ETV Bharat / state

ಮುಡಾ ವಿವಾದಿತ ಜಮೀನಿನ ಫೋಟೋಗಳನ್ನು ತನಿಖೆಗೆ ಬಳಸಿ: ಲೋಕಾಯುಕ್ತರಿಗೆ ಸ್ನೇಹಮಯಿ ಕೃಷ್ಣ ಮನವಿ

ಮುಡಾದ ವಿವಾದಿತ ಜಮೀನಿನಲ್ಲಿರುವ ರಸ್ತೆ, ಒಳಚರಂಡಿ ಮತ್ತು ಉದ್ಯಾನವನದ ಫೋಟೋಗಳನ್ನು ತನಿಖೆಗೆ ಬಳಸಿಕೊಳ್ಳಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿರುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ (ETV Bharat)
author img

By ETV Bharat Karnataka Team

Published : 1 hours ago

ಮೈಸೂರು: "ಸರ್ವೆ ನಂಬರ್​ 464ರ 3 ಎಕರೆ 16 ಗುಂಟೆ ವಿವಾದಿತ ಜಮೀನಿನಲ್ಲಿ ನಿವೇಶನ, ಒಳಚರಂಡಿ ಮತ್ತು ಉದ್ಯಾನವನ ನಿರ್ಮಿಸಿರಲಿಲ್ಲ. ಅದೊಂದು ಖಾಲಿ ಜಾಗವೆಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಮಹಜರು ಸಂದರ್ಭದಲ್ಲಿ ಜಮೀನಿನ ಗಡಿಗಳನ್ನು ಮಾತ್ರ ಗುರುತು ಮಾಡಲಾಗಿತ್ತು. ಅಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ಉದ್ಯಾನವನ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆ ಗಿಡ-ಗಂಟಿಗಳನ್ನು ತೆರವು ಮಾಡಿ, ರಸ್ತೆ, ಒಳಚರಂಡಿ ಮತ್ತು ಉದ್ಯಾನವನದ ಫೋಟೋ ಹಾಗು ವಿಡಿಯೋಗಳನ್ನು ತೆಗೆದುಕೊಂಡು, ಅವುಗಳನ್ನು ತನಿಖೆಗೆ ಬಳಸಿಕೊಳ್ಳಬೇಕು ಎಂದು ಮೈಸೂರಿನ ಲೋಕಾಯುಕ್ತರಿಗೆ ಮನವಿ ಮಾಡಿದ್ದೇನೆ" ಎಂದು ದೂರುದಾರ ಸ್ನೇಹಮಯಿ ತಿಳಿಸಿದರು.

ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ರಾಯಚೂರು ಸಂಸದರಾಗಿರುವ ಕುಮಾರ್‌ ನಾಯ್ಕ್‌, ದೂರುದಾರರಿಗೆ ಕಾನೂನಿನ ತಿಳುವಳಿಕೆ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅವರು ಯಾವ ಕಾನೂನಿನ ಅಡಿಯಲ್ಲಿ ಮಲ್ಲಿಕಾರ್ಜುನ ​ಸ್ವಾಮಿಗೆ ಈಗಾಗಲೇ ಮಾರಾಟವಾಗಿದ್ದ ಭೂಮಿಯನ್ನು ಮರು ಮಾರಾಟ ಮಾಡಿದರು?. ನಿವೇಶನವಾಗಿದ್ದ ಭೂಮಿಯನ್ನು ಹೇಗೆ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರು" ಎಂದು ಪ್ರಶ್ನಿಸಿದರು.

ಕುಮಾರ್​ನಾಯ್ಕ್ ಅವರನ್ನು ವಿಚಾರಣೆಗೆ ಒಳಪಡಿಸಿ: "ಅಲ್ಲಿನ 12 ನಿವೇಶನಗಳ ಖರೀದಿದಾರರಿಂದ ಮಾಹಿತಿ ಪಡೆಯಬೇಕು. ಕುಮಾರ್‌ ನಾಯ್ಕ್‌ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಮೀನಿನ ಅನ್ಯಕ್ರಾಂತ (ಭೂಮಿ ಪರಭಾರೆ) ಮಾಡುವಲ್ಲಿ ಅಪರಾಧ ಮಾಡಿದ್ದಾರೆ. ಆದ್ದರಿಂದ ಕುಮಾರ್‌ ನಾಯ್ಕ್‌ ಅವರನ್ನು ಮತ್ತೆ ತನಿಖೆಗೆ ಒಳಪಡಿಸಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.

"ಮುಡಾ ಪ್ರಕರಣದಲ್ಲಿ ಲೋಕಾಯುಕ್ತರು ಈ ಪ್ರಕರಣದ ಮೊದಲ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನು ತನಿಖೆಗೆ ಒಳಪಡಿಸುವ ಮುನ್ನ ಎಲ್ಲ ರೀತಿಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಖಂಡಿತವಾಗಿಯೂ ಅವರನ್ನು ವಿಚಾರಣೆಗೆ ಕರೆಯುತ್ತಾರೆ. ಅವರನ್ನು ವಿಚಾರಣೆಗೆ ಕರೆಯದೇ ಇದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ" ಎಂದು ಹೇಳಿದರು.

"ಮುಂದಿನ ವಾರ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು" ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಬಂದಿದ್ದು ನಿಜ: ಸಂಸದ ಜಿ.ಕುಮಾರ್​ ನಾಯ್ಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.