ETV Bharat / state

ಸೇವೆ ವಿಷಯದಲ್ಲಿ ರಾಜಕೀಯ ಅನಪೇಕ್ಷಿತ: ಸರ್ಕಾರಿ ನೌಕರಳ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಹೈಕೋರ್ಟ್ - High Court

ವರ್ಗಾವಣೆಗೊಂಡರೂ ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿಯ ಕಿರಿಯ ಸಹಾಯಕಿಯೊಬ್ಬರ ಕಡ್ಡಾಯ ನಿವೃತ್ತಿ ಮಾಡಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಹೈಕೋರ್ಟ್
High Court (ETV Bharat)
author img

By ETV Bharat Karnataka Team

Published : Jun 22, 2024, 4:04 PM IST

ಬೆಂಗಳೂರು: ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಅನಪೇಕ್ಷಿತವಾಗಿದ್ದು, ಅಪ್ರಸ್ತುತವಾದ ವಿಷಯಗಳಿಗೆ ಕಾರಣವಾಗುತ್ತಿದೆ. ಇದು ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವರ್ಗಾವಣೆ ತಡೆಗೆ ಸಂಸದರೊಬ್ಬರ ಶಿಫಾರಸ್ಸು ಮಾಡಿದ್ದ ಉದ್ಯೋಗಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದ್ದ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.

ಸರ್ಕಾರಿ ನೌಕರರ/ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳು ಉದ್ಯೋಗದಾತ/ ಸಕ್ಷಮ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ ಬೀರುವುದು ನ್ಯಾಯಾಲಯದ ಗಮನಕ್ಕೆ ಬರುತ್ತಿದೆ. ರಾಜಕೀಯ ಪ್ರಭಾವವನ್ನುಂಟು ಮಾಡುವ ಸಾರ್ವಜನಿಕರ ಸೇವೆ ಅಪಮೌಲ್ಯವಾಗಿರಲಿದೆ ಎಂದು ಪೀಠ ತಿಳಿಸಿದೆ.

ವರ್ಗಾವಣೆಗೊಂಡರೂ ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಿರಿಯ ಸಹಾಯಕಿಯಾಗಿದ್ದ ಎಂ. ವೀಣಾ ಎಂಬುವರನ್ನು ಕಡ್ಡಾಯ ನಿವೃತ್ತಿ ಆದೇಶ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ಮಾಡಿದೆ.

ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಾಲಯದ ಮುಂದೆ ಬರುವವರು ಕಳಂಕರಹಿತ ನಡವಳಿಕೆ ಹೊಂದಿರಬೇಕು. ಆದರೆ. ಇಲಾಖಾ ಶಿಸ್ತಿನ ವಿಚಾರಣೆಯಲ್ಲಿ ವೀಣಾ ವಿರುದ್ಧ ಆರೋಪವಿದೆ. ಇದೇ ಕಾರಣದಿಂದ ಇಲಾಖಾ ಮೇಲ್ಮನವಿ ಪ್ರಾಧಿಕಾರವು ಅವರ ವಿರುದ್ಧ ಆದೇಶಿಸಿ, ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿದೆ ಎಂದು ಪೀಠ ತಿಳಿಸಿದೆ.

ಕೋರ್ಟ್​ ಮೆಟ್ಟಿಲೇರುವ ಪ್ರವೃತ್ತಿಗೆ ಕಡಿವಾಣ ಅಗತ್ಯ: ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯ ಪೀಠ, ವರ್ಗಾವಣೆಯಾದ ಸ್ಥಳಕ್ಕೆ ತಕ್ಷಣ ವರದಿ ಮಾಡಿಕೊಕೊಂಡು ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕು. ಆದರೆ, ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಅಲ್ಲದೇ, ವರ್ಗಾವಣೆಗೊಂಡ ಸ್ಥಳಕ್ಕೆ ಹಲವು ದಿನಗಳ ಕಾಲ ವರದಿ ಮಾಡಿಕೊಳ್ಳದೆ ಅನಾರೋಗ್ಯದ ಕಾರಣ ನೀಡಿ ಗೈರು ಆಗಿದ್ದಾರೆ. ಅವರಿಗೆ ಆಗಿದ್ದ ಅಲರ್ಜಿ ಗೈರು ಹಾಜರಿಗೆ ಕಾರಣ ನೀಡಿದ್ದಾರೆ. ಅಲರ್ಜಿಯು ಕೆಲಸಕ್ಕೆ ಗೈರು ಆಗುವಂತಹ ಕಾಯಿಲೆಯಲ್ಲ ಎಂಬುದಾಗಿ ವೈದ್ಯಕೀಯ ಮಂಡಳಿ ವರದಿ ನೀಡಿದೆ. ಈ ಅಂಶ ಪರಿಗಣಿಸಿರುವ ಸಕ್ಷಮ ಪ್ರಾಧಿಕಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದೆ.

