ETV Bharat / state

ಧಾರವಾಡ ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ: 'ನಾನೂ ಸಹ ಸಹಕಾರ ಕ್ಷೇತ್ರದಿಂದ ಬೆಳೆದವನು': ಡಿಕೆಶಿ

ಧಾರವಾಡದಲ್ಲಿ ನಿನ್ನೆ ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ, ಹಾಗೂ ಸಿಎಂ ಅವರು ಮಾತನಾಡಿದ್ದಾರೆ.

author img

By ETV Bharat Karnataka Team

Published : 1 hours ago

ಡಿಸಿಎಂ ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)

ಧಾರವಾಡ: "ಸಹಕಾರ ಸಂಸ್ಥೆಗಳು ಬೆಳೆಯಬೇಕು. ಇಲ್ಲಿಗೆ ನಾನೊಬ್ಬ ಮಂತ್ರಿ ಅಂತಾ ಬಂದಿಲ್ಲ. ನಾನೂ ಸಹ ಸಹಕಾರ ಕ್ಷೇತ್ರದಿಂದ ಬೆಳೆದವನು, ಸಹಕಾರ ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುವುದು ಕಷ್ಟ ಇದೆ. ಡಿ.ಕೆ. ಶಿವಕುಮಾರ್​ ಮತ್ತು ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಡಿಸಿಎಂ ಹೇಳಿದ್ದಾರೆ.

ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ , "ಇವತ್ತು ನಮಗೆ ಯಲ್ಲಮ್ಮದೇವಿ ದರ್ಶನ ಮಾಡಿಸಿದ್ದಾರೆ. ಪುಸ್ತಕಗಳ ಬಿಡುಗಡೆ ಮಾಡಿಸಿದ್ದಾರೆ. ಇದು ನನ್ನ ಭಾಗ್ಯ. ಸಹಾಯ ಮಾಡಿದವರನ್ನು ನೆನಪಿಸಿಕೊಂಡರೆ ಮಾತ್ರ ಫಲ ಸಿಗುತ್ತದೆ. ಸಹಕಾರ ಸಂಸ್ಥೆಯಿಂದ ರಾಜಕಾರಣಕ್ಕೆ ಬಂದವನು ನಾನು. 1983ರಲ್ಲಿ ನಾನೂ ಸೊಸೈಟಿ ಎಲೆಕ್ಷನ್​ಗೆ ನಿಂತಿದೆ. ರಾಜೀವ್​ ಗಾಂಧಿ ಅವರು ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ನನಗೆ ಕೆ.ಎಚ್.‌ ಪಾಟೀಲರು ಬಿ. ಫಾರ್ಮ್ ನೀಡಿ, ದೇವೇಗೌಡರ ಮೇಲೆ ನೀನು ಫೈಟ್ ಮಾಡುತ್ತೀಯಾ ಎಂದು ಕೇಳಿದ್ದರು. ಆದರೆ ಆಗ ಸೋತಿದ್ದೇನೆ. ಈಗ 8ನೇ ಬಾರಿ ಆಯ್ಕೆಯಾಗಿದ್ದೇನೆ. ಕೆ.ಎಚ್​​. ಪಾಟೀಲರ ಜೊತೆ ಟಿಕೆಟ್ ಪಡೆದಿದ್ದೇನೆ. ಅವರ ಜೊತೆ ಎಂಎಲ್‌ಎ ಮಂತ್ರಿಯಾಗಿದ್ದೇನೆ. ಹಾಗೆಯೇ ಅವರ ಪುತ್ರ ಹೆಚ್​.ಕೆ. ಪಾಟೀಲರ ಜೊತೆಯೂ ಎಂಎಲ್‌ಎ, ಮಂತ್ರಿಯಾದವನು ನಾನು. ಹಾಗೇ ಒಂದೆರಡು ವರ್ಷ ಸಹಕಾರ ಸಚಿವ ಆಗಿದ್ದೇನೆ" ಎಂದು ಡಿಸಿಎಂ ನೆನಪಿಸಿಕೊಂಡರು.

ಬ್ಯಾಂಕಿಂಗ್​ ಕ್ಷೇತ್ರಕ್ಕೆ ಶಕ್ತಿ ಬಂದಿದ್ದು ಮನಮೋಹನ್​​ ಸಿಂಗ್​​ರಿಂದ: "ಮನಮೋಹನ್​ ಸಿಂಗ್ ಪ್ರಧಾನಿಯಾಗಿದ್ದರಿಂದ ನಮ್ಮ ದೇಶದ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಶಕ್ತಿ ಇದೆ. ಅನೇಕ ದೇಶಗಳ ಬ್ಯಾಂಕ್​ಗಳು ಮುಳುಗಿ ಹೋಗಿವೆ. ಸತ್ಯ ಸಾಯಿಬಾಬಾ ದುಡ್ಡು, ಬ್ಲಡ್ ಹೇಗೆ ಸರ್ಕ್ಯೂಲೇಟ್​ ಆಗುತ್ತಾ ಇರುತ್ತದೋ ಹಾಗೇ ಹಣ ಹರದಾಡುತ್ತ ಇರಬೇಕು. ಮನೆಯಲ್ಲಿಯೇ ಹಣ ಉಳಿದರೆ ಜಿಎಸ್‌ಟಿ, ಕಂದಾಯ ತೆರಿಗೆ ಬರುತ್ತದೆ. ಮನೆಯ ಮಡಕೆಯಲ್ಲಿ ಇಟ್ಟರೆ ಕಳ್ಳರ ಪಾಲಾಗುತ್ತದೆ. ಸಹಕಾರ ತತ್ವದಲ್ಲಿ ಎಲ್ಲವೂ ಸಿಗುತ್ತದೆ. ಎಲ್ಲ ಕ್ಷೇತ್ರದಲ್ಲಿ ಸಹಕಾರ ರಂಗ ಇದೆ. ಹುಕ್ಕೇರಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದಲೇ ಅನೇಕ ಕಡೆ ಬಸ್ ಸಂಚಾರವೂ ಇದೆ" ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

