ETV Bharat / state

ಉಡುಪಿ: ಆಟಿ ಅಮಾವಾಸ್ಯೆ ಮಹತ್ವ, ಸಪ್ತಪರ್ಣಿ ಕಷಾಯದ ಹಿಂದಿದೆ ವೈಜ್ಞಾನಿಕ ಕಾರಣ - Ati amavasya

ಈ ಆಷಾಢ ಮಾಸದಲ್ಲಿ ಬರುವ ಆಟಿ ಅಮಾವಾಸ್ಯೆಯು ತುಳುವರಿಗೆ ವಿಶೇಷ. ಈ ದಿನದಂದು ಮನೆ ಮಂದಿಯೆಲ್ಲಾ ಹಾಲೆ ಮರದ ತೊಗಟೆಯ ಕಷಾಯ ಮಾಡಿ ಸೇವಿಸುತ್ತಾರೆ. ಹಾಗಾದರೆ ತುಳುವರ ಆಚರಣೆಯ ವಿಶೇಷ ಹಾಗೂ ಮಹತ್ವವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಟಿ ಅಮಾವಾಸ್ಯೆ
ಆಟಿ ಅಮಾವಾಸ್ಯೆ (ETV Bharat)
author img

By ETV Bharat Karnataka Team

Published : Aug 3, 2024, 6:03 PM IST

ಆಟಿ ಅಮಾವಾಸ್ಯೆ (ETV Bharat)

ಉಡುಪಿ: ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಹಾಗೂ ವಿಶಿಷ್ಟವಾದ ಪರಂಪರೆಗೆ ಖ್ಯಾತಿಯಾಗಿದೆ. ಆದರಲ್ಲಿ ಆಟಿ ಅಮಾವಾಸ್ಯೆಯೂ ಒಂದು. ಇದರಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಶಿಸ್ತು ಬದ್ಧ ಮತ್ತು ಕಠಿಣ ಪರಿಶ್ರಮದ ಜೀವನ ಶೈಲಿಯ ಜೊತೆಗೆ ಆಹಾರ ಕ್ರಮವು ಆರೋಗ್ಯವಂತರನ್ನಾಗಿ ಮಾಡುತ್ತದೆ. ಈ ತುಳು ನಾಡಿನಲ್ಲಿ ಆಟಿ ಅಮಾವಾಸ್ಯೆ ಆಚರಣೆಯ ಮಹತ್ವದ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ಆಟಿ ಅಮಾವಾಸ್ಯೆಯ ಸಂಪ್ರದಾಯ ಯಾವಾಗ ಪ್ರಾಂಭವಾಯಿತು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲದಿದ್ದರೂ ಪೂರ್ವಜರು ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಆಚರಣೆಯನ್ನು ಇಂದಿನವರು ಅನುಸರಿಸಿಕೊಂಡು ಬರುತ್ತಿದ್ದಾರೆ.

ಆಷಾಢ (ಆಟಿ ಅಮಾವಾಸ್ಯೆ) ಮಾಸದಲ್ಲಿ ಏನೆಲ್ಲಾ ಮಾಡಬೇಕು: ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದು ಪಾಲೆ(ಹಾಲೆ) ಮರದ ಕಷಾಯ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳು ನಾಡಿನ ಜನರು ಆಟಿ ಅಮಾವಾಸ್ಯೆಯ ದಿನದಂದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವೆರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನರದ್ದು.

ಪಾಲೆ ಮರದ ವಿಶಿಷ್ಟತೆ ಏನು? : ಆಟಿ ಕಷಾಯವನ್ನು ಪಾಲೆ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ಇದು ದೈವಿಕ ಸ್ಥಾನಮಾನವನ್ನು ಹೊಂದಿದ್ದು ಇದರ ವೈಜ್ಞಾನಿಕ ಹೆಸರು ಅಲ್ಸ್ಟೋನಿಯಾ ಸ್ಕಾಲರಿಸ್ ಎಂಬುದಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಗೊಂಚಲಲ್ಲು ಎಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು ಸಪ್ತಪರ್ಣಿ ಮರ ಅಂತಲೂ ಕೂಡ ಕರೆಯಲಾಗುತ್ತದೆ.

