ETV Bharat / state

ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಕೆ.ಕಾಂತ ಆಯ್ಕೆ - Devaraja Arasu Award

ಪ್ರಸಕ್ತ ಸಾಲಿನ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಕೆ.ಕಾಂತರನ್ನು ಆಯ್ಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

SENIOR POLITICIAN  POLITICIAN SK KANTA  BENGALURU  DEVARAJA ARASU BIRTHDAY CELEBRATION
ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಕೆ ಕಾಂತ ಆಯ್ಕೆ (ETV Bharat)
author img

By ETV Bharat Karnataka Team

Published : Aug 14, 2024, 6:42 PM IST

ಬೆಂಗಳೂರು: ಪ್ರಸಕ್ತ ಸಾಲಿನ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ಸಚಿವ ಎಸ್.ಕೆ.ಕಾಂತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ತಿಳಿಸಿದ್ದಾರೆ.

ವಿಕಾಸಸೌಧ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಆಗಸ್ಟ್​​ 20ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಕೆ.ಕಾಂತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಎಸ್.ಕೆ.ಕಾಂತ ಅವರ ಹಿನ್ನೆಲೆ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ 1938 ರಲ್ಲಿ ಜನಿಸಿದ ಎಸ್.ಕೆ.ಕಾಂತ ಅವರು, ಶೋಷಿತರ, ಕೂಲಿ ಕಾರ್ಮಿಕರ, ದಮನಿತರ ಧ್ವನಿಯಾಗಿ ದುಡಿಯುತ್ತಿದ್ದಾರೆ. ಪಾನ ನಿಷೇಧ, ಜಾತೀಯತೆ, ಶೋಷಣೆ, ಕಂದಾಚಾರ, ಮೂಢನಂಬಿಕೆ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಈಗಲೂ ಹೋರಾಟ ನಡೆಸುತ್ತಿದ್ದಾರೆ. ಅಮಾಯಕ, ಅಲಕ್ಷಿತ, ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸಿ ಸಹಸ್ರಾರು ಕುಟುಂಬಗಳಿಗೆ ನೆರವಾಗಿದ್ದಾರೆ.

ಪ್ರಾಥಮಿಕ ಶಾಲೆಗೆ ಓದಲು ಕಲಬುರಗಿಗೆ ಬಂದ ಕಾಂತ ಮನೆಯ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಶಾಲೆ ಬಿಟ್ಟು ಎಂ.ಎಸ್.ಕೆ. ಮಿಲ್​ನಲ್ಲಿ ಕಾರ್ಮಿಕರಾಗಿ ಸೇರಿದ್ದರು. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷಕ್ಕೆ ಸೇರಿದರು. ಮಿಲ್ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯಕ್ಕೆ ಪ್ರತಿಭಟಿಸಿ ಸತ್ಯಾಗ್ರಹ ಆರಂಭಿಸಿ ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡರು. ರಾಜಕೀಯಕ್ಕೆ ಬಂದು ಶಾಸಕರಾಗಿ ಆಯ್ಕೆಯಾಗಿ 1986ರಲ್ಲಿ ಕಾರ್ಮಿಕ ಸಚಿವರಾಗಿ ಅಧಿಕಾರಕ್ಕೆ ಬಂದರೂ ತಾವು ಕಾರ್ಮಿಕರ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಕಾರಣ 18 ತಿಂಗಳಿಗೆ ಮಂತ್ರಿ ಸ್ಥಾನ ಕೊನೆಯಾಯಿತು. ಅವರೊಂದಿಗೆ ಎಂಪಿ ಪ್ರಕಾಶ್ ಮತ್ತು ಸಿದ್ದರಾಮಯ್ಯ ಅವರು ಹೆಗಡೆ ಸಂಪುಟವನ್ನು ಸೇರಿದ್ದರು.

