ETV Bharat / state

ವಿಜಯಪುರದ ಇಂಚಗೇರಿ ಮಠಕ್ಕೆ ಆರ್​ಎಸ್​ಎಸ್​​ ಸಂಚಾಲಕ ಮೋಹನ್ ಭಾಗವತ್ ಭೇಟಿ - Mohan Bhagwat visits Inchageri Mutt - MOHAN BHAGWAT VISITS INCHAGERI MUTT

ಮೋಹನ್‌ ಭಾಗವತ್‌ ಅವರಿಗೆ ಗುರುಗಳಾದ ಭೌಸಾಹೇಬ್ ಮಹಾರಾಜರ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು.

RSS convener Mohan Bhagwat visited inchageri mutt vijayapura
ವಿಜಯಪುರದ ಇಂಚಗೇರಿ ಮಠಕ್ಕೆ ಆರೆಸ್ಸೆಸ್​ ಸಂಚಾಲಕ ಮೋಹನ್ ಭಾಗವತ್ ಭೇಟಿ (ETV Bharat)
author img

By ETV Bharat Karnataka Team

Published : Jun 27, 2024, 3:03 PM IST

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಆರ್​ಎಸ್​ಎಸ್​ ಸಂಚಾಲಕ ಮೋಹನ್ ಭಾಗವತ್ ಭೇಟಿ ನೀಡಿದ್ದು, ಮಠದಲ್ಲಿನ 9 ಗುರುಗಳ ಗದ್ದುಗೆ ದರ್ಶನ ಪಡೆದರು.

ಕಳೆದ ನಾಲ್ಕು ದಿನಗಳಿಂದ ವಿಜಯಪುರದಲ್ಲಿ ಬೀಡು ಬಿಟ್ಟಿರುವ ಮೋಹನ್ ಭಾಗವತ್ ಅವರು ಇಂಚಗೇರಿ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸ್ವಾತಂತ್ರ್ಯ ಸೇನಾನಿ ಮಾಧವಾನಂದ ಶ್ರೀಗಳ ದೇಗುಲಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ ರೇವಣಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮೋಹನ್‌ ಭಾಗವತ್‌ ಅವರಿಗೆ ರೇವಣಸಿದ್ದೇಶ್ವರ ಶ್ರೀಗಳು, ಗುರುಗಳಾದ ಭೌಸಾಹೇಬ್ ಮಹಾರಾಜರ ಭಾವಚಿತ್ರ ನೀಡಿ ಸನ್ಮಾನ ಮಾಡಿದರು. ಬಳಿಕ ಶ್ರೀಗಳ ಜೊತೆಗೆ ಕೆಲಕಾಲ ಚರ್ಚಿಸಿದ ಅವರು ನಂತರ ಇಂಚಗೇರಿ ನಿಂಬರಗಿ ಸಂಪ್ರದಾಯ, ಮಹಾರಾಷ್ಟ್ರದ ಉಮದಿ ಆಶ್ರಮಗಳತ್ತ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ: ಮೋಹನ್​ ಭಾಗವತ್​ ಭೇಟಿ ಮಾಡಲಿರುವ ಸಿಎಂ ಯೋಗಿ: ಕುತೂಹಲ ಕೆರಳಿಸಿದ ಭೇಟಿ - CM Yogi to meet RSS chief

ETV Bharat Logo

Copyright © 2025 Ushodaya Enterprises Pvt. Ltd., All Rights Reserved.