ETV Bharat / state

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬೆಂಗಳೂರಲ್ಲಿ ದಿನಪೂರ್ತಿ ಜಿಟಿಜಿಟಿ ಮಳೆ - rain in Bengaluru - RAIN IN BENGALURU

ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಬೆಂಗಳೂರಿನಲ್ಲಿಯೂ ಇಂದು ಸಾಧಾರಣ ಮಳೆಯಾಗಿದೆ.

ಬೆಂಗಳೂರಿನಲ್ಲಿ ಇಡೀ ದಿನ ಜಿಟಿಜಿಟಿ ಮಳೆ
ಬೆಂಗಳೂರಿನಲ್ಲಿ ಇಡೀ ದಿನ ಜಿಟಿಜಿಟಿ ಮಳೆ (ETV Bharat)
author img

By ETV Bharat Karnataka Team

Published : Jul 15, 2024, 10:00 PM IST

Updated : Jul 15, 2024, 10:08 PM IST

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ನಗರದಲ್ಲಿಯೂ ಹಗುರ ಮಳೆಯಾಗುತ್ತಿದೆ. ರಾಜಧಾನಿಯಲ್ಲಿ ಸತತ 2ನೇ ದಿನವೂ ಜಿಟಿಜಿಟಿ ಮಳೆ ಸುರಿದಿದೆ. ಶೀತಗಾಳಿ ಬೀಸುತ್ತಿದೆ. ತೇವಾಂಶ ಭರಿತ ಮೋಡಗಳಿರುವುದು ಹಾಗೂ ನಿರಂತರ ಮಳೆಯಿಂದಾಗಿ ನಗರದಲ್ಲಿ ತಂಪು ವಾತಾವರಣ ಕಾಣಿಸಿಕೊಳ್ಳುತ್ತಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣ ಉಂಟಾದ ಪರಿಣಾಮ ಜನರಿಗೆ ಮಲೆನಾಡಿನ ವಾತಾವರಣದ ಅನುಭವವಾಗಿದ್ದು, ಇದರಿಂದಾಗಿ ಬೆಚ್ಚಗಿನ ಉಡುಪುಗಳ ಮೊರೆಗೆ ಹೋಗುವಂತಾಗಿದೆ.

ಯಲಹಂಕ, ಪೂರ್ವ, ಪಶ್ಚಿಮ, ದಕ್ಷಿಣ, ರಾಜರಾಜೇಶ್ವರಿ ನಗರ ವಲಯ ಸೇರಿ ನಗರಾದ್ಯಂತ ಮಳೆಯಾಯಿತು. ಕೋರಮಂಗಲ, ಮಡಿವಾಳ, ವಿಲ್ಸನ್​ ಗಾರ್ಡನ್​, ಡೇರಿ ಸರ್ಕಲ್​, ಜಕ್ಕೂರು, ಕೆ.ಆರ್​.ಮಾರುಕಟ್ಟೆ, ಮೆಜೆಸ್ಟಿಕ್​, ದಯಾನಂದನಗರ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಕತ್ತರಿಗುಪ್ಪೆ, ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ, ಯಲಹಂಕ ಸೇರಿ ನಗರದ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕೆಲವೆಡೆ ಮಾತ್ರ ಧಾರಾಕಾರವಾಗಿ ವರ್ಷಧಾರೆಯಾಗುತ್ತಿದೆ.

ಇಂದು ವಿಧಾನಸೌಧ, ಹೆಬ್ಬಾಳ ರಸ್ತೆ, ಕೆ.ಆರ್​.ಮಾರುಕಟ್ಟೆ ಸೇರಿ ವಿವಿಧ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಬಳ್ಳಾರಿ ರಸ್ತೆಯಲ್ಲಿ ಕಿ.ಮೀ ಗಟ್ಟಲೆ ದಟ್ಟಣೆ ಉಂಟಾದ ಪರಿಣಾಮ ಸವಾರರು ಪರದಾಡುವಂತಾಗಿತ್ತು. ಕೆಲ ಭಾಗಗಳಲ್ಲಿ ವಿದ್ಯುತ್​ ಪೂರೈಕೆ ವ್ಯತ್ಯಯವಾಗಿತ್ತು.

24.1 ಡಿ.ಸೆ ಉಷ್ಣಾಂಶ ದಾಖಲು: ನಗರದಲ್ಲಿ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಇಳಿಕೆಯಾಗಿದೆ. ಸೋಮವಾರ ಗರಿಷ್ಠ ತಾಪಮಾನದಲ್ಲಿ 24.1 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಪ್ರತಿ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಬಿಡುವು ಕೊಡದ ಮಳೆ: ನಾಳೆ ಶಾಲಾ ಕಾಲೇಜುಗಳಿಗೆ ರಜೆ - HOLIDAY TO SCHOOL COLLEGES

Last Updated : Jul 15, 2024, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.