ETV Bharat / state

ರಾಜ್ಯಸಭೆ ಚುನಾವಣೆ: ಬಿಜೆಪಿ ಟಿಕೆಟ್ ಪಡೆದ ನಾರಾಯಣಸಾ ಭಾಂಡೆಗೆ ಯಾರು? - Narayanasa Bhande

ಬಿಜೆಪಿ ಪಕ್ಷ ನಿಷ್ಠೆ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿರುವ ನಾರಾಯಣಸಾ ಭಾಂಡೆಗೆ ಅವರಿಗೆ ರಾಜ್ಯಸಭೆ ಟಿಕೆಟ್​ ನೀಡಲಾಗಿದೆ.

Bagalkote  ಬಾಗಲಕೋಟೆ  Rajya Sabha ticket  Narayanasa Bhande  ನಾರಾಯಣಸಾ ಭಾಂಡೆಗೆ
ನಾರಾಯಣಸಾ ಭಾಂಡೆಗೆ ರಾಜ್ಯಸಭೆ ಬಿಜೆಪಿ ಟಿಕೆಟ್
author img

By ETV Bharat Karnataka Team

Published : Feb 12, 2024, 7:16 AM IST

Updated : Feb 12, 2024, 9:51 AM IST

ಬಾಗಲಕೋಟೆ: ತಮ್ಮ 17ನೇ ವರ್ಷ ದಲ್ಲಿ ಆರ್​ಎಸ್ಎಸ್ ಸೇರಿ, ಬಿಜೆಪಿ ಪಕ್ಷ ನಿಷ್ಠೆ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿರುವ ನಾರಾಯಣಸಾ ಭಾಂಡೆಗೆ ಅವರಿಗೆ ರಾಜ್ಯಸಭೆ ಟಿಕೆಟ್​ ಲಭಿಸಿದೆ. ಕೆಳಮಟ್ಟದ ಕಾರ್ಯಕರ್ತರನ್ನು ಪಕ್ಷ ಗುರುತಿಸಿ ಅವಕಾಶ ನೀಡಿದೆ. ಇವರು ಕಳೆದ 40 ವರ್ಷಗಳಿಂದ ಆರ್​ಎಸ್ಎಸ್ ಸಂಘಟನೆ ಮತ್ತು‌ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುತ್ತಾ, ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Bagalkote  ಬಾಗಲಕೋಟೆ  Rajya Sabha ticket  Narayanasa Bhande  ನಾರಾಯಣಸಾ ಭಾಂಡೆಗೆ
ನರೇಂದ್ರ ಮೋದಿ ಜೊತೆಗೆ ನಾರಾಯಣಸಾ ಭಾಂಡೆಗೆ

