ETV Bharat / state

ಹಾವೇರಿ: ಅದ್ಧೂರಿಯಾಗಿ ನಡೆದ ಶಿಶುನಾಳ​ ಶರೀಫ, ಗುರು ಗೋವಿಂದ ಭಟ್ ಜಾತ್ರಾ ರಥೋತ್ಸವ - Shishunala Sharif

ಹಾವೇರಿಯಲ್ಲಿ ಶಿಶುನಾಳ​ ಶರೀಫ ಮತ್ತು ಗುರು ಗೋವಿಂದ ಭಟ್ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.

ಶಿಶುನಾಳ​ ಶರೀಫ, ಗುರು ಗೋವಿಂದಭಟ್ ರಥೋತ್ಸವ
ಶಿಶುನಾಳ​ ಶರೀಫ, ಗುರು ಗೋವಿಂದಭಟ್ ರಥೋತ್ಸವ
author img

By ETV Bharat Karnataka Team

Published : Mar 20, 2024, 11:03 AM IST

Updated : Mar 20, 2024, 12:43 PM IST

ಶಿಶುನಾಳ​ ಶರೀಫ, ಗುರು ಗೋವಿಂದ ಭಟ್ ಜಾತ್ರಾ ರಥೋತ್ಸವ

ಹಾವೇರಿ: ಕೋಮು ಸಾಮರಸ್ಯ ಸಾರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳ​ ಶರೀಫ ಮತ್ತು ಗುರು ಗೋವಿಂದ ಭಟ್​​ ರಥೋತ್ಸವ ವೈಭವದಿಂದ ನೆರವೇರಿದೆ. ಶಿಶುನಾಳ ಗ್ರಾಮದ ಶರೀಫಗಿರಿಯಲ್ಲಿ ನಡೆದ ಸಂಭ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗುರು ಗೋವಿಂದ ಭಟ್​​​ ಮತ್ತು ಶಿಶುನಾಳ ಶರೀಫರ ಬೆಳ್ಳಿಯ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ತರಲಾಯಿತು. ರಥದ ಸುತ್ತ ಪ್ರದಕ್ಷಿಣೆ ಮಾಡಿದ ನಂತರ ಮೂರ್ತಿಗಳನ್ನು ರಥದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು.

ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ಶಿಶುನಾಳ​ ಶರೀಫ ಮತ್ತು ಗುರು ಗೋವಿಂದ ಭಟ್ಟರಿಗೆ ಜಯಕಾರ ಹಾಕಿದರು. ರಥ ಎಳೆದು ಖುಷಿಪಟ್ಟರು. ರಥ ಸಾಗುತ್ತಿದ್ದಂತೆ ರಥದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣುಗಳನ್ನೆಸೆದರು. ರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಮತ್ತು ಬೃಹತ್​​ ರುದ್ರಾಕ್ಷಿ ಮಾಲೆಗಳು ವಿಶೇಷವಾಗಿ ಗಮನ ಸೆಳೆದವು.

ಮಹೋತ್ಸವದ ಅಂಗವಾಗಿ ಶಿಶುನಾಳ ಶರೀಫರ ಮತ್ತು ಗುರು ಗೋವಿಂದ ಭಟ್ಟರ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಶಿಶುನಾಳ ಶರೀಫರ ಗದ್ದುಗೆ ದರ್ಶನ ಪಡೆದರು.

ಮುಸ್ಲಿಮರು ಸಕ್ಕರೆ ನೈವೇದ್ಯ, ಹಿಂದುಗಳು ತೆಂಗಿನಕಾಯಿ, ಬಾಳೆಹಣ್ಣು ನೈವೇದ್ಯ ಅರ್ಪಿಸಿದರು. ಹಿಂದುಗಳು ಹರಹರ ಮಹಾದೇವ ಎಂದು ಘೋಷಣೆ ಕೂಗಿದರೆ, ಮುಸ್ಲಿಮರು ಈಶ್ವರ ಅಲ್ಲಾ ನೀನೇ ಎಲ್ಲಾ ಎಂದು ಪ್ರಾರ್ಥಿಸಿದರು.

ಶಿಶುನಾಳ್ ಶರೀಫ ಜಾನಪದ ಕವಿ, ಅನುಭಾವಿ ಕವಿ, ಕರ್ನಾಟಕದ ಕಬೀರ ಎಂದೇ ಖ್ಯಾತಿ ಪಡೆದವರು. ಸಂತ ತತ್ವಜ್ಞಾನಿ ಶಿಕ್ಷಕ ಸೇರಿದಂತೆ ಹಲವು ವ್ಯಕ್ತಿತ್ವದ ಶರೀಫರು ಶತಮಾನಗಳ ಹಿಂದೆಯೇ ಕೋಮು ಸಾಮರಸ್ಯದ ಸಂದೇಶ ಸಾರಿದವರು. ಶರೀಫರು ರಚಿಸಿದ ಕವಿತೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿವೆ. ಶಿಶುನಾಳದೀಶನ ಅಂಕಿತದಲ್ಲಿ ಬರೆದ ಕವಿತೆಗಳು ಜನಮಾನಸದಲ್ಲಿ ಹಚ್ಚಹಸಿರಾಗಿವೆ. ದೂರದೂರದ ಊರುಗಳಿಂದ ಆಗಮಿಸಿದ ಭಕ್ತರಿಗೆ ಶರೀಫರ ಅನುಯಾಯಿಗಳು ಉಪಹಾರ ಸೇರಿದಂತೆ ಭೋಜನ ಹಂಚುವ ಮೂಲಕ ಹರಕೆ ತೀರಿಸಿದರು. ಜಾತ್ರೆಗೆ ಬರುವ ಭಕ್ತರು ತತ್ರಾಣಿ ತಗೆದುಕೊಂಡು ಹೋಗುವ ವಾಡಿಕೆ ಇಲ್ಲಿದೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ ಶಿಶುನಾಳ ಶರೀಫರ ಜಾತ್ರೆ ನಿಮಿತ್ತವಾಗಿ ಪಾಲ್ಗೊಂಡಿರುವುದು ಬಹಳ ಸಂತಸ ತಂದಿದೆ. ಹಿಂದೆಯೂ ಸಹ ಹಲವು ಬಾರಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದೆ. ದೇಶದ ಸಂಸ್ಕೃತಿಯಲ್ಲಿಯೇ ಜಾತ್ಯತೀತತೆ, ಭಾವೈಕ್ಯತೆ ಇದೆ ಎಂಬುವುದಕ್ಕೆ ಗುರುಗೋವಿಂದ ಭಟ್ಟರು ಮತ್ತು ಶಿಶುನಾಳ​ ಶರೀಫರ ಬಾಂಧವ್ಯ ಉದಾಹರಣೆ ಎಂದು ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರ: 12 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ, ಎಲ್ಲಾ ಪ್ರಮುಖರನ್ನು ಬೈಯುವುದೇ ಇದರ ವಿಶೇಷತೆ!

Last Updated : Mar 20, 2024, 12:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.