ಚಿಕ್ಕಮಗಳೂರು: ಅತಿ ಹೆಚ್ಚು ಬಂದೂಕು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು. ಬರೋಬ್ಬರಿ 10 ಸಾವಿರಕ್ಕಿಂತ ಅಧಿಕ ಲೈಸನ್ಸ್ ಪಡೆದಿರುವ ಬಂದೂಕುಗಳಿವೆ. ಅದು ಒಂಟಿ ಮನೆ, ಕಾಫಿ ಎಸ್ಟೇಟ್ ಇರೋರಲ್ಲಿ ಹೆಚ್ಚು, ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಪೊಲೀಸ್ ಇಲಾಖೆ 7 ದಿನದ ಗಡುವು ನೀಡಿ ಬಂದೂಕುಗಳನ್ನು ಸರೆಂಡರ್ ಮಾಡುವಂತೆ ಸೂಚಿಸಿದೆ. ಇದಲ್ಲದೇ ಅವಶ್ಯಕತೆ ಇದ್ದರೆ ಪರಿಶೀಲನೆ ನಡೆಸಲಿದ್ದು, ಇದರ ಜೊತೆಗೆ 2300 ಕ್ರಿಮಿನಲ್ ಹಿನ್ನೆಲೆಯುಳ್ಳವರಿಂದ ಬಾಂಡ್ ಪಡೆಯುತ್ತಿದೆ.
ಹೌದು.. ಕಾಫಿ ನಾಡು ಚಿಕ್ಕಮಗಳೂರು ಅಂದ್ರೆ ಕಾಫಿ ತೋಟ, ಒಂಟಿ ಮನೆಗಳಿರುವ ಜಿಲ್ಲೆ. ಇಲ್ಲಿ ಜನರು ಆತ್ಮ ರಕ್ಷಣೆಗೆ ಅಂತ ಗನ್ಗಳನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಅದರಲ್ಲೂ ಲೈಸನ್ಸ್ ಹೊಂದಿರುವ ಬಂದೂಕುಗಳೇ ಹೆಚ್ಚು, ಈಗ ಲೋಕಸಭಾ ಚುನಾವಣೆ ದಿನ ನಿಗದಿಯಾಗ್ತಿದ್ದಂತೆ ಬಂದೂಕುಗಳನ್ನು ಆಯಾ ಪೊಲೀಸ್ ಸ್ಟೇಷನ್ಗೆ ಒಪ್ಪಿಸುವಂತೆ ಸೂಚನೆ ಹೊರಡಿಸಲಾಗಿದೆ.
ಅದು 7 ದಿನದೊಳಗೆ ಪೊಲೀಸ್ ಇಲಾಖೆಗೆ ಒಪ್ಪಿಸಬೇಕೆಂದು ಅದೇಶವಿದ್ದು, ಅದರೊಂದಿಗೆ ಸ್ಕ್ರಿನಿಂಗ್ ಕಮಿಟಿಯೊಂದನ್ನು ಮಾಡಿದೆ. ಅದರಲ್ಲಿ ಯಾರಿಗಾದರೂ ಬೆದರಿಕೆ, ಬಂದೂಕು ಅವಶ್ಯಕತೆ ಇದೆಯಾ ಅನ್ನುವರು ಅರ್ಜಿಯನ್ನ ಸಲ್ಲಿಸಬಹುದು. ಪರಿಶೀಲನೆ ನಡೆಸುವುದಕ್ಕೆ ಇಲಾಖೆ ಮುಂದಾಗಿದ್ದು, ಬಂದೂಕುಗಳನ್ನು ವಶಕ್ಕೆ ಪಡೆಯಲು ಸಕಲ ಸಿದ್ಧತೆ ಮಾಡಿ ಕೊಂಡಿದೆ.
