ETV Bharat / state

ಗಣೇಶ ಹಬ್ಬದ ಎಫೆಕ್ಟ್: ಖಾಸಗಿ ಬಸ್​ ಪ್ರಯಾಣ ಬಲು ದುಬಾರಿ, ರೇಟ್​​ ಕೇಳಿದರೆ ದಂಗಾಗ್ತೀರಿ! - Private Bus Fares Hike - PRIVATE BUS FARES HIKE

ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಜನರು ಬೆಂಗಳೂರಿನಿಂದ ಹುಟ್ಟೂರಿನತ್ತ ಮುಖ ಮಾಡುತ್ತಿದ್ದಾರೆ. ಆದರೆ, ಖಾಸಗಿ ಬಸ್​ ಟಿಕೆಟ್​ ದರವನ್ನು ಮೂರು ಪಟ್ಟು ಹೆಚ್ಚಿಸಿದ್ದು, ಪ್ರಯಾಣಿಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ. ಅಲ್ಲದೆ ಕೆಲವು ಕಡೆ ಕೆಎಸ್ಆರ್​ಟಿಸಿ ಸೇವೆ ಲಭ್ಯವಿರುವುದಿಲ್ಲ ಅಥವಾ ಅನುಕೂಲಕರವಾಗಿಲ್ಲದ ಕಾರಣ ಖಾಸಗಿ ಬಸ್​ಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.

Private bus operators hike fares
ಬೆಂಗಳೂರು (IANS)
author img

By ETV Bharat Karnataka Team

Published : Sep 6, 2024, 7:25 PM IST

ಬೆಂಗಳೂರು: ಹಬ್ಬಗಳು, ಸಾಲು - ಸಾಲು ರಜೆಗಳು ಬಂದರೆ ಕೆಲವು ಖಾಸಗಿ ಬಸ್​​ಗಳ​​ ದರ ಏರಿಕೆಯಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಸಾಮಾನ್ಯವಾಗಿದೆ. ಇದೀಗ, ಗೌರಿ-ಗಣೇಶ ಹಬ್ಬಕ್ಕೂ ಇದು ತಪ್ಪಿಲ್ಲ. ಎರಡರಿಂದ ಮೂರು ಪಟ್ಟು ಹೆಚ್ಚು ಹಣ ನೀಡಿ ಖಾಸಗಿ ಬಸ್​​​ಗಳಲ್ಲಿ ಪ್ರಯಾಣಿಕರು ರಾಜ್ಯದ ವಿವಿಧ ಭಾಗಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಹಬ್ಬ ಹಾಗೂ ಲಾಂಗ್ ಹಾಲಿಡೇ ಸಂದರ್ಭಗಳಲ್ಲಿ ಕೆಎಸ್ಆರ್​ಟಿಸಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸುತ್ತದೆ. ಅದರಂತೆ ಈ ಬಾರಿಯೂ ಗೌರಿ-ಗಣೇಶ ಹಬ್ಬಕ್ಕೆ ಹೆಚ್ಚುವರಿಯಾಗಿ 1,500 ಬಸ್​​ಗಳ ಸೇವೆ ಒದಗಿಸುತ್ತಿದೆ. ಆದರೂ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳಲು ಹೆಚ್ಚಿನ ಪ್ರಯಾಣಿಕರು ಮುಂದಾಗುವ ಕಾರಣದಿಂದಾಗಿ ಖಾಸಗಿ ಬಸ್​​ಗಳ ಕಡೆ ಮುಖ ಮಾಡುವುದು ಅನಿವಾರ್ಯವಾಗಿದೆ.

ಇಂದು ಗೌರಿ ಹಬ್ಬ, ನಾಳೆ ಗಣೇಶನ ಹಬ್ಬ ಭಾನುವಾರ ಎಂದಿನಂತೆ ರಜೆ ಇದೆ. ಹೀಗಾಗಿ, ಕುಟುಂಬ ಸಮೇತರಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪ್ರಯಾಣ ದರ ಶಾಕ್ ನೀಡಿದೆ. ಆದರೂ ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ, ಜನರು ಖಾಸಗಿ ಬಸ್​​ಗಳಲ್ಲಿ ಪ್ರಯಾಣಿಸುವಂತಾಗಿದೆ.

