ETV Bharat / state

ನಿರಂತರ ಮಳೆಯಿಂದ ಜಲದಿಗ್ಬಂದನ; ಹೊರ ಪ್ರಪಂಚದ ದಾರಿಯನ್ನೇ ಕಳೆದುಕೊಂಡ ಬಡ ಕುಟುಂಬ - Road submerged

author img

By ETV Bharat Karnataka Team

Published : Jul 9, 2024, 9:30 PM IST

ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಏಕೈಕ ರಸ್ತೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ಸೋಮಾವತಿ ಹಳ್ಳ ದಾಟಲು ಸ್ಥಳೀಯರು ಪರದಾಡುವಂತಾಗಿದೆ.

Chikkamagaluru
ಕಾಲುಸಂಕದ ಮೂಲಕ ಹಳ್ಳದಾಟುತ್ತಿರುವ ಗ್ರಾಮಸ್ಥರು (ETV Bharat)
ಗ್ರಾಮಸ್ಥರು (ETV Bharat)

ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ನಿಧಾನವಾಗಿ ಒಂದೊಂದೇ ಅವಘಡಗಳು ಪ್ರಾರಂಭವಾಗಿವೆ. ಅನೇಕ ಭಾಗಗಳಲ್ಲಿ ನಾನಾ ತೊಂದರೆಗಳನ್ನು ಜನರು ಎದುರಿಸುತ್ತಿದ್ದಾರೆ. ಕೆಲವರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಏಕೈಕ ರಸ್ತೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ಸೋಮಾವತಿ ಹಳ್ಳ ದಾಟಲು ಪರದಾಟ ನಡೆಸುವಂತಾಗಿದ್ದು, ತರುವೆ ಗ್ರಾಮದ ಸುರೇಶ್ ನಾಯ್ಕ ಕುಟುಂಬಕ್ಕೆ ಜಲ ದಿಗ್ಬಂಧನ ಎದುರಾಗಿದೆ.

ಒಂದೇ ದಿನದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಕುಟುಂಬಸ್ಥರು ಕಾಲುಸಂಕ ನಿರ್ಮಾಣ ಮಾಡಿದ್ದು, ಮಕ್ಕಳು, ವೃದ್ದರು ಜೀವ ಕೈಯಲ್ಲಿ ಹಿಡಿದು ಹಳ್ಳದಾಟುವ ಸ್ಥಿತಿ ನಿರ್ಮಾಣವಾಗಿದೆ. ಕಿರು ಸೇತುವೆ ನಿರ್ಮಿಸಿ ಕೊಡುವಂತೆ ನಾಲ್ಕು ವರ್ಷಗಳಿಂದ ಮನವಿ ಮಾಡಿದ್ದಾರೆ. ಕುಟುಂಬಸ್ಥರ ಮನವಿಗೆ ಕ್ಯಾರೆ ಎನ್ನದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇವರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ಮಳೆ ಹೆಚ್ಚಾದರೆ ಉಕ್ಕಿ ಹರಿಯುವ ಸೋಮವತಿ ಹಳ್ಳದ ರೌದ್ರಾವತಾರ ನೋಡಿ ಕುಟುಂಬ ಸದಸ್ಯರು ಬೆಚ್ಚಿ ಬೀಳುತ್ತಿದ್ದು, ಹಳ್ಳ ದಾಟೋ ಭಯದಲ್ಲಿ ಕೃಷಿ ಕಾರ್ಯಗಳು ಸ್ಥಗಿತವಾಗಿವೆ. ಈ ಕುಟುಂಬಸ್ಥರು ಸೇತುವೆಗಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ತರುವೆ ಗ್ರಾಮದ ಸುತ್ತಮುತ್ತ ಜನರು ಇದೇ ರೀತಿಯ ಸಂಕಷ್ಟ ಎದುರಿಸುವಂತಾಗಿದೆ. ಹಳ್ಳದ ಪಕ್ಕದಲ್ಲಿ ನೂರಾರು ಎಕರೆ ಕೃಷಿ ಭೂಮಿಯಿದ್ದರೂ ಸರಿಯಾದ ರಸ್ತೆ ಹಾಗೂ ಓಡಾಡಲು ದಾರಿ ಇಲ್ಲದೇ ಪಾಳು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ವೇಳೆ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಪ್ರಯತ್ನ ಮಾಡಿದರೂ ಜೀವ ಉಳಿಸಿಕೊಳ್ಳುವ ಅಥವಾ ಉಳಿಯುವ ಯಾವುದೇ ಗ್ಯಾರಂಟಿ ಈ ಭಾಗದಲ್ಲಿ ಇಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈ ಭಾಗದ ಜನರು ಈಗ ತತ್ತರಿಸಿ ಹೋಗುತ್ತಿದ್ದು, ಪ್ರತಿನಿತ್ಯದ ಕೆಲಸ ಮಾಡಿಕೊಳ್ಳುವುದಕ್ಕೂ ಆಗದ ಪರಿಸ್ಥಿತಿಗೆ ತಲುಪಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸಿ ನಾವು ಎಲ್ಲರಂತೆ ಜೀವನ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ಈ ಕುಟುಂಬ ಸದಸ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಒಂದು ವಾರದಲ್ಲಿ ದಾಖಲೆಯ 96 ಇಂಚು ಮಳೆ: ಮಂಗಗಳಿಗೂ ಸಂಕಷ್ಟ - Chikkamagaluru Rain

ETV Bharat Logo

Copyright © 2024 Ushodaya Enterprises Pvt. Ltd., All Rights Reserved.