ETV Bharat / state

ಉತ್ತರಕನ್ನಡದಲ್ಲಿ ಜುಲೈನಲ್ಲಿ ದಾಖಲೆಯ ಮಳೆ; 13 ಜೀವಗಳ ಜೊತೆ ಅಪಾರ ಆಸ್ತಿ-ಪಾಸ್ತಿ ಹಾನಿ - Uttara Kannada Rain - UTTARA KANNADA RAIN

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಇದುವರೆಗೆ 13 ಜೀವ ಹಾನಿ ಪ್ರಕರಣಗಳಿಗೆ 65 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

rainfall
ಮಳೆ (ETV Bharat)
author img

By ETV Bharat Karnataka Team

Published : Aug 3, 2024, 9:56 PM IST

ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ಪ್ರಸಕ್ತ ಜುಲೈ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಶೇಕಡಾ 81ರಷ್ಟು ಅತ್ಯಧಿಕ ಮಳೆಯಾಗಿದೆ. ಜೂನ್​ನಿಂದ ಇದುವರೆಗೆ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಯ ಪ್ರಮಾಣ 993.4 ಮಿ.ಮೀ. ಇದ್ದು, ಆದರೆ ಈ ಬಾರಿ 1798.2 ಮಿ.ಮೀ. ಮಳೆ ಬೀಳುವ ಮೂಲಕ ಶೇ.81ರಷ್ಟು ಅಧಿಕ ವರ್ಷಧಾರೆ ದಾಖಲಾಗಿದೆ. ಜನವರಿ 2024ರಿಂದ ಇಲ್ಲಿಯವರೆಗೆ 1882.3 ಮಿ.ಮೀ. ವಾಡಿಕೆ ಮಳೆ ಇದ್ದು, 2745.7 ಮಿ.ಮೀ. ಮಳೆಯಾಗುವ ಮೂಲಕ ಶೇ.46ರಷ್ಟು ಅಧಿಕ ಮಳೆಯಾದಂತಾಗಿದೆ.

rainfall
ಮನೆಗಳು ಜಲಾವೃತ (ETV Bharat)

ವ್ಯಾಪಕ ಮಳೆಯಿಂದಾಗಿ ಇದುವರೆಗೆ 13 ಜೀವ ಹಾನಿ ಪ್ರಕರಣಗಳಿಗೆ 65 ಲಕ್ಷ ರೂ. ಪರಿಹಾರ ನೀಡಲಾಗಿದೆ. ತೀವ್ರ ಮತ್ತು ಸಂಪೂರ್ಣ ಹಾನಿಯಾದ 211 ಮನೆಗಳಲ್ಲಿ 148 ಮನೆಗಳಿಗೆ 1,52,40,000 ರೂ.ಗಳ ಪರಿಹಾರ ಹಾಗೂ ಭಾಗಶಃ ಹಾನಿಯಾದ 724 ಮನೆಗಳಲ್ಲಿ 449 ಮನೆಗಳಿಗೆ 24,44,000 ರೂ.ಗಳ ನೆರವು ನೀಡಲಾಗಿದೆ. 22 ಜಾನುವಾರು ಜೀವಹಾನಿ ಪ್ರಕರಣಗಳಿಗೆ 5,22,000 ರೂ. ಪರಿಹಾರ ವಿತರಿಸಲಾಗಿದೆ. ಮಳೆಯಿಂದ 383 ಹೆಕ್ಟೇರ್ ಕೃಷಿ ಭೂಮಿ ಮತ್ತು 21.51 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿ ಸಂಭವಿಸಿದೆ. ಈ ನಷ್ಟದ ಅಂದಾಜು ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

rainfall
ಮನೆ ಗೋಡೆ ಕುಸಿತ (ETV Bharat)