ಇನ್ನೂ ಜಿಲ್ಲೆಯಲ್ಲಿ ಕೇವಲ ಮತದಾನ ಪ್ರಕ್ರಿಯೆ ಮಾತ್ರ ನಡೆಯಲಿದ್ದು, ಉಳಿದೆದ್ದಲ್ಲವೂ ಉಡುಪಿಯಲ್ಲಿ ನಡೆಯಲಿದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಿಮಿನಲ್ ಹಿನ್ನೆಲೆಯುಳ್ಳವರಿಂದಲೂ ಬಾಂಡ್ ಪಡೆಯಲು ಮುಂದಾಗಿದೆ. ಕಳೆದ 2023ರಲ್ಲಿ 1800 ಮಂದಿಯಿಂದ ಬಾಂಡ್ ಪಡೆದಿತ್ತು. ಅದು ಒಂದು ವರ್ಷ ಅವಧಿ ಇರೋದ್ರಿಂದ ಈಗ ಹೆಚ್ಚುವರಿ ಗುರುತಿಸಿ 653 ಮಂದಿಯಿಂದ ಬಾಂಡ್ ಪಡೆಯೋಕೆ ಮುಂದಾಗಿದ್ದಾರೆ. ಅಲ್ಲಿಗೆ 2300ಕ್ಕೂ ಹೆಚ್ಚು ಜನರಿಂದ ಬಾಂಡ್ ಪಡೆಯಲಾಗುತ್ತಿದೆ. ಇದಲ್ಲದೆ ಗೂಂಡಾ ಅಕ್ಟ್, ರೌಡಿಶೀಟರ್ ಮೇಲೆಯೂ ನಿಗಾ ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಬಂದೂಕು ಹಸ್ತಾಂತರಿಸಲು 7 ದಿನಗಳ ಗಡುವು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಲೈಸನ್ಸ್ ಇರುವ ಬಂದೂಕುಗಳಿವೆ. ಚುನಾವಣೆ ಹಿನ್ನೆಲೆ ಮಲೆನಾಡು ಭಾಗ, ಒಂಟಿ ಮನೆ, ಕಾಫಿ ಎಸ್ಟೇಟ್, ಜೀವ ಬೆದರಿಕೆ ಅನ್ನುವ ರೀತಿಯಲ್ಲಿ ಲೈಸನ್ಸ್ಗಳನ್ನು ಪಡೆದವರಿಗೆ 7 ದಿನಗಳ ಗಡುವು ನೀಡಿ ಬಂದೂಕು ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿದೆ. ಬ್ಯಾಂಕ್ಸ್, ಜ್ಯುವೇಲರಿ ಶಾಪ್ ಇರಬಹುದು ಅಂಥವರಿಗೆ ಅವಶ್ಯಕತೆ ಇದ್ದು ಅವರಿಗೆ ಸ್ಕ್ರಿನಿಂಗ್ ಕಮಿಟಿ ಮುಂದೆ ಹೋಗಲು ಸೂಚಿಸಲಾಗಿದೆ.
ಗೂಂಡಾ ಕಾಯಿದೆಯಡಿ ಹಿಂದೆ 2023ರಲ್ಲಿ 1800 ಮಂದಿಯಿಂದ ಬಾಂಡ್ ಪಡೆದಿತ್ತು. ಅದು ಒಂದು ವರ್ಷ ಅವಧಿ ಇರೋದ್ರಿಂದ ಈಗ ಹೆಚ್ಚುವರಿ ಗುರುತಿಸಿ 653 ಮಂದಿಯಿಂದ ಬಾಂಡ್ ಪಡೆಯಲಾಗುವುದು. ಚುನಾವಣೆ ಸ್ವತಂತ್ರ, ಸುವ್ಯವಸ್ಥಿತವಾಗಿ ನಡೆಯಬೇಕು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂಓದಿ:ಸಾಂಪ್ರದಾಯಿಕ ಕೊಡವ ಕುಟುಂಬಗಳ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಚಾಲನೆ - hockey festival