ETV Bharat / state

ಬಿಜೆಪಿಗೆ ಲೋಕಸಭೆಯಲ್ಲಿ 400 ಸೀಟ್ ಗೆಲ್ಲುವ ಗುರಿ ಇದೆ: ಆರ್ ಅಶೋಕ್ - ಪ್ರತಿಪಕ್ಷದ ನಾಯಕ ಆರ್ ಅಶೋಕ್

ಮೋದಿ ಮತ್ತೆ ಪ್ರಧಾನಿ ಆಗ್ತಾರೆ, ರಾಜ್ಯದಲ್ಲಿ 28 ಸ್ಥಾನ ಬಿಜೆಪಿ ಗೆಲ್ಲುತ್ತೆ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಪರ ಬಾಲಕೃಷ್ಣ ಈ ಮಾತನ್ನು ಹೇಳ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

R Ashok addressed the press conference.
ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Jan 31, 2024, 6:48 PM IST

Updated : Jan 31, 2024, 8:56 PM IST

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಧ್ಯಮದವರ ಜೊತೆ ಮಾತನಾಡಿದರು.

ಚಿಕ್ಕಮಗಳೂರು: ಅಕ್ಷತೆ ಬೇಕಾ, ಗ್ಯಾರಂಟಿ ಬೇಕಾ ಎಂದು ಶಾಸಕ‌ ಬಾಲಕೃಷ್ಣ ಹೇಳಿಕೆಗೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಕಾಂಗ್ರೆಸ್​ ಸೋತ ಹೋದ್ರೆ ಸರ್ಕಾರದ ಗ್ಯಾರಂಟಿಗಳು ವಾಪಸ್​ ಅನ್ನುವ ರೀತಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಚುನಾವಣೆ ಮುನ್ನ, ಅಂದರೆ ಕಾಂಗ್ರೆಸ್ಸಿಗರು ಯುದ್ಧಕ್ಕೆ ಮುಂಚೆಯೇ ಸೋಲು ಒಪ್ಪಿಕೊಂಡಿದಂತೆ ಆಗಿದೆ. ಬಿಜೆಪಿ ಗೆಲ್ಲುತ್ತೆ ಅನ್ನೋದು ಈಗ ಕನ್ಫರ್ಮ್ ಆಗಿದೆ. ಮೋದಿ ಮತ್ತೆ ಪ್ರಧಾನಿ ಆಗ್ತಾರೆ, ರಾಜ್ಯದಲ್ಲಿ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತೆ ಅಂತ ಕಾಂಗ್ರೆಸ್ ಶಾಸಕರ ಬಾಯಿಂದಲೇ ಕೇಳಿ ಬರುತ್ತಿದೆ. ಈಗ ಕಾಂಗ್ರೆಸ್ ಶಾಸಕರ ಪರ ಶಾಸಕ ಬಾಲಕೃಷ್ಣ ಮಾತನಾಡಿರುವುದು ನಮಗೆ ಅನಿಸುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಇಂದು I.N.D.I.A ಒಡೆದು ಚೂರಾಗಿದೆ. ನಮ್ಮ ಟಾರ್ಗೆಟ್ ದೇಶದಲ್ಲಿ 400 ಸೀಟ್ ಗೆಲ್ಲಬೇಕು ಅನ್ನೋದು ಇದೆ ಎಂದು ಹೇಳಿದರು.

