ETV Bharat / state

ರಾಜ್ಯ ಬಜೆಟ್: ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆಗಳೇನು?

ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್​ನಲ್ಲಿ ತವರು ಜಿಲ್ಲೆಗೆ ಒಂದಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವುಗಳ ವಿವರ ಇಲ್ಲಿದೆ.

ಮೈಸೂರು
ಮೈಸೂರು
author img

By ETV Bharat Karnataka Team

Published : Feb 16, 2024, 8:21 PM IST

ಮೈಸೂರು: ಬಜೆಟ್​ನಲ್ಲಿ ತವರು ಜಿಲ್ಲೆ ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಪ್ರಮುಖ ಕೊಡುಗೆಗಳು ಇಂತಿವೆ:

  1. ಮೈಸೂರಿನಲ್ಲಿ ಹಾಲಿ ಇರುವ 40 ಹಾಸಿಗೆಯ ನೆಪ್ರೋ-ಯೂರಾಲಜಿ ಆಸ್ಪತ್ರೆಯನ್ನು 100 ಹಾಸಿಗೆಯ
    ಆಸ್ಪತ್ರೆಯನ್ನಾಗಿ ಉನ್ನತೀಕರಣ.
  2. ಮೈಸೂರು ಮೆಡಿಕಲ್ ಕಾಲೇಜಿನ (ಎಂಎಂಸಿಆರ್‌ಐ) ಶತಮಾನೋತ್ಸವದ ನೆನಪಿಗಾಗಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ 75 ಕೋಟಿ ವೆಚ್ಚದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ.
  3. ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಹಾಗೂ Human Milk Bank ಘಟಕ ಸ್ಥಾಪನೆ.
  4. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 54 ಕೋಟಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ.
  5. ಪ್ರಖ್ಯಾತ ಲ್ಯಾನ್ಸ್‌ ಗೌಟ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ.
  6. ಮೈಸೂರಿನ ಹೊರವಲಯದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಎನ್.ಹೆಚ್.ಎ.ಐ ಸಹಯೋಗದೊಂದಿಗೆ ಮೇಲ್ಸೇತುವೆ ನಿರ್ಮಾಣ.
  7. ಕುಕ್ಕರಹಳ್ಳಿ ಹಾಗೂ ಕೆ.ಆರ್‌.ಎಸ್‌ ರಸ್ತೆಯ ರೈಲ್ವೆಯ ಮೇಲು ಸೇತುವೆ ಹಾಗೂ ಕೆಳಸೇತುವೆ
    ನಿರ್ಮಾಣ.
  8. ಎ.ಪಿ.ಎಂ.ಸಿ.ಯಲ್ಲಿ ಶೀತಲಗೃಹವನ್ನು 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವುದು.
  9. ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಯೋ-ಸಿಎನ್‌ಜಿ ಪ್ಲೆಂಟ್
    ಸ್ಥಾಪನೆ.
  10. ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು.

11. ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ 43 ಕೋಟಿ ಬಿಡುಗಡೆಗೊಳಿಸಿದೆ.

12. ವಿಜ್ಞಾನ ಕೇಂದ್ರ / ತಾರಾಲಯ ಹೊಸದಾಗಿ ಸ್ಥಾಪನೆ.

13. ಇಂಟಿಗ್ರೇಟೆಡ್ ಟೌನ್‌ಶಿಪ್​ಗಳನ್ನು ಅಭಿವೃದ್ಧಿ.

ಬಜೆಟ್ ಬಗ್ಗೆ ಗಣ್ಯರ ಹೇಳಿಕೆ :

1. ''2024-25ನೇ ರಾಜ್ಯ ಬಜೆಟ್ ಸಮತೋಲನವನ್ನು ಕಾಯ್ದುಕೊಂಡಿದೆ. ಇದು ಕೃಷಿ ಕ್ಷೇತ್ರ ಹಾಗೂ ಇತರ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ರಂಗಗಳನ್ನು ಒಳಗೊಂಡು ಸಮತೋಲನ ಕಾಯ್ದುಕೊಂಡ ಬಜೆಟ್ ಇದಾಗಿದೆ'' ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.

2. ''ಈ ಬಜೆಟ್ ಆಶಾದಾಯಕ ಅಲ್ಲದಿದ್ದರೂ ಸಮಾಧಾನಕರ ಬಜೆಟ್ ಆಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡಬೇಕಿತ್ತು'' ಎಂದು ಮೈಸೂರು ಕೈಗಾರಿಕೆಗಳ ಸಂಘದ ಸುರೇಶ್ ಕುಮಾರ್ ಜೈನ್ ಹೇಳಿಕೆ ನೀಡಿದ್ದಾರೆ.

3.''ಸಿದ್ದರಾಮಯ್ಯನವರು ಮಂಡಿಸಿರುವ ಈ ಬಾರಿಯ ಬಜೆಟ್ ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಾಯಕವಾಗಿದೆ. ಜೊತೆಗೆ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ಪುನರ್​ ನಿರ್ಮಾಣಕ್ಕೆ ಒತ್ತು ನೀಡಿದೆ'' ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.

4. ''ಈ ಬಾರಿಯ ಬಜೆಟ್ ಜನಸಾಮಾನ್ಯರ ಮತ್ತು ಅಲ್ಪಾವಧಿಯದ್ದಾಗಿದೆ. ರಾಜ್ಯದ ಅಭಿವೃದ್ಧಿಗೆ ದೀರ್ಘಾವಧಿಯ ಯೋಜನೆಗಳು ಮುಖ್ಯವಾಗಿವೆ. ಆ ಯೋಜನೆಗಳ ಬಗ್ಗೆ ಪ್ರಸ್ತಾವನೆ ಇದೆ. ಇದೊಂದು ರಾಜ್ಯದ ಅಭಿವೃದ್ಧಿಗೆ ಪೂರಕ ಬಜೆಟ್'' ಎಂದು ಅರ್ಥಶಾಸ್ತ್ರದ ಪ್ರೊಫೆಸರ್ ಟಿ ಎಸ್ ದೇವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಜೆಟ್‌ನಲ್ಲಿ 'ಭೂ ಸುರಕ್ಷಾ ಯೋಜನೆ' ಘೋಷಣೆ: ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.