ETV Bharat / state

ಹುಬ್ಬಳ್ಳಿಯಲ್ಲಿ ಮಹದಾಯಿ ಕಿಚ್ಚು: ಕುಡಿಯುವ ನೀರಿಗಾಗಿ ಆಗ್ರಹಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

author img

By ETV Bharat Karnataka Team

Published : Jan 29, 2024, 5:48 PM IST

ಕಳಸಾ ಬಂಡೂರಿ ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ರೈತ ಸೇನಾ‌ ಕರ್ನಾಟಕ ಹಾಗೂ ಆಟೋ‌ ಚಾಲಕರು ಹಾಗೂ‌ ಮಾಲೀಕರು ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

Protest in Hubli demanding implementation of Mahadayi Yojana
ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಮಹದಾಯಿ ಕಿಚ್ಚು: ಕುಡಿಯುವ ನೀರಿಗಾಗಿ ಆಗ್ರಹಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ಮಹಾದಾಯಿ ನೀರಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಹದಾಯಿ ಹೋರಾಟ ರೈತ ಸೇನಾ‌ ಕರ್ನಾಟಕ ಹಾಗೂ ಆಟೋ‌ ಚಾಲಕರು ಹಾಗೂ‌ ಮಾಲೀಕರು ಸೇರಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಮೂರುಸಾವಿರ ಮಠದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಚೆನ್ನಮ್ಮ, ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಮಿನಿವಿಧಾನ ಸೌಧದವರೆಗೆ ತಲುಪಿತು. ಬಳಿಕ ಮಹದಾಯಿ ಹೋರಾಟಗಾರರು, ಕೇಂದ್ರ ಅರಣ್ಯ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ ಮೂಲಕ‌ ಮನವಿ ಸಲ್ಲಿಸಿದರು.

ನ್ಯಾಯಾಧೀಕರಣ ತೀರ್ಪು ಬಂದರೂ ವಿಳಂಬ: ಈಗಾಗಲೇ ನ್ಯಾಯಾಧೀಕರಣದ ತೀರ್ಪು ಬಂದು ವರ್ಷ ಕಳೆದಿದೆ. ಇದುವರೆಗೆ ಯಾವುದೇ ರೀತಿಯಲ್ಲಿ ಕಳಸಾ ಬಂಡೂರಿ ಮಹದಾಯಿ ಯೋಜನೆ ಕಾಮಗಾರಿ ಆರಂಭಗೊಂಡಿಲ್ಲ. ಅಲ್ಲದೆ ಉತ್ತರ ಕರ್ನಾಟಕ ಹಲವಾರು ಬೇಡಿಕೆಗಳನ್ನು ಹೊತ್ತು ಭರವಸೆ ಕುದುರೆ ಹತ್ತಿ ಬರುವ ಜನಪ್ರತಿನಿಧಿಗಳು, ಯಾವುದೇ ರೀತಿ ಜವಾಬ್ದಾರಿ ವಹಿಸಿಕೊಳ್ಳದೇ ಕೈತೊಳೆದುಕೊಳ್ಳುತ್ತಿದ್ದಾರೆ ಆಕ್ರೋಶ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.‌

ಇನ್ನು, ಕಾಮಗಾರಿಗಾಗಿ ಡಿಪಿಆರ್ ಸಿದ್ಧಪಡಿಸಿ ಮುರ್ನಾಲ್ಕು ವರ್ಷಗಳೇ ಕಳೆದರೂ ಸರ್ಕಾರಗಳು ಮಾತ್ರ ಈ‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರಗಳ‌ ಈ‌ ನಿರ್ಲಕ್ಣ್ಯ ಧೋರಣೆಯನ್ನು ಪ್ರತಿಭಟನಾನಿರತರು ಖಂಡಿಸಿದರು.

ಹೋರಾಟದ ಎಚ್ಚರಿಕೆ: ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹದಾಯಿ ಯೋಜನೆ ಜಾರಿಗೊಳಿಸಿ, ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಅಗತ್ಯವಿರುವ 3.9 ಟಿಎಂಸಿ ನೀರನ್ನು ಪೂರೈಸುವ ಕೆಲಸವನ್ನು ಮಾಡಬೇಕು. ಡ್ಯಾಮ್​ನಲ್ಲಿ ನೀರಿಲ್ಲ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ವರ್ಷಕ್ಕೆ 4 ಟಿಎಂಸಿ ನೀರು ಬೇಕು.‌ ಆದರೆ ಈಗ ಇರುವ ನೀರು ಸಾಲದೇ ಹಾಹಾಕಾರ ಶುರುವಾಗಿದೆ. ನ್ಯಾಯಾಧೀಕರಣ ಕೊಟ್ಟ ಆದೇಶದಂತೆ ನೀರನ್ನು ಒದಗಿಸಬೇಕು. ಮಹದಾಯಿಗಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಸರ್ಕಾರ ರಾಜಕೀಯ ಮಾಡದೇ ನೀರನ್ನು ಕೊಡಬೇಕು :ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಅವಳಿ ನಗರದಲ್ಲಿ‌ ಕುಡಿಯುವ ನೀರಿನ ‌ಸಮಸ್ಯೆ ಎದುರಾಗಿದೆ. ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಯಲ್ಲಿ ರಾಜಕೀಯ ಮಾಡದೆ ನೀರನ್ನು ಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.

ಇದನ್ನೂಓದಿ:ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ: ಬಿಜೆಪಿ ವಿರುದ್ಧ ಸಿಎಂ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.