ಶಿವಮೊಗ್ಗ: ಸಾಗರ ತಾಲೂಕು ಬಿಜೆಪಿ ಯುವ ಮೂರ್ಚಾದ ಅಧ್ಯಕ್ಷರನ್ನು ಗಡಿಪಾರು ಮಾಡಿರುವ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಾಗರ ತಾಲೂಕು ಬಿಜೆಪಿ ಯುವ ಮೂರ್ಚಾದ ಅಧ್ಯಕ್ಷ ವಿನೋದ್ ರಾಜ್ (29) ಅವರನ್ನು ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲೆಯಿಂದ ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಸಾಗರ ತಾಲೂಕಿನಲ್ಲಿ ವಿನೋದ್ ರಾಜ್ ಸೇರಿದಂತೆ ಸುಮಾರು 15 ಜನರನ್ನು ಗಡಿಪಾರು ಮಾಡಲಾಗಿದೆ. ವಿನೋದ್ ರಾಜ್ ಮೇಲೆ ಕಳೆದ 4 ವರ್ಷಗಳಿಂದ ಯಾವುದೇ ಒಂದು ಪ್ರಕರಣ ಸಹ ದಾಖಲಾಗಿಲ್ಲ. ಆದರೂ ಸಹ ಸಾಗರ ಉಪವಿಭಾಗಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ವಿನೋದ್ ರಾಜ್ ಅವರನ್ನು ಗಡಿಪಾರು ಮಾಡಿದ್ದಾರೆ. ಪೊಲೀಸರು ಯಾವುದೇ ಪ್ರಕರಣ ಇಲ್ಲದೇ ಇದ್ದರೂ ಸಂಜಯ್ ಎಂಬಾತನನ್ನು ಬಂಧಿಸಿ, ಆತನಿಗೆ ವಿನೋದ್ ರಾಜ್ ಹೆಸರನ್ನು ಹೇಳುವಂತೆ ಒತ್ತಡ ಹಾಕಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಇದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಇದರಿಂದ ಜಿಲ್ಲಾಡಳಿತ ತಕ್ಷಣ ಗಡಿಪಾರು ಆದೇಶ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ''ವಿನೋದ್ ರಾಜ್ ಮೇಲೆ ಯಾವುದೇ ಪ್ರಕರಣ ದಾಖಲಾಗದೇ ಹೋದರೂ ರಾಜಕೀಯ ಪ್ರೇರಿತವಾಗಿ ವಿನೋದ್ ರಾಜ್ ಅವರನ್ನು ಗಡಿಪಾರು ಮಾಡಲಾಗಿದೆ. ವಿನೋದ್ ರಾಜ್ ಅವರನ್ನು ಸುಮ್ಮನೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಇದು ಒಂದು ರಾಜಕೀಯ ದುರುದ್ದೇಶದಿಂದ ಕೊಡಿದೆ. ಚುನಾವಣೆ ಹಾಗೂ ಕೋರ್ಟ್ ರಜೆ ಇದ್ದರೂ ಸಾಗರ ಉಪವಿಭಾಗಾಧಿಕಾರಿ ಗಡಿಪಾರು ಆದೇಶ ಮಾಡಿರುವುದು ಖಂಡನೀಯ. ಅಲ್ಲದೇ ಅವರನ್ನು ಮತದಾನ ಮಾಡದಂತೆ ತಡೆಯುವ ಹುನ್ನಾರವಾಗಿದೆ. ಇದರಿಂದ ವಿನೋದ್ ರಾಜ್ ಅವರನ್ನು ವಾಪಸ್ ಕರೆಯಿಸಬೇಕು'' ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪೊಲೀಸ್ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ - Police Officer Murder