ETV Bharat / state

ಧಾರವಾಡ ಲೋಕಸಭಾ ಕ್ಷೇತ್ರದಿಂದ ಜೋಶಿ ಗೆಲ್ತಾರೆ: ಟೆಂಗಿನಕಾಯಿ, ಬೆಲ್ಲದ್​ ಭವಿಷ್ಯ - Dharwad Constituency

author img

By ETV Bharat Karnataka Team

Published : Apr 11, 2024, 9:33 PM IST

Updated : Apr 11, 2024, 10:07 PM IST

ಧಾರವಾಡದಲ್ಲಿ ಜೋಶಿ ಗೆಲುವು ನಿಶ್ಚಿತ ಎಂದು ಶಾಸಕರಾದ ಮಹೇಶ್ ಟೆಂಗಿನಕಾಯಿ ಮತ್ತು ಅರವಿಂದ ಬೆಲ್ಲದ್ ಹೇಳಿದರು.

MLA Mahesh Tenginakai, Aravinda Bellad spoke to the media.
ಶಾಸಕರಾದ ಮಹೇಶ್ ಟೆಂಗಿನಕಾಯಿ,ಅರವಿಂದ ಬೆಲ್ಲದ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಸಕ ಮಹೇಶ್ ಟೆಂಗಿನಕಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹತ್ತು ವರ್ಷಗಳ ಕಾಲ ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿಯವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಿಂಗಾಲೇಶ್ವರ ಶ್ರೀಗಳ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಮನವೊಲಿಸೋ ಕೆಲಸ ಮಾಡ್ತೀವಿ. ಆಕಸ್ಮಾತ್ ಮನವೊಲಿಕೆ ಆಗದೇ ಹೋದ್ರೆ ಚುನಾವಣೆಗೆ ಹೋಗುತ್ತೇವೆ ಎಂದರು. ಶಾಸಕ ವಿನಯ ಕುಲಕರ್ಣಿ ಅವರ ಹಿಟ್ಲರ್ ಹೇಳಿಕೆ ಬಗ್ಗೆ ಮಾತನಾಡಿ, ಯಾರನ್ನೇ ಆಗಲಿ ಹಿಟ್ಲರ್‌ಗೆ ಹೋಲಿಕೆ‌‌ ಮಾಡಬಾರದು ಎಂದರು.

ಕಾಂಗ್ರೆಸ್​​ನವರು ಏನೇ ತಿಪ್ಪರಲಾಗ ಹಾಕಿದ್ರೂ‌ ಮೋದಿ ಗೆಲ್ಲುತ್ತಾರೆ. ಹಾಗೆಯೇ ಧಾರವಾಡದಲ್ಲಿ ಜೋಶಿ ಗೆಲ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು. ಇನ್ನು, ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್​​ಗೆ ಬಾಹ್ಯ ಬೆಂಬಲವಾದರೂ ಕೊಡಲಿ. ನೇರವಾಗಿಯಾದರೂ ಬೆಂಬಲ ಕೊಡಲಿ. ಅದು‌ ಕಾಂಗ್ರೆಸ್​​ಗೆ ಬಿಟ್ಟದ್ದು. ಆದರೆ ಜನ ಮೋದಿ ಅವರನ್ನು ಪ್ರಧಾನಿ ಮಾಡಲು ಡಿಸೈಡ್ ಮಾಡಿದ್ದಾರೆ. ಜೋಶಿ ಅವರು ಹೆಚ್ಚಿನ ಅಂತರದ ಮತಗಳಿಂದ ಗೆಲ್ತಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂಓದಿ: 'ನಾನು ಹಿಟ್ಲರ್ ಆಗಿದ್ದರೆ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಗೆಲ್ಲಲಾಗುತ್ತಿತ್ತೇ?' - Prahlad Joshi

Last Updated : Apr 11, 2024, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.