ETV Bharat / state

ರೇಣುಕಾಸ್ವಾಮಿ ಅಪಹರಣಕ್ಕೆ ಬಳಸಲಾಗಿದ್ದ ಕಾರು ಜಪ್ತಿ: ಆರೋಪಿ ರವಿಶಂಕರ್ ಮನೆಯಲ್ಲಿ ಪೊಲೀಸರಿಂದ ಪರಿಶೀಲನೆ - car seized - CAR SEIZED

ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆಯಾಗಿದ್ದ ಕಾರನ್ನು ಪೊಲೀಸರು ಚಿತ್ರದುರ್ಗದಲ್ಲಿ ಜಪ್ತಿ ಮಾಡಿದ್ದಾರೆ.

ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ
ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ (ETV Bharat)
author img

By ETV Bharat Karnataka Team

Published : Jun 16, 2024, 6:31 PM IST

ಚಿತ್ರದುರ್ಗ: ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆಯಾಗಿದ್ದ ಪ್ರಕರಣದ 8ನೇ ಆರೋಪಿ ರವಿಶಂಕರ್​ ಕಾರನ್ನು ಪೊಲೀಸರು ಚಿತ್ರದುರ್ಗದಲ್ಲಿ ಜಪ್ತಿ ಮಾಡಿದ್ದಾರೆ. ಇನ್ನು, ಕೊಲೆ ನಡೆದ ಬಳಿಕ ದರ್ಶನ್​ ಹಾಗೂ ಗ್ಯಾಂಗ್​ನಿಂದ 5 ಲಕ್ಷ ರೂಪಾಯಿ ಪಡೆದ ಮಾಹಿತಿ ಹಿನ್ನೆಲೆ ಪ್ರಕರಣದ ಆರೋಪಿ ರವಿಶಂಕರ್​ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ತಾಲೂಕಿನ ಐನಳ್ಳಿ ಕುರುಬರಹಟ್ಟಿಯಲ್ಲಿರುವ ಆರೋಪಿ ರವಿಶಂಕರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡ ಹೋಗಲಾಗಿತ್ತು. ಅದಕ್ಕೆ ರವಿಶಂಕರ್​ ಕಾರನ್ನು ಬಳಕೆ ಮಾಡಲಾಗಿತ್ತು. ಹೀಗಾಗಿ ಪೊಲೀಸರು ಕಾರನ್ನು ಜಪ್ತಿ ಮಾಡಿದರು. ಬಳಿಕ ಬೆರಳಚ್ಚು ತಜ್ಞರು ಕಾರನ್ನು ಪರಿಶೀಲನೆ ನಡೆಸಿದರು. ಗೋವಿಂದರಾಜನಗರ ಠಾಣೆ ಸಿಪಿಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ರವಿಶಂಕರ್​ ವಿಚಾರಣೆ ನಡೆದಿದ್ದು, ಇದರಲ್ಲಿ ರವಿಶಂಕರ್ ಕುಟುಂಬಸ್ಥರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಗಿದೆ.

ಮತ್ತೊಂದೆಡೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಸಂಬಂಧ ಚಿತ್ರದುರ್ಗದ ಮಹಾವೀರ ನಗರದ ಪ್ರಕರಣದ 6ನೇ ಆರೋಪಿ ಜಗದೀಶ್ ಮನೆಯನ್ನು ಪೊಲೀಸರು ಪರಿಶೀಲನೆ ಮಾಡಿದರು. ಆರೋಪಿ ಜಗದೀಶ್ ಸಮ್ಮುಖದಲ್ಲಿ ಪೊಲೀಸರು ಪರಿಶೀಲಿಸಿದರು. ಇದೇ ವೇಳೆ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ಪೊಲೀಸರು ಜಪ್ತಿ ಮಾಡಿದರು.

ಮಗ ಜಗದೀಶನನ್ನು ಕಂಡ ತಾಯಿ ಸುಲೋಚನಾ ಭಾವುಕರಾದ ಪ್ರಸಂಗ ನಡೆಯಿತು. ಪೊಲೀಸರು ಜಗದೀಶ್​ ತಾಯಿ ಹಾಗೂ ಪತ್ನಿಯನ್ನೂ ವಿಚಾರಣೆಗೆ ಒಳಪಡಿಸಿದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಮರು ಸೇರ್ಪಡೆ - Renukaswamy Murder Case Probe

ETV Bharat Logo

Copyright © 2024 Ushodaya Enterprises Pvt. Ltd., All Rights Reserved.