ETV Bharat / state

ದಿಂಗಾಲೇಶ್ವರ್​​ ಶ್ರೀ ಸ್ಪರ್ಧೆ, ಕಾಂಗ್ರೆಸ್​​​ ಬೆಂಬಲ ವಿಚಾರದ ಚರ್ಚೆ: ಸಚಿವ ಸಂತೋಷ್​ ಲಾಡ್​ ಹೇಳಿದ್ದೇನು? - Santosh lad - SANTOSH LAD

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರವಾಗಿ ಡಿಕೆಶಿ ನೀಡಿದ್ದ ಹೇಳಿಕೆ ಕುರಿತು ಸಚಿವ ಸಂತೋಷ್​ ಲಾಡ್​ ಪ್ರತಿಕ್ರಿಯಿಸಿದ್ದಾರೆ.

ಸಂತೋಷ್​ ಲಾಡ್ ಹೇಳಿಕೆ
ಸಂತೋಷ್​ ಲಾಡ್ ಹೇಳಿಕೆ
author img

By ETV Bharat Karnataka Team

Published : Apr 10, 2024, 1:06 PM IST

Updated : Apr 10, 2024, 1:37 PM IST

ಸಂತೋಷ್​ ಲಾಡ್ ಹೇಳಿಕೆ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕುರಿತು ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್​ ಲಾಡ್ ಪ್ರತಿಕ್ರಿಯಿಸಿದ್ದು, ಅಧ್ಯಕ್ಷರು ಏನು ಹೇಳಿದ್ದಾರೆ ಅದು ನನಗೆ ಗೊತ್ತಿಲ್ಲ. ಈಗಾಗಲೇ ನಾವು ಕಾಂಗ್ರೆಸ್ ಅಭ್ಯರ್ಥಿ ವಿನೋದ್​ ಅಸೂಟಿ ಪರ ಪ್ರಚಾರ ಮಾಡುತ್ತಿದ್ದೇವೆ. ಶೇ.70ರಷ್ಟು ಪ್ರಚಾರ ಮಾಡಿದ್ದೇವೆ ಅಭ್ಯರ್ಥಿಗೆ ಬಿ ಫಾರ್ಮ್ ಸಹ ನೀಡಲಾಗಿದೆ ಎಂದು ಲಾಡ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದಕ್ಕೆ ಡಿಕೆಶಿ ಅವರೇ ಉತ್ತರ ಕೊಡಬೇಕು. ಅವರು ಹೇಳಿದ ಸ್ಟೇಟ್ಮೆಂಟ್ ನಾನು ನೋಡಿಲ್ಲ ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಈಗಾಗಲೇ ಧಾರವಾಡದಲ್ಲಿ ಪ್ರಚಾರ ಆರಂಭ ಮಾಡಿದ್ದೇವೆ ಎಂದರು. ನಂತರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿ ಅವರು ಮೋಸ್ಟ್​ ಪವರ್​ ಫುಲ್ ಇದ್ದಾರೆ ಅನಿಸುತ್ತದೆ. ಅವರಿಗೆ ಅವರದ್ದೇ ಆದ ಭಕ್ತವೃಂದ ಇದೆ. ಮೊದಲನೇ ಬಾರಿಗೆ ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.‌

ಬಳಿಕ ಜಾತಿ ರಾಜಕಾರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾವುದೇ ಜಾತಿ ರಾಜಕಾರಣ ಮಾಡಲ್ಲ, ನಮ್ಮಲ್ಲಿ ಪ್ರತಿಯೊಬ್ಬರಿಗೆ ಟಿಕೆಟ್​ ನೀಡಲಾಗುತ್ತದೆ. ಒಂದು ವೇಳೆ ಧಾರವಾಡದಲ್ಲಿ ಅಭ್ಯರ್ಥಿ ಬದಲಾಯಿಸಿದರೆ ಅದು ಹೈಕಮಾಂಡ್​ ನಿರ್ಧಾರ ಅದಕ್ಕೆ ನಾವು ಬದ್ಧರಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷದಿಂದ ಲೋ ಕ್ಯಾಂಡಿಡೇಟ್​​​​ ಅನ್ನು ಜೋಶಿ ಅವರೇ ಹಾಕಿಸಿಕೊಂಡಿದ್ದಾರೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿ ಮಾತನಾಡಬಾರದು, ಸ್ವಾಮೀಜಿ ಇಲ್ಲದಿದ್ದರೂ ನಾವು ಫೈಟ್​ ಮಾಡುತ್ತೇವೆ. ಆದರೇ ಅವರು ಈ ರೀತಿ ಹೇಳಿಕೆ ಕೊಡಬಾರದು ಎಂದರು.

ಡಿಕೆಶಿ ಹೇಳಿದ್ದೇನು: ದಿಂಗಾಲೇಶ್ವರ ಸ್ವಾಮಿಜಿಗಳನ್ನು ಸಂಪರ್ಕ ಮಾಡಿರುವ ವಿಚಾರವಾಗಿ ಸೋಮವಾರ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್​, ಸ್ವಾಮೀಜಿಗಳು ಈಗ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದು, ಈ ಬಗ್ಗೆ ಅನೇಕರು ನನಗೆ ಸಲಹೆ ನೀಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ನಿರ್ಧಾರದಂತೆ ನಾವು ಈಗಾಗಲೇ ಆನಂದ್ ಅಸೂಟಿ ಅವರಿಗೆ ಬಿ ಫಾರಂ ನೀಡಿದ್ದೇವೆ. ನಮ್ಮ ಅಭ್ಯರ್ಥಿ ಯುವಕರಾಗಿದ್ದಾರೆ. ಈ ಕುರಿತ ಪ್ರಸ್ತಾವನೆ ಇದೆ. ಈ ಬಗ್ಗೆ ಸದ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು. ಸ್ವಾಮೀಜಿಗಳು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಮೊದಲೇ ಈ ವಿಚಾರ ನಮಗೆ ಗೊತ್ತಿದ್ದರೆ ಸುಲಭವಾಗುತ್ತಿತ್ತು ಎಂದು ಹೇಳಿದ್ದರು.

ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಬೆಂಬಲಿಸುವ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸುತ್ತೇನೆ: ಡಿ.ಕೆ.ಶಿವಕುಮಾರ್ - D K Shivakumar

Last Updated : Apr 10, 2024, 1:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.