ETV Bharat / state

ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ: ಎರಡೂವರೆ ಲಕ್ಷ ಜನರಿಗೆ ಚಿಕನ್ ಬಿರಿಯಾನಿ - chitradurga

ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ 32 ಸಾವಿರ ಕೆ.ಜಿ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ.

Chicken biryani
ಚಿಕನ್ ಬಿರಿಯಾನಿ
author img

By ETV Bharat Karnataka Team

Published : Jan 28, 2024, 12:42 PM IST

Updated : Jan 28, 2024, 1:13 PM IST

ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆರಂಭವಾಗಿದೆ. ಸಮಾವೇಶಕ್ಕೆ ಆಗಮಿಸುವವರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ನಡೆದಿದೆ. ಆಯೋಜಕರು ಎರಡೂವರೆ ಲಕ್ಷ ಜನ ಸೇವಿಸಲು 32 ಸಾವಿರ ಕೆ.ಜಿ ಚಿಕನ್ ತಯಾರಿಸಿದ್ದಾರೆ. 150ಕ್ಕೂ ಹೆಚ್ಚು ಜನ ಬಾಣಸಿಗರು ಬಿರಿಯಾನಿ ಸಿದ್ಧಪಡಿಸಿದ್ದು, 1 ಸಾವಿರ ಕೌಂಟರ್​ಗಳಲ್ಲಿ ಬಿರಿಯಾನಿ, ಪಲಾವ್ ವಿತರಣೆ ಮಾಡಲಾಗುತ್ತಿದೆ.

ನಾಲ್ಕು ವೆಜ್ ಕೌಂಟರ್​ಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಶೋಷಿತರ ಸಮಾವೇಶವನ್ನು ಮಾದಾರ ಚನ್ನಯ್ಯ ಮಠದ ಬಳಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆಯೋಜಿಸಲಾಗಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಇತರೆ ಸಚಿವರು ಭಾಗಿಯಾಗಲಿದ್ದಾರೆ. ಜಾಗೃತಿ ಸಮಾವೇಶದಲ್ಲಿ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ಬೃಹತ್​ ವೇದಿಕೆ: ಸುಮಾರು 150 ಎಕರೆ ಪ್ರದೇಶದಲ್ಲಿ ಸಮಾವೇಶದ ವೇದಿಕೆಗೆ ಸಿದ್ಧವಾಗಿದೆ. ಮುಖ್ಯ ವೇದಿಕೆಯಲ್ಲಿ ಗಣ್ಯರಿಗೆ 270 ಆಸನಗಳ ವ್ಯವಸ್ಥೆ, ಎಡ ಮತ್ತು ಬಲ‌ ಬದಿಯ ವೇದಿಕೆಯಲ್ಲಿ ತಲಾ 150 ಆಸನ ವ್ಯವಸ್ಥೆಯಾಗಿದೆ. ಒಟ್ಟು ಮೂರುವರೆ ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯಲ್ಲಿ ಬಸವಣ್ಣ, ಅಂಬೇಡ್ಕರ್​ ಭಾವಚಿತ್ರ ಅಳವಡಿಸಲಾಗಿದೆ. 22 ಎಲ್​ಇಡಿ ಪರದೆ ಹಾಕಲಾಗಿದೆ.

ಜಾತಿ ಗಣತಿ ವರದಿ ಜಾರಿಗೆ ಒತ್ತಾಯ: ಕಾಂತರಾಜ್ ವರದಿ ಜಾರಿ, ಒಳ ಮೀಸಲಾತಿ ಜಾರಿ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶೋಷಿತ ಸಮುದಾಯದ ಮುಖಂಡರು ಮನವಿ ಸಲ್ಲಿಸಲಿದ್ದಾರೆ. ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸುವರು ಎಂದು ತಿಳಿದುಬಂದಿದೆ. ಬಂಜಾರ, ಬೋವಿ ಸಮುದಾಯಗಳ ಮುನಿಸಿನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬೋವಿ ಗುರುಪೀಠಕ್ಕೆ ಭೇಟಿ ನೀಡಿ ಮುನಿಸು ಶಮನಕ್ಕೆ ಯತ್ನಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು: ಇಸ್ಕಾನ್​ನಲ್ಲಿ 39ನೇ ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ

Last Updated : Jan 28, 2024, 1:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.