ETV Bharat / state

ದರ್ಶನ್​ನನ್ನು ಪೊಲೀಸರು ಬಂಧಿಸಿಲ್ಲ, ವಿಚಾರಣೆಗೆ ಕರೆದಿದ್ದಾರೆ ಅಷ್ಟೇ: ವಕೀಲ ನಾರಾಯಣಸ್ವಾಮಿ - Actor Darshan - ACTOR DARSHAN

ನಟ ದರ್ಶನ್​ ಅವರನ್ನು ಪೊಲೀಸರು ಬಂಧಿಸಿಲ್ಲ ಕೇವಲ ವಿಚಾರಣೆಗಾಗಿ ಕರೆದಿದ್ದಾರೆ ಎಂದು ದರ್ಶನ್​ ಪರ ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವಕೀಲ ನಾರಾಯಣಸ್ವಾಮಿ
ವಕೀಲ ನಾರಾಯಣಸ್ವಾಮಿ (ETV Bharat)
author img

By ETV Bharat Karnataka Team

Published : Jun 11, 2024, 3:10 PM IST

Updated : Jun 11, 2024, 4:38 PM IST

ವಕೀಲ ನಾರಾಯಣಸ್ವಾಮಿ (ETV Bharat)

ಬೆಂಗಳೂರು: ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್​ ಅವರನ್ನು ಬಂಧಿಸಿಲ್ಲ. ಬದಲಾಗಿ ಅವರನ್ನು ವಿಚಾರಣೆ ಕರೆದಿದ್ದಾರೆ ಅಷ್ಟೇ ಎಂದು ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಮಾಡಿದ ಆರೋಪದಡಿ ಮೈಸೂರಿನಿಂದ ನಟ ದರ್ಶನ್ ಅವರನ್ನು​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ದರ್ಶನ್ ಪರ ವಕೀಲ ಠಾಣೆಗೆ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಹತ್ಯೆ ಆರೋಪ ಪ್ರಕರಣದಲ್ಲಿ ದರ್ಶನ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಅವರನ್ನು ಬಂಧಿಸಿಲ್ಲ. ನೇರವಾಗಿ ದರ್ಶನ್ ಅವರೊಂದಿಗೆ ಮಾತನಾಡಿಲ್ಲ.

ಪೊಲೀಸರ ತನಿಖೆ ವೇಳೆ ಅಡ್ಡಿಪಡಿಸುವುದು ಸರಿಯಲ್ಲ. ಹಾಗಾಗಿ ಕೆಲ ಹೊತ್ತಿನ ಬಳಿಕ ಮಾತನಾಡಲು ಸಮಯಾವಕಾಶ ನೀಡುವುದಾಗಿ ಪೊಲೀಸರು ತಿಳಿಸಿರುವುದಾಗಿ ವಕೀಲರು ತಿಳಿಸಿದ್ದಾರೆ.

ಪಟ್ಟಣಗೆರೆಯ ಶೆಡ್​​ಹೌಸ್​​ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಶೆಡ್ ಹೌಸ್ ಬಂಧಿತ ಆರೋಪಿ ವಿನಯ್ ಸಂಬಂಧಿಯಾಗಿರುವ ಜಯಣ್ಣ ಎಂಬುವರಿಗೆ ಸೇರಿದೆ. ಪ್ರಕರಣ ಸಂಬಂಧ ದರ್ಶನ್ ಅವರನ್ನು ಖುದ್ದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರೇ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪೊಲೀಸ್​ ವಶಕ್ಕೆ: ಕೇಸ್​ ಬಗ್ಗೆ ಬೆಂಗಳೂರು ಪೊಲೀಸ್​​​​​​​​ ಕಮಿಷನರ್​ ಹೇಳಿದ್ದಿಷ್ಟು! - Actor Darshan

Last Updated : Jun 11, 2024, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.