ಸಚಿವ ಸ್ಥಾನ ಹೋದರೂ ಕಾರ್ಮಿಕರು ಮತ್ತು ಶ್ರಮಿಕರ ಪರವಾದ ಹೋರಾಟ ನಿಲ್ಲಲಿಲ್ಲ. ಆಳಂದ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಪರವಾಗಿ ಸತ್ಯಾಗ್ರಹ ನಡೆಸುತ್ತಿದ್ದಾಗ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಕಬ್ಬಿನ ಬಾಕಿಗಾಗಿ ರೈತರ ಪರವಾಗಿ ಸತ್ಯಾಗ್ರಹ ನಡೆಸಿದ್ದರು. ರೈತರು, ಸಿಮೆಂಟ್ ಕಾರ್ಖಾನೆ ಕಾರ್ಮಿಕರು, ಪರಿಶಿಷ್ಟ ವರ್ಗದವರು ಮತ್ತಿತರರ ಸಮಸ್ಯೆಗಳಿಗಾಗಿ ಹೋರಾಟದ ಮುಂಚೂಣಿಯಲ್ಲಿರುವ ಕಾಂತ, ಕಲಬುರ್ಗಿಯಲ್ಲಿ ಕೆರೆಗಳ ರಕ್ಷಣೆಗೆ, ಸರ್ಕಾರಿ ಭೂಮಿಯ ಅತಿಕ್ರಮಣ, ಒತ್ತುವರಿಯ ತಡೆಗೆ, ವಕ್ಫ್​ ಆಸ್ತಿಯ ಅತಿಕ್ರಮಣದ ವಿರುದ್ಧ ಹೋರಾಟ ನಡೆಸಿದವರು.

ಈ ಭಾಗದಲ್ಲಿ ಸ್ಥಾಪನೆಯಾದ ಸಕ್ಕರೆ, ಸಿಮೆಂಟ್ ಹಾಗೂ ಇನ್ನಿತರ ಮಿನಿ ಪ್ಲಾಂಟ್‌ಗಳಲ್ಲಿ ದುಡಿಯುವವರ ಪರವಾಗಿ, ಅವರಿಗೆ ಅನ್ಯಾಯವಾದಾಗ ದನಿ ಎತ್ತಿ ಹೋರಾಟ ನಡೆಸಿದವರು ಕಾಂತ. ದಲಿತ ಚಳವಳಿ, ರೈತ ಚಳವಳಿ, ಕನ್ನಡಕ್ಕೆ ಆದ್ಯತೆಗಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. ಶಾಸಕರಾಗಿ, ಕಾರ್ಮಿಕ ಸಚಿವರಾಗಿ ಸಾರ್ವಜನಿಕ ಸೇವೆಯಲ್ಲಿದ್ದರೂ ಇಂದಿಗೂ ಬಾಡಿಗೆ ಮನೆಯಲ್ಲಿ ಬದುಕನ್ನು ನಡೆಸುತ್ತಿರುವ ಎಸ್.ಕೆ.ಕಾಂತ ಅವರು ಸಾಮಾಜಿಕ ಹೋರಾಟಗಾರರಲ್ಲಿ ಅನನ್ಯವಾದ ಮಾದರಿಯಾಗಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು. ಸಮಾಜದಲ್ಲಿ ಪ್ರೀತಿ ವಿಶ್ವಾಸ ಇರಬೇಕು. ದೇಶದ ಬಗ್ಗೆ ಕಳಕಳಿ ಇರಬೇಕು. ಜಾತಿ ಪದ್ಧತಿ ನಿಲ್ಲಬೇಕು. ಎಲ್ಲ ಕಡೆ ನೀತಿ ಬೆಳೆಯಬೇಕು. ಹಿಂಸೆ, ಶೋಷಣೆ, ಕಂದಾಚಾರ, ಆಡಂಬರ ನಿಲ್ಲಬೇಕು. ದೇಶ ಆಳುವವರು ಆದರ್ಶದ ಬದುಕು ನಡೆಸಬೇಕು ಎಂಬುದನ್ನು ಪ್ರತಿಪಾದಿಸುತ್ತಾ ಅದೇ ರೀತಿ ಬದುಕುತ್ತಿರುವ ಕಾಂತ ಅಪರೂಪದ ಸಮಾಜಸೇವಕರಾಗಿದ್ದಾರೆ.

ಇದನ್ನೂ ಓದಿ: ಪಂಚ ಗ್ಯಾರಂಟಿಗೆ SCSP-TSP ಹಣ ಬಳಕೆ: ಜುಲೈವರೆಗೆ ಬಿಡುಗಡೆಯಾದ ಹಣವೆಷ್ಟು? - Five Guarantee Schemes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.