ರಾಜ್ಯಾದ್ಯಂತ ಮನೆ-ಮನೆಯಲ್ಲಿ ಹಿಂದುಪರ ಸಂಘಟನೆಗಳಿಂದ ಹನುಮ ಧ್ವಜ ಅಭಿಯಾನ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶೋಕ್​, ವಿಎಚ್​ಪಿ ಕರೆ ನೀಡಿದೆ. ಅವರು ಮಾಡ್ತಾರೆ, ಅದಕ್ಕೆ ನಮ್ಮ ಬೆಂಬಲವಿದೆ. ಎಲ್ಲರ ಮನೆಯಲ್ಲೂ ರಾಮ ಇದ್ದಾನೆ. ದೇಶದಲ್ಲೇ ಹನುಮ ಇಲ್ಲದ ಊರಿಲ್ಲ. ಕಾಂಗ್ರೆಸ್ಸಿಗರು ಹನುಮನನ್ನು ಕೆಣಕಿ, ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ. ಬಾಲಕ್ಕೆ ಬೆಂಕಿ ಬಿದ್ದ ಮೇಲೆ ಹನುಮ ಏನು ಮಾಡಬೇಕೋ ಅದನ್ನೇ ಮಾಡುತ್ತಾನೆ ಎಂದರು.

ನಾನು ಹಿಂದು.. ಹಿಂದು ಅನ್ನೋ ಕಾಂಗ್ತೆಸ್ಸಿಗರು ಮಾಡೋದು ಅನಾಚಾರ. ಚುನಾವಣೆಯೊಳಗೆ ಬಹಳಷ್ಟು ಜನ ಬಿಜೆಪಿ ಸೇರುತ್ತಾರೆ. ಮೋದಿಯಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಬಿ ವೈ ವಿಜಯೇಂದ್ರ ಕಿಡಿ; ಲೋಕಸಭಾ ಚುನಾವಣೆ ಹಿನ್ನೆಲೆ ಅಕ್ಷತೆ ಬೇಕಾ, ಗ್ಯಾರಂಟಿ ಬೇಕಾ ಎಂದು ಶಾಸಕ‌ ಬಾಲಕೃಷ್ಣ ಅವರು ನೀಡಿದ್ದ ಹೇಳಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ.

ಜಿಲ್ಲೆಯ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ''ಇದು ಬ್ಲಾಕ್​ಮೇಲ್ ಅಲ್ಲದೆ ಮತ್ತೇನು, ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು. ಸರ್ಕಾರ ಬಂದು 8 ತಿಂಗಳ ಕಳೆದರೂ, ಒಂದೂ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ. ಅವರ ಗ್ಯಾರಂಟಿಯಿಂದ ರಾಜ್ಯದ ಜನ ಬೀದಿಗೆ ಬರುವ ಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್​​ಸೆಟ್​​ಗೆ ಕರೆಂಟ್ ಇಲ್ಲ. ಅವರು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದು ಹರಿಹಾಯ್ದರು.

''ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯ ಘೋಷಣೆ ಮುನ್ನವೇ ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ 28 ಸ್ಥಾನ ಗೆಲ್ಲೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಈ ಅನುಮಾನ ಕಾಡ್ತಿದೆ'' ಎಂದು ತಿಳಿಸಿದರು.

''ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 3 ರಾಜ್ಯದಲ್ಲಿ ಬಿಜೆಪಿ ಗೆಲುವು, ರಾಮಮಂದಿರ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದಲ್ಲಿ ವಾತಾವರಣ ಬದಲಾಗಿದೆ. ಬಿಜೆಪಿ ಪರ ವಾತಾವರಣ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಭಯ ಶುರುವಾಗಿದೆ. ಇದರಿಂದಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಬೋಗಸ್ ಗ್ಯಾರಂಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು. ಜನಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಲು ನಾವು ಬಿಡಲ್ಲ. ಕಾಂಗ್ರೆಸ್ಸಿಗರ ಕಿವಿ ಹಿಂಡಿ ಹೇಗೆ ಕೆಲಸ ಮಾಡಿಸಬೇಕು ಅನ್ನೋದು ಗೊತ್ತಿದೆ'' ಎಂದು ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಆಗ ಗ್ಯಾರಂಟಿ ಜಾರಿ ಆಶ್ವಾಸನೆ, ಈಗ ಗ್ಯಾರಂಟಿ ರದ್ದುಪಡಿಸೋ ಬೆದರಿಕೆ: ಸರ್ಕಾರದ ವಿರುದ್ದ ಜೋಶಿ‌ ಕಿಡಿ

Last Updated : Jan 31, 2024, 8:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.