ಧಾರವಾಡ /ಶಿವಮೊಗ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದ A9 ಆರೋಪಿ ಧನರಾಜ್ನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಯಿತು. ಬೆಳಗಿನ ಜಾವ ಪರಪ್ಪನ ಅಗ್ರಹಾರ ಬಿಡಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಧಾರವಾಡ ಜೈಲಿಗೆ ಆಗಮಿಸಿದ ಪೊಲೀಸರು ಧನರಾಜ್ನನ್ನು ಶಿಫ್ಟ್ ಮಾಡಿದರು.
ಧನರಾಜ್ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಬಳಿಕ ಆತನ ಬಟ್ಟೆ ಸೇರಿದಂತೆ ಆತನ ವಸ್ತುಗಳನ್ನು ಪರಿಶೀಲಿಸಿದ ಸಿಬ್ಬಂದಿ ಆತನನ್ನು ಜೈಲಿಗೆ ಕಳುಹಿಸಿದರು. ಧನರಾಜ್ ಜೊತೆ A14 ಆರೋಪಿಯಾಗಿರುವ ಪ್ರದೋಷ್ನನ್ನು ಸಹ ಒಂದೇ ವಾಹನದಲ್ಲಿ ಕರೆತರಲಾಗಿತ್ತು. ಧನರಾಜ್ನನ್ನು ಧಾರವಾಡ ಜೈಲಿಗೆ ಕಳುಹಿಸಿ, ಪ್ರದೋಷ್ನನ್ನು ಬೆಳಗಾವಿಗೆ ಕರೆದೊಯ್ದರು.
ದರ್ಶನ್ ಸಹಚರರಿಗೆ ದೊರೆತ ಕೈದಿ ನಂಬರ್ಗಳೇನು ಗೊತ್ತಾ: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಸಹಚರರಾದ ಜಗದೀಶ್ ಹಾಗೂ ಲಕ್ಷ್ಮಣ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಸಂಖ್ಯೆಯನ್ನು ನೀಡಲಾಗಿದೆ. ಎ6 ಆರೋಪಿ ಜಗದೀಶ್ಗೆ ಬೆಂಗಳೂರಿನ ಕಾರಾಗೃಹದಲ್ಲಿ 6028 ಕೈದಿ ಸಂಖ್ಯೆ ಇತ್ತು. ಶಿವಮೊಗ್ಗ ಕಾರಾಗೃಹದಲ್ಲಿ ಅವರಿಗೆ 1072 ಖೈದಿ ಸಂಖ್ಯೆ ನೀಡಲಾಗಿದೆ.
ಅದೇ ರೀತಿ ಎ 12 ಆರೋಪಿ ಲಕ್ಷ್ಮಣನಿಗೆ ಬೆಂಗಳೂರಿನ ಕಾರಾಗೃಹದಲ್ಲಿ 6031 ಕೈದಿ ಸಂಖ್ಯೆ ಇತ್ತು. ಶಿವಮೊಗ್ಗ ಕಾರಾಗೃಹದಲ್ಲಿ 1073 ಕೈದಿ ಸಂಖ್ಯೆಯನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ.
ಇದರಿಂದ ಶಿವಮೊಗ್ಗ ಜೈಲಿನಲ್ಲಿ ಪ್ರತ್ಯೇಕ ಕೈದಿ ಸಂಖ್ಯೆಯಿಂದ ಇವರನ್ನು ಗುರುತಿಸಲಾಗುತ್ತದೆ. ಲಕ್ಷ್ಮಣ ಹಾಗೂ ಜಗದೀಶ್ ರನ್ನು ಇಂದು ಬೆಳಗ್ಗೆ ಶಿವಮೊಗ್ಗ ಜೈಲಿಗೆ ಕರೆತರಲಾಗಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ; ಪರಪ್ಪನ ಅಗ್ರಹಾರದಿಂದ 14ನೇ ಆರೋಪಿ ಪ್ರದೋಶ್ ಹಿಂಡಲಗಾ ಜೈಲಿಗೆ ಶಿಫ್ಟ್ - Accused Pradosh jail shift