ಮನೆ ಹಾನಿ ಪ್ರಕರಣಗಳಲ್ಲಿ ಅಂಕೋಲಾ ತಾಲೂಕಿನಲ್ಲಿ 19 ಮನೆಗಳು ಪೂರ್ಣ ಹಾನಿ ಮತ್ತು 23 ಮನೆಗಳಿಗೆ ಭಾಗಶಃ ಹಾನಿ, ಭಟ್ಕಳ ತಾಲೂಕಿನಲ್ಲಿ 50 ಮನೆಗಳು ಪೂರ್ಣ ಹಾನಿ ಮತ್ತು 101 ಮನೆಗಳಿಗೆ ಭಾಗಶಃ ಹಾನಿ, ದಾಂಡೇಲಿ ತಾಲೂಕಿನಲ್ಲಿ 4 ಮನೆಗಳು ಪೂರ್ಣ ಹಾನಿ ಮತ್ತು 10 ಮನೆಗಳಿಗೆ ಭಾಗಶಃ ಹಾನಿ, ಹಳಿಯಾಳ ತಾಲೂಕಿನಲ್ಲಿ 5 ಮನೆಗಳು ಪೂರ್ಣ ಹಾನಿ ಮತ್ತು 41 ಮನೆಗಳಿಗೆ ಭಾಗಶಃ ಹಾನಿ, ಹೊನ್ನಾವರ ತಾಲೂಕಿನಲ್ಲಿ 25 ಮನೆಗಳು ಪೂರ್ಣ ಹಾನಿ ಮತ್ತು 65 ಮನೆಗಳಿಗೆ ಭಾಗಶಃ ಹಾನಿ, ಕಾರವಾರ ತಾಲೂಕಿನಲ್ಲಿ 18 ಮನೆಗಳು ಪೂರ್ಣ ಹಾನಿ ಮತ್ತು 30 ಮನೆಗಳಿಗೆ ಭಾಗಶಃ ಹಾನಿ, ಕುಮಟಾ ತಾಲೂಕಿನಲ್ಲಿ 32 ಮನೆಗಳು ಪೂರ್ಣ ಹಾನಿ ಮತ್ತು 192 ಮನೆಗಳಿಗೆ ಭಾಗಶಃ ಹಾನಿ, ಮುಂಡಗೋಡು ತಾಲೂಕಿನಲ್ಲಿ 20 ಮನೆಗಳು ಪೂರ್ಣ ಹಾನಿ ಮತ್ತು 63 ಮನೆಗಳಿಗೆ ಭಾಗಶಃ ಹಾನಿ, ಸಿದ್ದಾಪುರ ತಾಲೂಕಿನಲ್ಲಿ 15 ಮನೆಗಳು ಪೂರ್ಣ ಹಾನಿ ಮತ್ತು 83 ಮನೆಗಳಿಗೆ ಭಾಗಶಃ ಹಾನಿ, ಶಿರಸಿ ತಾಲೂಕಿನಲ್ಲಿ 5 ಮನೆಗಳು ಪೂರ್ಣ ಹಾನಿ ಮತ್ತು 37 ಮನೆಗಳಿಗೆ ಭಾಗಶಃ ಹಾನಿ, ಜೋಯಿಡಾ ತಾಲೂಕಿನಲ್ಲಿ 4 ಮನೆಗಳು ಪೂರ್ಣ ಹಾನಿ ಮತ್ತು 23 ಮನೆಗಳಿಗೆ ಭಾಗಶಃ ಹಾನಿ, ಹಾಗೂ ಯಲ್ಲಾಪುರ ತಾಲೂಕಿನಲ್ಲಿ 14 ಮನೆಗಳು ಪೂರ್ಣ ಹಾನಿ ಮತ್ತು 46 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ತಿಳಿಸಿದರು.

rainfall
ಶಿರೂರು ಗುಡ್ಡ ಕುಸಿತ (ETV Bharat)
rainfall
ಶಿರೂರು ಗುಡ್ಡ ಕುಸಿತ (ETV Bharat)

ಮೂಲ ಸೌಕರ್ಯಗಳಿಗೂ ಹೆಚ್ಚಿನ ಹಾನಿ ಸಂಭವಿಸಿದ್ದು, 291 ಅಂಗನವಾಡಿಗಳಿಗೆ 643.50 ಲಕ್ಷ ರೂ., 556 ಶಾಲೆಗಳಿಗೆ 1529.60 ಲಕ್ಷ ರೂ., 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 21 ಲಕ್ಷ ರೂ., 114 ಸೇತುವೆ ಮತ್ತು ಮೋರಿಗಳಿಗೆ 3138.70 ಲಕ್ಷ ರೂ., 398 ಕಿ.ಮೀ ರಸ್ತೆಗೆ 2778.15 ಲಕ್ಷ ರೂ., 191 ಕಿ.ಮೀ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗೆ 11642 ಲಕ್ಷ ರೂ. ಸೇರಿದಂತೆ ಒಟ್ಟು 19752.95 ಲಕ್ಷ ರೂ.ಗಳ ಹಾನಿಯ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ 4,667 ವಿದ್ಯುತ್ ಕಂಬಗಳು ಧರೆಗುರುಳಿವೆ. 374 ಟ್ರಾನ್ಸ್​ಫಾರ್ಮರ್​ಗಳಿಗೆ ಹಾನಿ ಮತ್ತು 204.83 ಕಿ.ಮೀ. ದೂರದಷ್ಟು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ಕಾಮಗಾರಿ ಗುಡ್ಡ ಕುಸಿತಕ್ಕೆ ಕಾರಣ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ - Unscientific Road Work

ETV Bharat Logo

Copyright © 2025 Ushodaya Enterprises Pvt. Ltd., All Rights Reserved.