ETV Bharat / state

ಮಂಗಳೂರು ದಸರಾ ಸಂಪನ್ನ; ಅದ್ಧೂರಿಯಾಗಿ ನಡೆದ ಶ್ರೀ ಶಾರದೆ, ನವದುರ್ಗೆಯರ ಮೆರವಣಿಗೆ

ಮಂಗಳೂರು ದಸರಾ ಹಿನ್ನೆಲೆ ಭಾನುವಾರ ಶ್ರೀ ಶಾರದೆ ಹಾಗೂ ನವದುರ್ಗೆಯರ ಮೆರವಣಿಗೆ ವೈಭವಯುತವಾಗಿ ಜರುಗಿತು.

Dasara
ಮಂಗಳೂರು ದಸರಾ (ETV Bharat)
author img

By ETV Bharat Karnataka Team

Published : Oct 13, 2024, 10:37 PM IST

Updated : Oct 13, 2024, 10:52 PM IST

ಮಂಗಳೂರು (ದಕ್ಷಿಣ ಕನ್ನಡ) : ವಿಶ್ವವಿಖ್ಯಾತ ಮಂಗಳೂರು ದಸರಾ ಹಿನ್ನೆಲೆ ಭಾನುವಾರ ಶ್ರೀ ಶಾರದಾಮಾತೆ, ನವದುರ್ಗೆಯರು ಹಾಗೂ ಶ್ರೀ ಮಹಾಗಣಪತಿ ದೇವರ ಆರಾಧನೆ ಸಂಪನ್ನಗೊಂಡು ಸಂಜೆಯ ಬಳಿಕ ವೈಭವದ ಮೆರವಣಿಗೆ ನಡೆಯಿತು.

ಕಳೆದ ಒಂಬತ್ತು ದಿನಗಳಿಂದ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನವದುರ್ಗೆಯರ ಆರಾಧನೆ ವೈಭವದಿಂದ ನಡೆದುಕೊಂಡು ಬಂದಿತ್ತು. 9 ದಿನಗಳಿಂದ ಶ್ರೀಕ್ಷೇತ್ರ ಕುದ್ರೋಳಿಯ ಕೊರಗಪ್ಪ ಸಭಾಂಗಣದಲ್ಲಿ ವಿವಿಧ ಅಲಂಕಾರಗಳಲ್ಲಿ ದರ್ಶನವೀಯುತ್ತಿದ್ದ ಶ್ರೀಶಾರದಾಮಾತೆಯು ಮಧ್ಯಾಹ್ನವಾಗುತ್ತಿದ್ದಂತೆ ವಿಶೇಷ ಅಲಂಕಾರದಲ್ಲಿ ಅಣಿಯಾಗಿದ್ದಳು. ಮೊಗ್ಗು ಮಲ್ಲಿಗೆಯ ಶಾರದಾ ಜಲ್ಲಿ, ವಿಶೇಷ ಪಟ್ಟೆ ಸೀರೆ, ವಿವಿಧ ಆಭರಣಗಳೊಂದಿಗೆ ಅಲಂಕೃತಳಾದ ಶಾರದಾ ಮಾತೆಗೆ ಮಧ್ಯಾಹ್ನದ ಬಳಿಕ ನಿಮಜ್ಜನ ಪೂಜೆ ನೆರವೇರಿತು.

ಅದ್ಧೂರಿಯಾಗಿ ನಡೆದ ಶ್ರೀ ಶಾರದೆ, ನವದುರ್ಗೆಯರ ಮೆರವಣಿಗೆ (ETV Bharat)

ಸಂಜೆಯಾಗುತ್ತಿದ್ದಂತೆ ಶೋಭಾಯಾತ್ರೆಗೆ ಸಿದ್ಧತೆ ನಡೆದು ಮೊದಲಿಗೆ ಶ್ರೀ ಮಹಾಗಣಪತಿ ದೇವರನ್ನು, ನವದುರ್ಗೆಯರನ್ನು ಆಕರ್ಷಕ ತೆರೆದ ವಾಹನದಲ್ಲಿ ಇಡಲಾಯಿತು. ನಂತರ ತಾಯಿ ಶಾರದೆಯನ್ನು ವಿಶೇಷ ವಾಹನದಲ್ಲಿ ಇರಿಸಿ ಆಕರ್ಷಕ ಶೋಭಾಯಾತ್ರೆಗೆ ನಾಂದಿ ಹಾಡಲಾಯಿತು.

ಶ್ರೀ ಮಹಾಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಾಹನ ಅನುಸರಿಸಿತು. ಜೊತೆಗೆ ಆಕರ್ಷಕ ಟ್ಯಾಬ್ಲೋಗಳು, ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಸೌಂದರ್ಯವನ್ನು ಹೆಚ್ಚಿಸಿತು. ಈ ಶೋಭಾಯಾತ್ರೆಯು ಸಂಜೆ ವೇಳೆಗೆ ಮಂಗಳೂರಿನಿಂದ ಹೊರಟು ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ. ಮೀ ದೂರ ಸಂಚರಿಸಿ ಸೋಮವಾರ ಮುಂಜಾನೆ ವೇಳೆಗೆ ಶ್ರೀಕ್ಷೇತ್ರಕ್ಕೆ ಮರಳಲಿದೆ. ಬಳಿಕ ಮೃಣ್ಮಯ ಮೂರ್ತಿಗಳು ದೇವಾಲಯದ ಕಲ್ಯಾಣಿಯಲ್ಲಿ ಜಲಸ್ತಂಭನಗೊಂಡು ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ : ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ: ವಿಶೇಷ ಪೂಜೆ, ಭಕ್ತರಿಗೆ ಕದಿರು ವಿತರಣೆ

Last Updated : Oct 13, 2024, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.