ETV Bharat / state

ರಾಮನಗರ ಜಿಲ್ಲೆಗೆ 'ಬೆಂಗಳೂರು ದಕ್ಷಿಣ' ಮರುನಾಮಕರಣ: ರಾಜ್ಯದ ನಗರಗಳ ಮರುನಾಮಕರಣ ಇತಿಹಾಸ ಹೀಗಿದೆ - Karnataka Cities Renamed

author img

By ETV Bharat Karnataka Team

Published : Jul 30, 2024, 6:47 PM IST

Updated : Jul 30, 2024, 7:03 PM IST

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. ಇದಕ್ಕೆ ಪರ- ವಿರೋಧ ವ್ಯಕ್ತವಾಗಿದೆ. ರಾಜ್ಯದ ಹಲವು ನಗರ, ಪಟ್ಟಣಗಳಿಗೆ ಹೊಸ ಹೆಸರಿಡಲಾಗಿದೆ. ಅದರ ಪೂರ್ಣ ವಿವರ ಇಲ್ಲಿದೆ.

ರಾಜ್ಯದ ನಗರಗಳ ಮರುನಾಮಕರಣ ಇತಿಹಾಸ ಹೀಗಿದೆ
ರಾಜ್ಯದ ನಗರಗಳ ಮರುನಾಮಕರಣ ಇತಿಹಾಸ ಹೀಗಿದೆ (ETV Bharat)

ಬೆಂಗಳೂರು: ಬೆಂಗಳೂರಿನಿಂದ 45 ಕಿಮೀ ದೂರ ಇರುವ ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿ, ಗ್ರೇಟರ್​ ಬೆಂಗಳೂರು ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ಜಿಲ್ಲೆಗೆ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು.

ಮರುನಾಮಕರಣಗೊಂಡ ರಾಜ್ಯದ ನಗರಗಳ ವಿವರ
ಮರುನಾಮಕರಣಗೊಂಡ ರಾಜ್ಯದ ನಗರಗಳ ವಿವರ (CANVA)

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರವು ಮುಂದಿನ ಪೀಳಿಗೆಗೆ ಹೊಸ ದಿಕ್ಕನ್ನು ನೀಡಲು ಮತ್ತು ಜಿಲ್ಲೆಯನ್ನು ಬ್ರಾಂಡ್​ ಬೆಂಗಳೂರಿನಡಿ ತರುವ ಯತ್ನವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ, ಇದಕ್ಕೆ ಪರ - ವಿರೋಧವೂ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಗೆ ಮರುನಾಮಕರಣ ಏಕೆ?

  • ರಾಮನಗರ ಜಿಲ್ಲೆಯ ಬದಲು ಬೆಂಗಳೂರು ದಕ್ಷಿಣ ಎಂದು ಕರೆಯಲು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದರಿಂದ ರಾಜ್ಯ ಸಚಿವ ಸಂಪುಟ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ತೀರ್ಮಾನ ಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್, ರಾಮನಗರಕ್ಕೂ ಮರುನಾಮಕರಣ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು.
  • ಕಂದಾಯ ಇಲಾಖೆ ಶೀಘ್ರದಲ್ಲೇ ಇದರ ಪ್ರಕ್ರಿಯೆ ಆರಂಭಿಸಲಿದೆ. ರಾಮನಗರ ತಾಲೂಕು ಕೇಂದ್ರ ಸ್ಥಾನವಾಗಿ ಕಾರ್ಯನಿರ್ವಹಿಸಲಿದೆ. ಮರುನಾಮಕರಣಗೊಂಡ ಜಿಲ್ಲೆಯು ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯು ಸಂಚಾರ ದಟ್ಟಣೆ ಮತ್ತು ಮಾಲಿನ್ಯಕ್ಕೆ ಕುಖ್ಯಾತಿಯಾಗಿದೆ. ಮರುನಾಮಕರಣದ ಬಳಿಕ ರಾಮನಗರವು ಬೆಂಗಳೂರು ವ್ಯಾಪ್ತಿಗೆ ಸೇರಿ ಶೀಘ್ರವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದರು.
  • ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ನೆಲಮಂಗಲ, ಆನೇಕಲ್, ಹೊಸಕೋಟೆ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಒಟ್ಟುಗೂಡಿಸಿ ಮೂಲ ಬೆಂಗಳೂರು ಜಿಲ್ಲೆಯನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.
  • ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ 1986 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು. ಉಳಿದ ತಾಲ್ಲೂಕುಗಳು ಬೆಂಗಳೂರು ನಗರ ಜಿಲ್ಲೆಗೆ ಸೇರ್ಪಡೆ ಮಾಡಲಾಯಿತು. ಬಳಿಕ 2007 ರಲ್ಲಿ ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ರಾಮನಗರವನ್ನು ಒಟ್ಟುಮಾಡಿ ಅದಕ್ಕೆ ರಾಮನಗರ ಜಿಲ್ಲೆ ಎಂದು ರಚಿಸಲಾಗಿತ್ತು. ಇದನ್ನು ಈಗ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.
  • ಮರುನಾಮಕರಣಕ್ಕೆ ಜಿಲ್ಲೆಯ ಜನರ ಬೆಂಬಲವಿದೆ. ಬೆಂಗಳೂರಿನ ಜಾಗತಿಕ ಖ್ಯಾತಿ, ಸಾರ್ವಭೌಮತ್ವ ಮತ್ತು ಕೀರ್ತಿಯು ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳಿಗೂ ಪ್ರಯೋಜನವಾಗಲಿದೆ. ಬೆಂಗಳೂರಿನ ವ್ಯಾಪ್ತಿಯು ತುಮಕೂರು, ರಾಮನಗರ ಜಿಲ್ಲೆಗೆ ತಾಗಿವೆ. ಈ ಪ್ರದೇಶಗಳು ರಾಜಧಾನಿಗೆ ಸೇರಿದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಗಡಿ ಭಾಗದಲ್ಲಿರುವ ಪ್ರದೇಶಗಳೂ ಅಭಿವೃದ್ಧಿ ಹೊಂದಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅಭಿಪ್ರಾಯ.
  • ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್​ ಪಕ್ಷ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆ ರಚನೆಯಾದಾಗ ಹೆಚ್​ಡಿಕೆ ಸಿಎಂ ಆಗಿದ್ದರು. ಜೆಡಿಎಸ್​ನ ಭದ್ರಕೋಟೆಯಾಗಿರುವ ಚನ್ನಪಟ್ಟಣ ಉಪಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮರುನಾಮಕರಣ ಮಾಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ರಿಯಲ್ ಎಸ್ಟೇಟ್​​ ಬೆಳವಣಿಗೆ

  • ರಾಮನಗರವನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ತಂದಲ್ಲಿ ರಿಯಲ್​ ಎಸ್ಟೇಟ್​ ಮತ್ತಷ್ಟು ಬೆಳವಣಿಗೆಯಾಗಲಿದೆ. ರಾಜಧಾನಿಯ ನಿರಂತರ ಬೆಳವಣಿಗೆಯಿಂದಾಗಿ ಬೆಂಗಳೂರಿನ ಉಪನಗರ ಪ್ರದೇಶಗಳಲ್ಲಿ ವಸತಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಮತ್ತು ಸಂಪರ್ಕ ಅನುಕೂಲ ಒಂದೆಡೆಯಾದರೆ, ರಿಯಲ್ ಎಸ್ಟೇಟ್ ಡೆವಲಪರ್‌ಗಳು ಈಗಾಗಲೇ ರಾಮನಗರವನ್ನು ಹೊಸ ಯೋಜನೆಗಳಿಗೆ ಪರಿಗಣಿಸುತ್ತಿದ್ದಾರೆ.
  • ಬೆಂಗಳೂರಿನ ಕಾರ್ಮಿಕ ಕೊರತೆಯನ್ನು ಪರಿಹರಿಸುವ ಯೋಜನೆಗಳ ಮೇಲೆ ಗಮನ ಹರಿಸಿದ್ದೇವೆ. ಹೊಸ ಯೋಜನೆಯೊಂದಿಗೆ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ವಿಸ್ತರಿಸಲಿದೆ. ವಿಶೇಷವಾಗಿ ಮೆಟ್ರೋ ರೈಲು ಸಂಪರ್ಕವೂ ನಗರಕ್ಕೆ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
  • ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಒಕ್ಕೂಟದ (CREDAI) ಕರ್ನಾಟಕ ಪ್ರತಿನಿಧಿಗಳ ಪ್ರಕಾರ, ರಾಮನಗರ ಮರುನಾಮಕರಣಗೊಂಡಲ್ಲಿ ಅಲ್ಲಿನ ಆಸ್ತಿಗಳ ಬೆಲೆಗಳು ಶೇಕಡಾ 10 ರಿಂದ 15 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
  • ರಾಮನಗರಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸಂರಕ್ಷಿಸಬೇಕು. ಮರುನಾಮಕರಣದಿಂದ ಇಲ್ಲಿನ ಸಾಂಸ್ಕೃತಿಕ ಗುರುರು ಕಳೆದುಹೋಗಲಿದೆ ಎಂದು ಕೆಲವು ನಿವಾಸಿಗಳು ಮತ್ತು ಸ್ಥಳೀಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

'ಕರ್ನಾಟಕ'ವಾದ ಮೈಸೂರು ರಾಜ್ಯ: ಕರ್ನಾಟಕ ರಾಜ್ಯವು ನವೆಂಬರ್ 1, 1956 ರಂದು ರಚನೆಯಾಯಿತು. ಇದನ್ನು ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. ಬಳಿಕ 1973ರ ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಐವತ್ತು ವರ್ಷಗಳು ಸಂದಿವೆ.

ಈವರೆಗೂ ಮರುನಾಮಕರಣಗೊಂಡ ನಗರಗಳು

  • ಡಿಸೆಂಬರ್ 11, 2005: ರಾಜ್ಯ ಸರ್ಕಾರವು ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಶಿಫಾರಸ್ಸಿನಂತೆ 'ಬ್ಯಾಂಗಲೂರ್​​' (Bangalore) ಅನ್ನು ಬೆಂಗಳೂರು (Bengaluru) ಆಗಿ ಬದಲಾಯಿಸುವ ಪ್ರಸ್ತಾಪವನ್ನು ಒಪ್ಪಿಕೊಂಡಿತು.
  • ಸೆಪ್ಟೆಂಬರ್ 27, 2006: ಬ್ಯಾಂಗಲೂರ್​​ ಹೆಸರನ್ನು ಬೆಂಗಳೂರು ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಅಂಗೀಕರಿಸಿತು.
  • ಅಕ್ಟೋಬರ್ 17, 2014: ಬೆಂಗಳೂರು ಮತ್ತು ಕರ್ನಾಟಕದ ಇತರ ನಗರಗಳನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರವು ಒಪ್ಪಿಕೊಂಡಿತು.
  • ಈ ಎಲ್ಲಾ ನಗರಗಳನ್ನು ನವೆಂಬರ್ 1, 2014 ರಂದು (ಕನ್ನಡ ರಾಜ್ಯೋತ್ಸವ ದಿನ) ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇದನ್ನೂ ಓದಿ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ - Ramanagara rename

Last Updated : Jul 30, 2024, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.