ಅನಧಿಕೃತ ಗೈರು ಹಾಜರಿ ಉದ್ಯೋಗದಾತರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜತೆಗೆ, ಸಿಬ್ಬಂದಿಯಲ್ಲಿನ ಅಶಿಸ್ತಿಗೆ ಕಾರಣವಾಗಲಿದೆ. ರಜೆ ಮಂಜೂರಾತಿಗಾಗಿ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಬಳಿಕವೂ ಗೈರಾಗಿರುವುದು ನ್ಯಾಯಶಾಸ್ತ್ರದಲ್ಲಿ ದುರ್ವರ್ತನೆ ಎಂಬುದಾಗಿ ತೋರಿಸುತ್ತದೆ. ಸಿಬ್ಬಂದಿಯ ಈ ರೀತಿಯ ವರ್ತನೆಗೆ ಇಂಕ್ರಿಮೆಂಟ್ ಕಡಿತದಿಂದ ಸೇವೆಯಿಂದ ವಜಾಗೊಳಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.

ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸುವ ಹಕ್ಕಿಲ್ಲ: ಇದೇ ವೇಳೆ, ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ತಮ್ಮ 'ಸರ್ವೀಸಸ್ ಅಂಡರ್ ದಿ ಸ್ಟೇಟ್' ಪುಸ್ತಕದ ಮೊದಲ ಆವೃತ್ತಿಯಲ್ಲಿನ ಸಾಲುಗಳನ್ನು ಉಲ್ಲೇಖಿಸಿರುವ ನ್ಯಾಯ ಪೀಠ, ''ಸರ್ಕಾರಿ ನೌಕರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ವರ್ಗಾವಣೆಗೆ ಹೊಣೆಗಾರರಾಗಿರುತ್ತಾನೆ. ನೌಕರನಿಗೆ ಆ ಹುದ್ದೆಯಿಂದ ವರ್ಗಾವಣೆ ಮಾಡಬಾರದು ಎಂಬುದಾಗಿ ಒತ್ತಾಯಿಸುವ ಹಕ್ಕು ಇಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಿದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ'' ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಉದ್ಯೋಗಿಗಳ ವರ್ಗಾವಣೆ ಅವರಲ್ಲಿ ಕೆಲವು ತೊಂದರೆಗಳಿಗೆ ಕಾರಣವಾಗುತ್ತದೆ. ಆದರೆ, ಅದು ಅನಿವಾರ್ಯವಾಗಿರಲಿದೆ. ಅಂತಹ ಸಮಸ್ಯೆಗಳಿಗೆ ಉದ್ಯೋಗದಾತರು ಮಾತ್ರ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಿದೆ. ಹೀಗಾಗಿ, ವೀಣಾ ಅವರಿಗೆ ಕಡ್ಡಾಯ ನಿವೃತ್ತಿ ನೀಡಿದ್ದ ಸರ್ಕಾರದ ಕ್ರಮ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ದೋಷಪೂರಿವಾಗಿದ್ದು, ಇದನ್ನು ರದ್ದು ಮಾಡಲಾಗುತ್ತಿದೆ. ಅಲ್ಲದೇ, ಕಡ್ಡಾಯ ನಿವೃತ್ತಿಯಿಂದ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಮುಂದಿನ ಎಂಟು ವಾರಗಳಲ್ಲಿ ಹಸ್ತಾಂತರಿಸಬೇಕು. ವಿಳಂಬವಾದಲ್ಲಿ ಮಾಸಿಕ ಶೇ.2ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾಗಿದ್ದ ಎಂ. ವೀಣಾ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿಯಲ್ಲಿ ಕಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು 2002ರ ಜುಲೈ 12ರಂದು ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಈ ವೇಳೆ ಸೇವೆಗೆ ವರದಿ ಮಾಡಿಕೊಳ್ಳದೆ ಆರೋಗ್ಯ ಸಮಸ್ಯೆ ನೀಡಿ ಗೈರು ಹಾಜರಾಗಿದ್ದರು. ಈ ಸಂಬಂಧ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಜತೆಗೆ, ಸಂಸದರೊಬ್ಬರ ಶಿಫಾರಸ್ಸು ಮಾಡಿಸಿದ್ದರು.

ಪ್ರಮಾಣ ಪತ್ರದ ಪಾವಿತ್ರ್ಯತೆಯ ಕುರಿತು ಸಂಶಯವ್ಯಕ್ತಪಡಿಸಿದ್ದ ಮಂಡಳಿ, ಅರ್ಜಿದಾರರ ಉಡುಪಿ ವೈದ್ಯಕೀಯ ಮಂಡಳಿಯಲ್ಲಿ ಪರೀಕ್ಷೆಗೊಳಪಡಿಸಿದ್ದರು. ಈ ವೇಳೆ ಅರ್ಜಿದಾರರಿಗೆ ಅಲರ್ಜಿ ಇದೆ. ಆದರೆ, ಸೇವೆಗೆ ಗೈರಾಗುವಂತಹ ಸಮಸ್ಯೆ ಇಲ್ಲ ಎಂಬುದಾಗಿ ತಿಳಿಸಿತ್ತು. ಇದರಿಂದ ಅರ್ಜಿದಾರರನ್ನು ಕಡ್ಡಾಯ ನಿವೃತ್ತಿಗೆ ಆದೇಶಿಸಲಾಗಿತ್ತು. ಈ ಆದೇಶವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಮೇಲ್ಮನವಿ ಪ್ರಾಧಿಕಾರದ ಆದೇಶ ರದ್ದುಪಡಿಸಿ ಉದ್ಯೋಗ ನೀಡುವಂತೆ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಂಡಳಿ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: ಪ್ರಧಾನಿ, ಸಿಎಂ, ಡಿಸಿಎಂ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.