ETV Bharat / state

ಮುಡಾ ಹಗರಣ: ಮೈಸೂರು ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ ಸ್ನೇಹಮಯಿ ಕೃಷ್ಣ - MUDA CASE

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಂದು ಮತ್ತೊಂದು ದೂರು ನೀಡಿ, ತನಿಖೆಗೆ ಒತ್ತಾಯಿಸಿದ್ದಾರೆ.

SNEHAMAYI KRISHNA ANOTHER COMPLAINT
ಮುಡಾ ಹಗರಣ: ಮೈಸೂರು ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ ಸ್ನೇಹಮಯಿ ಕೃಷ್ಣ (ETV Bharat)
author img

By ETV Bharat Karnataka Team

Published : Dec 5, 2024, 1:21 PM IST

ಮೈಸೂರು: ಮುಡಾದ 50:50 ಹಗರಣಕ್ಕೆ ಸಂಬಂಧಿಸಿದಂತೆ ಇಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಪತ್ರ ಕೊಟ್ಟು, ತನಿಖೆಗೆ ಮನವಿ ಮಾಡಿದ್ದಾರೆ.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮುಡಾ ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆದಿದೆ. ಆ ಅಕ್ರಮ ಹಣವನ್ನು ಅಧಿಕಾರಿಗಳು ತಮ್ಮ ಕುಟುಂಬಸ್ಥರ ಹೆಸರಲ್ಲಿ, ಬೇರೆ ಬೇರೆ ಕಂಪನಿಗಳಲ್ಲಿ ಹೂಡಿರುವಂತಹ ಮಾಹಿತಿ ಬಂದಿತ್ತು. ಇದಕ್ಕೆ ಪೂರಕವಾಗಿ ನನಗೆ ಈ ಸಿಕ್ಕಿರುವಂತಹ ದಾಖಲಾತಿ ಪ್ರಕಾರ ಹಿಂದಿನ ಆಯುಕ್ತರಾಗಿದ್ದ ಡಿ ವಿ ನಟೇಶ್​ ಅವರು, ಅವರ ಹೆಂಡತಿ ರಶ್ಮಿ ಅವರನ್ನು ಸುಮಾರು ನಾಲ್ಕು ಸಂಸ್ಥೆಗಳಲ್ಲಿ ನಿರ್ದೇಶಕಿಯನ್ನಾಗಿ ಅಂದ್ರೆ ಪಾಲುದಾರರನ್ನಾಗಿ ಮಾಡಿ ಅದರಲ್ಲಿ ಹಣ ಹೂಡಿರೋದು ಕಂಡುಬಂದಿದೆ. ನಾಲ್ಕು ಕಂಪನಿಗಳಿಗೆ ನಿರ್ದೇಶಕಿಯಾಗಿದ್ದಾರೆ. ಅದರಲ್ಲಿ ಅವರ ಹೆಂಡ್ತಿ ರಶ್ಮಿ ಅವರ ಹೆಸರಲ್ಲಿ ಹಣ ಹೂಡಿರುವುದು ಕಂಡುಬಂದಿರುತ್ತದೆ. ಬೋಗಾದಿಯಲ್ಲಿರುವ ಒಂದು ಅಪಾರ್ಟ್​ಮೆಂಟ್​ನಲ್ಲಿ ಫ್ಲ್ಯಾಟ್​ ಖರೀದಿ ಮಾಡಿರುವಂತದ್ದು, ಇಲವಾಲ ಹೋಬಳಿಯಲ್ಲಿ ಒಂದು ಎಕರೆ, 30 ಗುಂಟೆ ಜಮೀನು ಖರೀದಿ ಮಾಡಿರುವಂತಹ ದಾಖಲೆಗಳು ನನಗೆ ಲಭ್ಯವಾಗಿವೆ. ಇವತ್ತು ನಾನು ಲೋಕಾಯುಕ್ತದವರಿಗೆ ಮನವಿ ಪತ್ರ ಕೊಟ್ಟಿದ್ದೇನೆ.

ಸ್ನೇಹಮಯಿ ಕೃಷ್ಣ ಹೇಳಿಕೆ (ETV Bharat)

ಏನು 50:50 ನಿವೇಶನ ಹಂಚಿಕೆ ಅನ್ನೋದು ನಡೆದಿದೆಯೋ ಅದರಲ್ಲಿ ಪಡೆದಿರುವಂತಹ ಅಕ್ರಮ ಹಣವನ್ನು ಅಧಿಕಾರಿಗಳು ತಮ್ಮ ಕುಟುಂಬದ ಹೆಸರಿನಲ್ಲಿ ಅಥವಾ ತಮ್ಮ ಆಪ್ತರ ಹೆಸರಲ್ಲಿ ಹೂಡಿರುವಂತಹದ್ದು ಕಂಡುಬಂದಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಮತ್ತು ನಾನು ಮಾಡಿರುವ ಆರೋಪದಲ್ಲಿ ನಿಜ ಅಂತಾ ಕಂಡುಬಂದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿ ಅಂತಾ ಮನವಿ ಮಾಡಿದ್ದೇನೆ. ಇದೇ ರೀತಿಯಾಗಿ ಜಾರಿ ನಿರ್ದೇನಾಲಯಕ್ಕೂ ಕೂಡ ನಾನು ಒಂದು ದೂರನ್ನು ಕೊಟ್ಟಿದ್ದೇನೆ'' ಎಂದು ತಿಳಿಸಿದರು.

ಸಿದ್ದರಾಮಯ್ಯ ಪ್ರಭಾವವಿದೆ: ಪಾರ್ವತಿ ಸಿದ್ದರಾಮಯ್ಯ ಅವರಿಗೆ 50:50 ಅನುಪಾತದಲ್ಲಿ ಬದಲಿ ನಿವೇಶ ಪಡೆಯುವ ಬಗ್ಗೆ ಸಿದ್ದರಾಮಯ್ಯ ಅವರ ಮೌಖಿಕ ಪ್ರಭಾವವು ಇದೆ ಎಂದು ಹೇಳಿರುವ ಸ್ನೇಹಮಯಿ ಕೃಷ್ಣ ಇಂದು ರಿರ್ಫೋಟ್​ನಲ್ಲಿ ಸಿದ್ದರಾಮಯ್ಯ ಮೇಲ್ಮನವಿ ವಜಾ ಆಗುತ್ತದೆ. ಏಕೆಂದರೆ ಬಲವಾದ ಸಾಕ್ಷ್ಯಗಳೇ ಇಲ್ಲ ಎಂದು ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು.

ಇಡಿ ಪತ್ರ ತಪ್ಪೇನಿಲ್ಲ: ಇಲ್ಲಿಯವರೆಗೆ ಇಡಿ ನಡೆಸಿರುವ ತನಿಖೆಯ ಬಗ್ಗೆ ಪತ್ರದ ಮೂಲಕ ಲೋಕಾಯುಕ್ತಕ್ಕೆ ಮಾಹಿತಿ ನೀಡಿರುವುದು ತಪ್ಪಿಲ್ಲ. ತನಿಖಾ ಸಂಸ್ಥೆ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡುವುದು ಕಾನೂನು ಪ್ರಕಾರವೇ ಆಗಿದೆ ಎಂದು ಮಾಧ್ಯಮಾದವರ ಪ್ರ‍ಶ್ನೆಗೆ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.

ಇದನ್ನೂ ಓದಿ: ಮುಡಾ: ಅಕ್ರಮವಾಗಿ ಹಂಚಿಕೆ ಮಾಡಿರುವ 48 ನಿವೇಶನಗಳ ಖಾತೆ, ಕಂದಾಯ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.