ETV Bharat / state

ಯಾವುದೇ ದ್ವೇಷ ರಾಜಕಾರಣ ಇಲ್ಲ, SIT ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದೆ: ಗೃಹ ಸಚಿವ ಪರಮೇಶ್ವರ್ - G Parameshwar - G PARAMESHWAR

ಹೆಚ್.ಡಿ.ರೇವಣ್ಣ ಬಂಧನ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ (Etv Bharat)
author img

By ETV Bharat Karnataka Team

Published : May 5, 2024, 2:03 PM IST

ಗೃಹ ಸಚಿವ ಪರಮೇಶ್ವರ್ (Etv Bharat)

ಬೆಂಗಳೂರು: ಹಾಸನ ಪೆನ್​ಡ್ರೈವ್ ಪ್ರಕರಣ ಸಂಬಂಧ ಯಾವುದೇ ದ್ವೇಷ ರಾಜಕಾರಣ ಇಲ್ಲ. ಎಸ್​ಐಟಿ ಕಾನೂನಿನಂತೆ ಕ್ರಮ ತೆಗೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪ್ರಕರಣ ಸಂಬಂಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಹೆಚ್​ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅವರಿಗೆ ಬೇಸರವಾಗಿದೆ. ಹಾಗಾಗಿ ಹಾಗೆ ಹೇಳುತ್ತಾರೆ. ಆದರೆ ಎಸ್​ಐಟಿ ಕಾನೂನಿನಂತೆ ಕ್ರಮ ಕೈಗೊಂಡಿದೆ. ಎಸ್​ಐಟಿಯವರು ಒಂದು ವೇಳೆ ಕಾನೂನು ವಿರುದ್ಧವಾಗಿ ಹೋದರೆ ಅವರ ಮೇಲೂ ಆಪಾದನೆ ಬರುತ್ತದೆ. ಹಾಗಾಗಿ ಅವರು ಎಲ್ಲಾ ಎಚ್ಚರಿಕೆ ವಹಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು ಎಂದು ನಾವೂ ಸೂಚನೆ ನೀಡಿದ್ದೇವೆ ಎಂದರು.

ಎಸ್​ಐಟಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅವರು ಏನು ಮಾಡಲಿದ್ದಾರೆ ಎಂದು ನಾನು ಹೇಳಲು ಆಗಲ್ಲ. ಸಿಡಿ ಬಿಡುಗಡೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಎಸ್​ಐಟಿಯವರೇ ಪರಿಶೀಲನೆ ನಡೆಸುತ್ತಾರೆ ಎಂದರು. ಕಾರು ಚಾಲಕ ಕಾರ್ತಿಕ್ ಎಲ್ಲಿದ್ದಾರೆ ಎಂಬುದು ಎಸ್ಐಟಿಯವರಿಗೆ ಮಾತ್ರ ಗೊತ್ತಿರುತ್ತೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್​ಪೋಲ್​ಗೆ ತಿಳಿಸಿ, ಅವರು ಎಲ್ಲಾ ದೇಶಗಳನ್ನು ಸಂಪರ್ಕಿಸಲಿದ್ದಾರೆ. ಬಳಿಕ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಅದಾದ ಬಳಿಕ ಅವರನ್ನು ಹೇಗೆ ರಾಜ್ಯಕ್ಕೆ ತೆಗೆದುಕೊಂಡು ಬರಬೇಕು ಎಂಬ ಬಗ್ಗೆ ಎಸ್​ಐಟಿ ತೀರ್ಮಾನ ಮಾಡುತ್ತೆ. ಅದಕ್ಕೆ ಏನು ಸಹಕಾರ ಕೊಡಬೇಕೋ ಸರ್ಕಾರ ನೀಡುತ್ತೆ ಎಂದರು.

ಇದನ್ನೂ ಓದಿ: ನ್ಯಾಯಾಧೀಶರ ಮನೆಗೆ ಹೆಚ್‌.ಡಿ.ರೇವಣ್ಣ ಹಾಜರುಪಡಿಸಲು ಎಸ್​ಐಟಿ ಸಿದ್ಧತೆ - H D Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.