ಕೆಎಸ್ಆರ್​ಟಿಸಿ ಬಸ್​​ನಲ್ಲೂ ಗೌರಿ-ಗಣೇಶ ಹಬ್ಬಕ್ಕೆ ದರ ಏರಿಕೆ ಮಾಡಲಾಗಿದೆ. ನಾವು 300 ರಿಂದ 400 ರೂ.ಗಳಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಪ್ರಯಾಣಿಕರಿಗೆ ಕೆಲ ಖಾಸಗಿ ಬಸ್​ನವರು ಸಮಜಾಯಿಷಿ ನೀಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಸಾರಿಗೆ ಇಲಾಖೆ, ಬೆರಳೆಣಿಕೆಯಷ್ಟೇ ಖಾಸಗಿ ಬಸ್‌ಗಳಿಗೆ ದಂಡ ವಿಧಿಸಿ ಕೈತೊಳೆದುಕೊಳ್ಳುತ್ತಿದೆ. ಇದರಿಂದಾಗಿ ಪ್ರತಿ ವರ್ಷವೂ ಖಾಸಗಿ ಬಸ್‌ ಟಿಕೆಟ್‌ ದರ ಹೆಚ್ಚಿಸುವುದು ಮುಂದುವರೆದಿದೆ.

ಖಾಸಗಿ ಬಸ್‌ಗಳ ಟಿಕೆಟ್‌ ದರ: ಗೌರಿ ಗಣೇಶ್‌ ಹಬ್ಬಕ್ಕೂ ಮೊದಲು ಬೆಂಗಳೂರು - ಹಾವೇರಿಗೆ 600-1,200 ರೂ., ಬೆಂಗಳೂರು-ಕಲಬುರಗಿಗೆ 600-1,200 ರೂ., ಬೆಂಗಳೂರು-ಯಾದಗಿರಿಗೆ 600-1,400 ರೂ., ಬೆಂಗಳೂರು - ದಾವಣಗೆರೆಗೆ 550-900 ರೂ. ಬೆಂಗಳೂರು-ಹಾಸನಕ್ಕೆ 475-700 ರೂ., ಬೆಂಗಳೂರು-ಧಾರವಾಡಕ್ಕೆ 700-1,650 ರೂ. ಹಾಗೂ ಬೆಂಗಳೂರು-ಚಿಕ್ಕಮಗಳೂರಿಗೆ 600-1,000 ರೂ.ಗಳಷ್ಟಿತ್ತು. ಆದರೆ, ಸೆ. 6ರಂದು ಆ ದರ ಶೇ. 50ರಷ್ಟು ಹೆಚ್ಚಾಗಿ ಬೆಂಗಳೂರು - ಹಾವೇರಿಗೆ 1,550-1,600 ರೂ., ಬೆಂಗಳೂರು-ಕಲಬುರಗಿಗೆ 1,200-2,000 ರೂ., ಬೆಂಗಳೂರು - ಯಾದಗಿರಿಗೆ 1,100-1,900 ರೂ., ಬೆಂಗಳೂರು-ದಾವಣಗೆರೆಗೆ 900-1,800 ರೂ., ಬೆಂಗಳೂರು-ಹಾಸನಕ್ಕೆ 800-1,700 ರೂ., ಬೆಂಗಳೂರು-ಧಾರವಾಡಕ್ಕೆ 1,500-2,500 ರೂ. ಹಾಗೂ ಬೆಂಗಳೂರು-ಚಿಕ್ಕಮಗಳೂರಿಗೆ 900-1,400 ರೂ.ಕ್ಕೆ ಏರಿಕೆಯಾಗಿದೆ.

ಸಾರಿಗೆ ಸಚಿವರು ಹೇಳುವುದೇನು?: ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ''ಖಾಸಗಿ ಬಸ್‌ಗಳಲ್ಲಿ ದರ ಹೆಚ್ಚಳ ಮಾಡಿರುವ ಬಗ್ಗೆ ಪ್ರಯಾಣಿಕರು ಅಧಿಕೃತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಗಣೇಶ ಹಬ್ಬದ ಸಲುವಾಗಿ ಕೆಎಸ್‌ಆರ್‌ಟಿಸಿಯ 1,500 ಬಸ್‌ ಸೇರಿ ಎಲ್ಲ ನಿಗಮದಿಂದ ಸುಮಾರು 2,200 ವಿಶೇಷ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಕಣ್ಣೀರೊರೆಸಲು ಮುಂದಾದ ಕೇಂದ್ರ: ಇನ್ಮುಂದೆ 35 ರೂಪಾಯಿಗೆ ಕೆ.ಜಿ ಈರುಳ್ಳಿ - Onion Retail Sale

ETV Bharat Logo

Copyright © 2025 Ushodaya Enterprises Pvt. Ltd., All Rights Reserved.