ಬಿಜೆಪಿಯಲ್ಲಿ ನಾರಾಯಣಸಾ ಭಾಂಡೆಗೆ ನಡೆದು ಬಂದ ದಾರಿ: ಬಾಗಲಕೋಟೆ‌ ಜಿಲ್ಲೆಯಲ್ಲಿ ಎಬಿವಿಪಿ ಶಾಖೆಯನ್ನು ಹುಟ್ಟು ಹಾಕಿ, ಆರು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದರು. ವಿಶ್ವ ಹಿಂದೂ ಪರಿಷತ್ ಪ್ರಭಾರಿ ಆಗಿ, ಉಡುಪಿ ವಿಶ್ವೇಶ್ವರ ಪೇಜಾವರ ಶ್ರೀಗಳೊಂದಿಗೆ ಪ್ರವಾಹ ಸಂದರ್ಭದಲ್ಲಿ ಸಂಚಾರ ಮಾಡಿ, ಪ್ರವಾಹ ಪೀಡಿತ ಜನರಿಗೆ ಧವಸ ಧ್ಯಾನ ಹಾಗೂ ಇತರ ವಸ್ತುಗಳ ಹಂಚಿಕೆ ಮಾಡಿದ್ದರು. ಅಲ್ಲದೇ, 1973 ರಿಂದ ಜನ ಸಂಘದಿಂದಲೂ ರಾಜಕೀಯಕ್ಕೆ ಬಂದ ಭಾಂಡೆಗೆ ಅವರು, ಆಲಮಟ್ಟಿ ಆಣೆಕಟ್ಟಿಗೆ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಭೇಟಿ‌ ನೀಡಿದಾಗ ಇವರು ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಪೊಲೀಸ್​ ಲಾಠಿ ಚಾರ್ಜ್​ನಿಂದ ಗಾಯವಾಗಿ 18 ದಿನ ಜೈಲಿನಲ್ಲಿ ಇದ್ದರು. ತುರ್ತು ಪರಿಸ್ಥಿತಿ ಹಾಗೂ ಅಯೋಧ್ಯೆಗೆ ನೂರು ಕರ ಸೇವಕರನ್ನು ಕರೆದುಕೊಂಡು ಹೋಗುತ್ತಿರುವಾಗ ಜೈಲು ಸೇರಿದ್ದರು. ಕಾಶ್ಮೀರದಲ್ಲಿ ನಡೆದ ತಿರಂಗಾ ಯಾತ್ರೆ ಸಮಯದಲ್ಲಿ 60 ಜನ ಕಾರ್ಯಕರ್ತರನ್ನು ಹೋರಾಟದಲ್ಲಿ ಕರೆದುಕೊಂಡು ಹೋಗಿ ಯಶಸ್ವಿಗೊಳಿಸಿದ್ದರು.

ಬಿಜೆಪಿ ಕಾರ್ಯಕರ್ತರೊಂದಿಗೆ ನಾರಾಯಣಸಾ ಭಾಂಡೆಗೆ

ಹೀಗೆ ಹತ್ತು ಹಲವು ಹೋರಾಟದಲ್ಲಿ ಭಾಗವಹಿಸಿರುವ ಜೊತೆಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ, ವಿಜಯಪುರ ಜಿಲ್ಲಾ ಯುವ ಮೊರ್ಚಾದ ಅಧ್ಯಕ್ಷ, ರಾಜ್ಯ ಘಟಕ ಕಾರ್ಯದರ್ಶಿ, ಉಪಾಧ್ಯಕ್ಷ, ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯರಾಗಿ, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಸಮಯದಲ್ಲಿ ಒಂದು ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕವಾಗಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದಾರೆ. ಹಿಂದೂ ಕ್ಷತ್ರೀಯ, ಎಸ್ಎಸ್​ಕೆ ಸಮಾಜದ ಮುಖಂಡರಾಗಿ‌ ಸಾಮಾಜಿಕ ಹಾಗೂ ರಾಜಕೀಯ ದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ನಾರಾಯಣಸಾ ಭಾಂಡೆಗೆ ಸನ್ಮಾನಿಸಿದ್ದ ಬಿಜೆಪಿ ನಾಯಕರು

ಇದೀಗ ಲೋಕಸಭಾ ಚುನಾವಣೆ ಮುನ್ನ ಕ್ಷತ್ರೀಯ ಮುಖಂಡ ನಾರಾಯಣಸಾ ಭಾಂಡೆಗೆ ಅವರಿಗೆ ರಾಜ್ಯಸಭೆಯ ಟಿಕೆಟ್​ ನೀಡುವ ಮೂಲಕ ಮರಾಠಾ ಹಾಗೂ ಕ್ಷತ್ರೀಯ ಸಮುದಾಯ ಓಲೈಸುವ ತಂತ್ರವು ಹೈಕಮಾಂಡ್​ ರೂಪಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಅಮಿತ್ ಶಾ ರಾಜ್ಯ ಪ್ರವಾಸ ಯಶಸ್ವಿಯಾಗಿದೆ: ಬಿ ವೈ ವಿಜಯೇಂದ್ರ

Last Updated : Feb 12, 2024, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.