ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಬಳಿಯ ಗವಿರಂಗನಾಥ ಸ್ವಾಮಿ ಬೆಟ್ಟದ ಸಮೀಪ ತಂತಿ ಬೇಲಿಗೆ ಸಿಲುಕಿ ಹಾಕಿಕೊಂಡಿದ್ದ ಕರಡಿಯನ್ನು ಬಿಡಿಸಿಕೊಳ್ಳಲು ಮತ್ತೊಂದು ಕರಡಿ ಹರಸಾಹಸ ಪಡುತ್ತಿರುವ ದೃಶ್ಯ ಮನಕಲಕುವಂತಿದೆ. ಹುಳಿಯಾರು ಸಮೀಪದ ಹೆಗ್ಗೆರೆ ಗ್ರಾಮದ ಬಳಿ ಘಟನೆ ನಡೆದಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮತ್ತೊಂದು ಕರಡಿ ಅದನ್ನು ಬಿಡಿಸಿಕೊಳ್ಳಲು ಒದ್ದಾಡಿದೆ. ನಂತರ ಗ್ರಾಮಸ್ಥರು ಜೆಸಿಬಿ ಬಳಸಿ ಬೇಲಿಗೆ ಸಿಲುಕಿದ್ದ ಕರಡಿಯನ್ನು ಬಿಡಿಸಿದ್ದಾರೆ.
ಚಿರತೆ ಸೆರೆ: ಅನೇಕ ತಿಂಗಳುಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನ್ನಲ್ಲಿ ಸೆರೆಯಾಗಿದೆ. ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನ್ ಇಡಲಾಗಿತ್ತು. ಬೋನ್ಗೆ ಬಿದ್ದ ಸುಮಾರು 1.5 ವರ್ಷದ ಗಂಡು ಚಿರತೆ, ಕಳೆದ ಎರಡ್ಮೂರು ತಿಂಗಳುಗಳಿಂದ ಹೊನ್ನುಡಿಕೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿತ್ತು.
ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದ ಗ್ರಾಮಸ್ಥರ ಮನವಿ ಮೇರೆಗೆ ಡಿಎಫ್ಒ ಅನುಪಮಾ ನೇತೃತ್ವದಲ್ಲಿ ಎಸಿಎಫ್ ಮಹೇಶ್ ಮಾಲಗತಿ ಆರ್ಎಫ್ಒ ನಿಮತಾ, ಡಿಆರ್ಎಫ್ ರಬ್ಬನಿ ತಂಡವು ಕಾರ್ಯಚರಣೆ ನಡೆಸಿದೆ. ಚಿರತೆಯನ್ನು ಸೆರೆ ಹಿಡಿದಿರುವುದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: ಕಾರವಾರ: ನಾಯಿ ಅಟ್ಟಿಸಿಕೊಂಡು ಬಂದ ಚಿರತೆ ಬಾವಿಗೆ ಬಿದ್ದು ಸಾವು