ETV Bharat / state

ಶಿರೂರು ಗುಡ್ಡ ಕುಸಿತ ಪ್ರಕರಣ: ಕೆಲಸಕ್ಕೆ ರಜೆ ಹಾಕಿ ಜೀವ ಉಳಿಸಿಕೊಂಡ ಹುಲಿಯಪ್ಪಾ! - Shiruru Hill Collapse - SHIRURU HILL COLLAPSE

ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ಇದ್ದ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅವಘಡ ಸಂಭವಿಸಿದ ದಿನ ಕೆಲಸಕ್ಕೆ ರಜೆ ಹಾಕಿ ತಮ್ಮ ಜೀವ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

LEAVE FROM WORK  MAN SAVED HIS LIFE  UTTARA KANNADA
ಹುಲಿಯಪ್ಪಾ (ETV Bharat)
author img

By ETV Bharat Karnataka Team

Published : Jul 19, 2024, 1:39 PM IST

ಪ್ರತ್ಯಕ್ಷದರ್ಶಿ ಹುಲಿಯಪ್ಪಾ ಹೇಳಿಕೆ (ETV Bharat)

ಕಾರವಾರ: ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ಇದ್ದ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದ ಉಳುವರೆ ಗ್ರಾಮದ ಹುಲಿಯಪ್ಪಾ ಗೌಡ ಎಂಬವರು ದುರಂತ ಸಂಭವಿಸಿದ್ದ ದಿನ ಕೆಲಸಕ್ಕೆ ರಜೆ ಹಾಕಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಹುಲಿಯಪ್ಪಾ ಅವರು ಹೆದ್ದಾರಿ ಪಕ್ಕದ ಹೊಟೇಲ್​ಗೆ ನಿತ್ಯವೂ ದೋಣಿ ಮೂಲಕ ಗಂಗಾವಳಿ ನದಿ ದಾಟಿ ಹೆಲ್ಪರ್ ಕೆಲಸಕ್ಕೆ ಹಾಜರಾಗುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ತೋಟದ ಕೆಲಸ ಇರುವುದರಿಂದ ರಜೆ ಹಾಕಿದ್ದರು. ಹೀಗಾಗಿ ದುರಂತ ಸಂಭವಿಸಿದ್ದ ದಿನ ಕೆಲಸಕ್ಕೆ ಹೋಗಿರಲಿಲ್ಲ.‌ ಇದರಿಂದಾಗಿ ಘೋರ ದುರಂತದಲ್ಲಿ ಅದೃಷ್ಟವಶಾತ್​ ಬಚಾವಾಗಿದ್ದಾರೆ.

"ತೋಟದ ಕೆಲಸ ಇರುವ ಕಾರಣ ರಜೆ ಹಾಕಿ ಜೀವ ಉಳಿಸಿಕೊಂಡಿದ್ದೇನೆ. ನಾನು ಕೆಲಸಕ್ಕೆ ಹೋಗದ ಕಾರಣ ಸಂಬಂಧಿಕರು ಅಂಗಡಿಗೆ ಬಂದಿದ್ದರು. ನೋಡ ನೋಡುತ್ತಲೇ ಗುಡ್ಡ ಕುಸಿಯಿತು. ಪಕ್ಕದಲ್ಲೇ ನದಿ ಇರುವುದರಿಂದ ಹಲವರು ನಾಪತ್ತೆಯಾಗಿದ್ದಾರೆ. ನಾವು ಗ್ಯಾಸ್ ಬ್ಲಾಸ್ಟ್ ಆಗಿದೆ ಎಂದುಕೊಂಡೆವು. ಆದರೆ ನೋಡ ನೋಡುತ್ತಲೇ ಹಲವು ಮನೆಗಳು ನದಿ ನೀರಿಗೆ ಕೊಚ್ಚಿ ಹೋಗಿದೆ" ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: 5ನೇ ದಿನವೂ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ; ಹಲವೆಡೆ ರಸ್ತೆ ಸಂಚಾರ ಬಂದ್ - Kukke Subramanya

ETV Bharat Logo

Copyright © 2025 Ushodaya Enterprises Pvt. Ltd., All Rights Reserved.