ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಿಗ್ಗೆ ದಕ್ಷಿಣ ವಿಭಾಗದ ಪೊಲೀಸರು ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಸುಮಾರು 230 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ.
![ರೌಡಿಗಳ ಮನೆ ದಾಳಿ ಪೊಲೀಸ್ ದಾಳಿ](https://etvbharatimages.akamaized.net/etvbharat/prod-images/21-03-2024/kn-bng-01-rowdi-raid-7202806_21032024111751_2103f_1711000071_709.jpg)
ಜಯನಗರ, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು, ಕುಮಾರಸ್ವಾಮಿ ಲೇಔಟ್ ಸೇರಿದಂತೆ ದಕ್ಷಿಣ ವಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ರೌಡಿಶೀಟರ್ ಮನೆಗಳನ್ನು ಪೊಲೀಸರು ಜಾಲಾಡಿದ್ದಾರೆ. ಪರಿಶೀಲನೆಯ ವೇಳೆ ಕೆಲವು ರೌಡಿಗಳ ಮನೆಗಳಲ್ಲಿ ಮಾರಕಾಸ್ತ್ರಗಳು, ವಿವಿಧ ಆಯುಧಗಳು ಸಿಕ್ಕಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
![ರೌಡಿಗಳ ಮನೆ ದಾಳಿ ಪೊಲೀಸ್ ದಾಳಿ](https://etvbharatimages.akamaized.net/etvbharat/prod-images/21-03-2024/kn-bng-01-rowdi-raid-7202806_21032024111751_2103f_1711000071_302.jpg)
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪದೇ ಪದೇ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ.
![ರೌಡಿಗಳ ಮನೆ ದಾಳಿ ಪೊಲೀಸ್ ದಾಳಿ](https://etvbharatimages.akamaized.net/etvbharat/prod-images/21-03-2024/kn-bng-01-rowdi-raid-7202806_21032024111751_2103f_1711000071_1013.jpg)
ಇದನ್ನೂ ಓದಿ: ಮಂಗಳೂರು: ಗೂಂಡಾ ಕಾಯ್ದೆಯಡಿ ಮೂವರು ರೌಡಿಶೀಟರ್ಗಳ ಬಂಧನ