ETV Bharat / state

ನಾಳೆ ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ: ಸಚಿವ ಮಧು ಬಂಗಾರಪ್ಪ - Rahul Gandhi

ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್‌ ಪರ ಪ್ರಚಾರ ನಡೆಸಲು ನಾಳೆ ರಾಹುಲ್‌ ಗಾಂಧಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಾಳೆ ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ: ಸಚಿವ ಮಧು ಬಂಗಾರಪ್ಪ

author img

By ETV Bharat Karnataka Team

Published : May 1, 2024, 6:14 PM IST

Updated : May 1, 2024, 6:41 PM IST

ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್‌ ಪರ ಮತ ಪ್ರಚಾರಕ್ಕೆ ರಾಹುಲ್‌ ಗಾಂಧಿ ಏ.2ರಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಇಂದು ಅಲ್ಲಮಪ್ರಭು ಮೈದಾನದಲ್ಲಿ ನಾಳಿನ ಸಮಾವೇಶದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ರಾಹುಲ್​ ಗಾಂಧಿಯವರ ಸಮಾವೇಶಕ್ಕೆ ಕ್ಷೇತ್ರದೆಲ್ಲೆಡೆಯಿಂದಲೂ ಜನರು ಆಗಮಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ, ಶಿವರಾಜ್​ ಕುಮಾರ್​ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ನಗರದಲ್ಲಿ ಮತದಾರರು ಮತ್ತು ನಮ್ಮ ಮುಖಂಡರ ನಡುವಿನ ಬಾಂಧವ್ಯ ನೋಡಿದಾಗ ನಾವು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಇನ್ನು ನಮ್ಮ ಬೂತ್,​ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ಈ ಹಿಂದೆಲ್ಲಾ ಭಾಷಣ ಮಾಡಿ ಮತ ಹಾಕಿಸಿಕೊಳ್ಳುತ್ತಿದ್ದರು. ಈಗ ಆ ರೀತಿ ಆಗಲ್ಲ, ಮತದಾರರ ಮನೆಗೆ ಹೋಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೇ ಆಮೇಲೆ ಅವರು ಮತ ಹಾಕುವ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲೂ ಸಹ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಧಾನ ಮಂತ್ರಿಗಳ ಭಾಷಣ, ಅವರ ಹಾವಭಾವ ಗಮನಿಸಿದಾಗ ಹತಾಶರಾಗಿರುವುದು ಎದ್ದು ಕಾಣಿಸುತ್ತದೆ. ಮತ ಧ್ರುವೀಕರಣದ ಮೇಲೆ ಬಿಜೆಪಿ ರಾಜಕೀಯ ಮಾಡಿಕೊಂಡು ಬಂದಿದೆ. ಅದು ಈ ಬಾರಿ ನಿಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಇದನ್ನೂ ಓದಿ: 'ರಿಚಾರ್ಜ್ ಗಿರಾಕಿ' ಎಂದು ಸಹೋದರನ ವಿರುದ್ಧ ಮಧು ಬಂಗಾರಪ್ಪ ಪರೋಕ್ಷ ವಾಗ್ದಾಳಿ - Madhu Bangarappa

Last Updated : May 1, 2024, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.