ಪಾಲೆ ಮರದ ಕಷಾಯ ಸೇವಿಸುವ ವಿಧಾನ ಹೇಗೆ: ಪಾಲೆ ಮರದ ತೊಗಟೆ ತರುವಾಗ ಬಹಳ ಜಾಗರೂಕರಾಗಿರಬೇಕು. ಅದಾಕ್ಕಾಗಿ ಇಲ್ಲಿನ ಜನರು ಹಿಂದಿನ ದಿನವೇ ಹೋಗಿ ಗುರುತು ಮಾಡಿ ಬಂದಿರುತ್ತಾರೆ. ಏಕೆಂದರೆ ಮುಂಜಾನೆ ಬೇಗ ಹೋಗಿ ಎದ್ದು ತರುವಾಗ ಪತ್ತೆ ಹಚ್ಚಲು ಸುಲಭವಾಗಲಿ ಎಂದು. ಮೊದಲೇ ಹಗ್ಗ ಕಟ್ಟಿ ಅಥವಾ ಬೇರಾವುದಾದರೂ ಗುರುತು ಮಾಡಿ ಬರುತ್ತಾರೆ. ಮಾತ್ರವಲ್ಲದೆ ಹಿಂದಿನ ದಿನ ಹಗ್ಗ ಕಟ್ಟಿ ರೋಗ ನಿವಾರಿಸುವ ಎಲ್ಲಾ ಗುಣಗಳನ್ನು ನೀಡು ಎಂದು ಪ್ರಕೃತಿ ಮಾತೆ ಬಳಿ ಪ್ರಾರ್ಥಿಸುತ್ತಾರೆ.

ಸೂರ್ಯೋದಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ ಆ ಮರದ ತೊಗಟೆಯನ್ನು ಲೋಹ ಅಥವಾ ಕಲ್ಲಿನಿಂದ ಕೆರೆದು ತರುತ್ತಾರೆ. ತೊಗಟೆಯನ್ನು ತಂದ ನಂತರ ಸೂರ್ಯೋದಯಕ್ಕೂ ಮುನ್ನ ತಂದ ಪಾಲೆ ಮರದ ತೊಗಟಿಗೆ ಜೀರಿಗೆ, ಅರಶಿನ ಮತ್ತು ಒಣ ಮೆಣಸಿನಕಾಯಿಗಳು ಸೇರಿದಂತೆ ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಅರೆದು ರಸವನ್ನು ತೆಗೆಯುತ್ತಾರೆ. ಈ ಮಸಾಲೆಗಳು ಜೀರ್ಣಕ್ರಿಯೆಗಳನ್ನು ಉತ್ತಮಗಳಿಸುವುದಲ್ಲದೇ ರುಚಿಯನ್ನು ಹೆಚ್ಚಿಸುತ್ತವೆ. ತದ ನಂತರ ಮನೆಯಲ್ಲಿರುವ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ.

ಪಾಲೆ‌ ಮರದ ಕಷಾಯ ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಆಸ್ತಮಾ ರೋಗದಿಂದ‌ ಪಾರು ಮಾಡುತ್ತದೆ. ಈ ಮರವು ಆರೋಗ್ಯವನ್ನು ಮುಂದಿನ ಆಟಿ ತನಕ ಕಾಪಾಡುತ್ತದೆ‌ ಎಂಬ ನಂಬಿಕೆ‌ ಇದೆ. ಜನಪದ ಸಂಶೋಧನಾ ಕೇಂದ್ರದ ಸಂಶೋಧನೆಯು ಅಮಾವಾಸ್ಯೆಯ ದಿನದಂದು ಸಂಗ್ರಹಿಸಿದ ತಿಳಿ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೇವೊನೈಡ್ ಎಂಬ ಪದಾರ್ಥವಿದೆ ಎಂದು ಸಾಬೀತು ಪಡಿಸಿದೆ. ಸಂಗ್ರಹಿಸಿದ ರಸವು ನೈಸರ್ಗಿಕ ಸ್ಟೀರಾಯ್ಡ್‌ಗಳು ಮತ್ತು ಟರ್ಪೆನೋಯ್ಡ್ಸ್​ಗಳನ್ನು ಹೊಂದಿರುವುದರ ಜೊತೆಗೆ, ರಸದ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಳೆ ಅಬ್ಬರ ತಗ್ಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ - Kalaseshwara Temple

ETV Bharat Logo

Copyright © 2024 Ushodaya Enterprises Pvt. Ltd., All Rights Reserved.