ್ತಾರಾ ಎಂದು ಸವಾಲು ಹಾಕಿದರು.

ಕೋರ್ಟ್ ಸುತ್ತೋಲೆಯನ್ನು ಸಚಿವರು ನೋಡಿಲ್ವೇ?: ಹೈಕೋರ್ಟ್ 23.9.2023ರಂದು ಒಂದು ಸುತ್ತೋಲೆ ಹೊರಡಿಸಿದೆ. ಸಚಿವರುಗಳು ಆ ಸುತ್ತೋಲೆ ಏನು ಎಂದು ನೋಡೇ ಇಲ್ವಾ?. ಜನಪ್ರತಿನಿಧಿ ವಿರುದ್ಧ ಪೊಲೀಸ್ ದೂರು ನೀಡಿದ ಬಳಿಕ ಕ್ರಮ ಕೈಗೊಳ್ಳದಿದ್ದರೆ ನಾವು ಪಿಸಿಆರ್​ಗೆ ಹೋಗಬೇಕು. ಕೋರ್ಟ್ ನಲ್ಲಿ ಪಿಸಿಆರ್​ಗೆ ಅರ್ಜಿ ಸಲ್ಲಿಸುವಾಗ ಅದಕ್ಕೆ ಪೂರ್ವಾನುಮತಿಯನ್ನು ಲಗತ್ತಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. 17Aಯಡಿ ತನಿಖಾ ಏಜೆನ್ಸಿಯವರು ಎಫ್ಐಆರ್ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆಯುವಂತೆಯೇ ಖಾಸಗಿ ವ್ಯಕ್ತಿ ಜನಪ್ರತಿನಿಧಿ ವಿರುದ್ಧ ಪಿಸಿಆರ್ ಅರ್ಜಿ ಸಲ್ಲಿಸುವಾಗ ಅಭಿಯೋಜನೆಯ ಪೂರ್ವಾನುಮತಿಯನ್ನು ಲಗತ್ತಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರು ಜು. 26ಕ್ಕೆ ದೂರು ಪಡೆದು ಅಂದೇ ಸಿಎಂಗೆ ನೋಟಿಸ್​ ಹೇಗೆ ಕೊಡುತ್ತಾರೆ. 200 ಪುಟಗಳ ದೂರಿನ ದಾಖಲೆಗಳನ್ನು ಓದದೇ ತರಾತುರಿಯಲ್ಲಿ ನೋಟಿಸ್​ ಕೊಟ್ಟಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ನಾನು ಒಂದು ವರೆ ಗಂಟೆ ರಾಜ್ಯಪಾಲರಿಗೆ ಅಕ್ರಮ ಬಗ್ಗೆ ಮನವರಿಕೆ ಮಾಡಿದ್ದೇನೆ. ಒಂದೊಂದು ಪ್ಯಾರಾ ಕೂಡ ವಿವರಣೆ ನೀಡಿದ್ದೇನೆ ಮತ್ತೆ ರಾಜ್ಯಪಾಲರು ಕೂತು ಓದುವ ಅಗತ್ಯ ಏನಿದೆ?. ಎಲ್ಲದಕ್ಕೂ ನಾನು ಸ್ಪಷ್ಟೀಕರಣವನ್ನು ರಾಜ್ಯಪಾಲರಿಗೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಶೋಭಾ ಕರಂದ್ಲಾಜೆ - Shobha Karandlaje

Last Updated : Aug 2, 2024, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.