ನಾನು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ- ಸಿಎಂ: ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, "ನಾನು ಯಾವತ್ತೂ ಕೂಡ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ನನಗೆ ಸಹಕಾರಿ ಕ್ಷೇತ್ರದಲ್ಲಿ ಜ್ಞಾನ ಕಡಿಮೆ. ಹೀಗಾಗಿ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಬ್ಯಾಂಕ್ ಚೆನ್ನಾಗಿ ನಡೆದಾಗಲೇ ಶತಮಾನೋತ್ಸವ ಆಗಬೇಕು. ಯಾವುದೇ ಬ್ಯಾಂಕ್ ಲಾಭದಾಯಕ ನಡೆಯಲಿ ಅಲ್ಲಿನ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಇರಬೇಕು. ಹೆಗ್ಗಣಗಳು ಸೇರಿಕೊಂಡರೆ ಬಹಳ ಕಷ್ಟ. ಕೆ.ಎಚ್. ‌ಪಾಟೀಲರು ಕಡಿಮೆ ಅವಧಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಸಹಕಾರ ಭೀಷ್ಮ ಎಂದು ಕರೆಯುತ್ತೇವೆ. ಸಹಕಾರ ಕ್ಷೇತ್ರದ ಉದ್ದೇಶ ಎಲ್ಲರಿಗಾಗಿ. ಸಹಕಾರ ಬ್ಯಾಂಕ್​ಗಳು ಕಮರ್ಷಿಯಲ್​ ಬ್ಯಾಂಕ್​ಗಳ ಜೊತೆ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿ ಉಳಿದುಕೊಳ್ಳಬೇಕು. ರೆಡ್ಡಿ ಜನಾಂಗದವರು ಮೂಲತಃ ವ್ಯವಸಾಯಗಾರರು. ಹೀಗಾಗಿ ಬ್ಯಾಂಕ್​ ಅನುಕೂಲ ಆಗಿದೆ. ಈ ಅನುಕೂಲಕ್ಕಾಗಿ ಧಾರವಾಡದ ರೆಡ್ಡಿ ಬ್ಯಾಂಕ್ ಆರಂಭವಾಗಿರಬಹುದು".

ಏಷ್ಯಾದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಹಕಾರ ಬ್ಯಾಂಕ್​: 1905ರಲ್ಲೇ ಏಷ್ಯಾದಲ್ಲಿಯೇ ಮೊದಲು ಸಹಕಾರ ಕ್ಷೇತ್ರ ಕರ್ನಾಟಕದಲ್ಲಿ ಆರಂಭವಾದದ್ದು. ಸಹಕಾರ ಕ್ಷೇತ್ರಕ್ಕೆ ನಮ್ಮ ಸರ್ಕಾರ ಎಲ್ಲ ಸಹಾಯ, ಸಹಕಾರ ಕೊಡುತ್ತದೆ. ಸಹಕಾರಿ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ, ಸಹಾಯ ಕೊಡುತ್ತೇವೆ ನಾನು ಇಲ್ಲಿ ರಾಜಕೀಯ ಮಾತನಾಡಲಾರೆ. ಇದು ರಾಜಕೀಯ ಮಾತಮಾಡುವ ವೇದಿಕೆ ಅಲ್ಲ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಈ ಅಸಮಾನತೆ ಹೋಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಸಿಗಬೇಕು. ಆಗ ಮಾತ್ರ ಸಮಾನತೆ ಸಮಾಜ ನಿರ್ಮಾಣ ಸಾಧ್ಯ ಸಮಾನತೆ ನಿರ್ಮಿಸುವಲ್ಲಿ ಸಹಕಾರ ಕ್ಷೇತ್ರ ಕೂಡ ದೊಡ್ಡ ಕೊಡುಗೆ ನೀಡುತ್ತದೆ" ಎಂದು ಸಿಎಂ ತಮ್ಮ ಭಾಷಣವನ್ನು ಕೊನೆಗೊಳಿಸಿದರು.

ಇದನ್ನೂ ಓದಿ: ಜನರ ಆಶೀರ್ವಾದ ಇರೋವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ: ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.