ETV Bharat / state

ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವಕ್ಕೆ‌ ಚಾಲನೆ - Raghavendra Swamy Aradhana

author img

By ETV Bharat Karnataka Team

Published : Aug 19, 2024, 7:48 AM IST

ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 353ನೇ ಆರಾಧನಾ ಮಹೋತ್ಸವಕ್ಕೆ‌ ಚಾಲನೆ ನೀಡಲಾಗಿದೆ.

aradhana mahotsava
ಆರಾಧನಾ ಮಹೋತ್ಸವಕ್ಕೆ‌ ಚಾಲನೆ (ETV Bharat)
ಗುರುರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ (ETV Bharat)

ರಾಯಚೂರು: ತುಂಗಾ ತೀರದಲ್ಲಿ‌ ನೆಲೆಸಿರುವ ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷವೆಂದೇ ಜನಮನ್ನಣೆ ಪಡೆದ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ‌ ಅದ್ಧೂರಿ ಚಾಲನೆ ಸಿಕ್ಕಿದೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಧ್ವಜಾರೋಹಣ ನೇರವೇರಿಸಿ, ರಾಯರ 7 ದಿನಗಳ ಆರಾಧನೆಗೆ ಚಾಲನೆ ನೀಡಿದರು.

aradhana mahotsava
ಆರಾಧನಾ ಮಹೋತ್ಸವ (ETV Bharat)

ಗೋ, ಗಜ, ಅಶ್ವ, ಒಂಟೆ ಧಾನ್ಯ ಪೂಜೆಗಳೊಂದಿಗೆ ಆರಾಧನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಆರಾಧನೆಯು ಆಗಸ್ಟ್ 18ರಿಂದ 24ರ ವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಮಠದ ಆವರಣವು ತಳಿರು ತೋರಣ, ಹೂವಿನ ಅಲಂಕಾರ, ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

aradhana mahotsava
ಆರಾಧನಾ ಮಹೋತ್ಸವ (ETV Bharat)

ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 353 ವರ್ಷಗಳು ಸಂದ ಹಿನ್ನೆಲೆಯಲ್ಲಿ ಆರಾಧನಾ ಮಹೋತ್ಸವವನ್ನು 7 ದಿನಗಳ ಕಾಲ ಸಪ್ತರಾತ್ರೋತ್ಸವವಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯಾರಾಧನೆ, ಆಗಸ್ಟ್ 23ರಂದು ಉತ್ತರಾರಾಧನೆ ನಡೆಯಲಿದೆ.

aradhana mahotsava
ಆರಾಧನಾ ಮಹೋತ್ಸವ (ETV Bharat)

ಉತ್ತರಾರಾಧನೆ ದಿನ ಮಠದ ರಥಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. 7 ದಿನಗಳವರೆಗೆ ಪ್ರತಿನಿತ್ಯ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಾಧನೆ ವೇಳೆ ಮಂತ್ರಾಲಯದೆಲ್ಲೆಡೆ ರಾಯರ ನಾಮಸ್ಮರಣೆ ಅನುರಣಿಸಲಿದೆ. ದೇಶ, ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಲಾಲ್‌ಬಾಗ್ ಫ್ಲವರ್‌ಶೋಗೆ ಇಂದು ತೆರೆ; 8 ಲಕ್ಷಕ್ಕೂ ಅಧಿಕ ವೀಕ್ಷಕರ ಭೇಟಿ - Lalbagh Flower Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.