ETV Bharat / state

ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ - PM Modi Road Show

ಲೋಕಸಭೆ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್​ ಶೋ ನಡೆಸಿದರು.

pm-narendra-modi-road-show-in-mangaluru
ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ
author img

By ETV Bharat Karnataka Team

Published : Apr 14, 2024, 9:49 PM IST

Updated : Apr 14, 2024, 10:58 PM IST

ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ

ಮಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಂಗಳೂರಿನಲ್ಲಿ ಅಬ್ಬರದ ರೋಡ್ ಶೋ ಮೂಲಕ ಮತಬೇಟೆ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರತ್ತ ಪ್ರಧಾನಿ ಮೋದಿ ಕೈ ಬೀಸಿದರು.

ಮೈಸೂರು ಸಮಾವೇಶದ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ, ನೇರವಾಗಿ ಇಲ್ಲಿನ ನಾರಾಯಣಗುರು ವೃತ್ತಕ್ಕೆ (ಲೇಡಿಹಿಲ್) ಆಗಮಿಸಿದರು. ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದರು. ಈ ವೇಳೆ ತುಳುನಾಡ ಕೊಂಬು ಚೆಂಡೆ, 10 ಮಂದಿಯಿಂದ ಶಂಕನಾದ ಹಾಗೂ 12 ತಂತ್ರಿಗಳ ವೇದಘೋಷಗಳು ಮೊಳಗಿದವು.

ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ದೊಡ್ಡದಾದ ರುದ್ರಾಕ್ಷಿ ಮಾಲೆಯನ್ನು ಮೋದಿಗೆ ಹಾಕಿದರು. ಸಂಸದ ನಳಿನ್ ಕುಮಾರ್ ಕಟೀಲ್​ ಪ್ರಧಾನಿಗೆ ಕೇಸರಿ ಶಾಲು ಹೊದೆಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ದೇವರ ಪ್ರಭಾವಳಿಯ ಪ್ರತಿಕೃತಿ ನೀಡಿದರು. ಜೊತೆಗೆ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮೋದಿಗೆ ಪೇಟಾ ತೊಡಿಸಿದರು.

ಬಳಿಕ ರೋಡ್ ಶೋ ಲಾಲ್​ಭಾಗ್, ಬಲ್ಲಾಳ್​ಭಾಗ್, ಪಿವಿಎಸ್ ಮೂಲಕ ಸಾಗಿ ನವಭಾರತ್ ಸರ್ಕಲ್​ವರೆಗೆ ಬಂದು ಸಮಾಪ್ತಿಗೊಂಡಿತು. ಸಂಜೆ 5 ಗಂಟೆಯಿಂದಲೇ ಮೋದಿ ನೋಡಲು ಕಾಯ್ದಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರ ತನಕ ರೋಡ್ ಶೋನಲ್ಲಿ ಭಾಗಿಯಾಗಿದ್ದು, ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದರು. ಈ ವೇಳೆ ಬಿಜೆಪಿ ಬಾವುಟಗಳು ರಾರಾಜಿಸಿದರೆ, ರಸ್ತೆ ಇಕ್ಕೆಲಗಳಲ್ಲಿನ ಕೇಸರಿ ರಂಗು ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿತು.

ರೋಡ್ ಶೋ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 2,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಡಿಜಿಪಿ, ಐಜಿಪಿ, 5 ಎಸ್ಪಿ/ಡಿಸಿಪಿ, 10 ಡಿವೈಎಸ್ಪಿ/ಎಸಿಪಿ, 36 ಇನ್ಸ್​ಪೆಕ್ಟರ್, 67 ಎಸ್​ಐ, 147 ಎಎಸ್​ಐ, 1207 ಹೆಡ್​ಕಾನ್ಸ್​ಟೆಬಲ್/ ಕಾನ್ಸ್​ಟೆಬಲ್, 92 ಗೃಹರಕ್ಷಕರು, 5 ಕೆಎಸ್ಆರ್​ಪಿ ತುಕಡಿಗಳು, 19 ಸಿಎಆರ್ ತುಕಡಿಗಳು, 2 ಸಿಆರ್​​ಪಿಎಫ್ ತುಕಡಿಗಳು, 4 ಎಎಸ್​ಸಿ ತಂಡಗಳು, 1 ಬಿಡಿಡಿಎಸ್ ತಂಡ ಹಾಗೂ 30 ಡಿಎಫ್ಎಂಡಿ/ಹೆಚ್​ಹೆಚ್​ಎಂಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

pm-narendra-modi-road-show-in-mangaluru
ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ

ಮಂಗಳೂರು ವಿಮಾನ ನಿಲ್ದಾಣ ಹಾಗೂ ಮೋದಿ ರೋಡ್ ಶೋ ನಡೆಸುವ ಸ್ಥಳದಲ್ಲಿ ಈ ಪೊಲೀಸ್ ಅಧಿಕಾರಿ/ಸಿಬ್ಬಂದಿ ವರ್ಗವು ಬಂದೋಬಸ್ತ್ ನಡೆಸಿದ್ದರು. ಎಸ್ಪಿಜಿ ಅಧಿಕಾರಿಗಳು ನಗರದೆಲ್ಲೆಡೆ ವಿಶೇಷ ನಿಗಾ ವಹಿಸಿದ್ದರು. ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು.

ಗಮನಸೆಳೆದ ಕಲಾ ತಂಡಗಳು: ರೋಡ್ ಶೋದಲ್ಲಿ ಹಲವು ಬಗೆಯ ಕಲಾ ಪ್ರಕಾರಗಳು ಗಮನ ಸೆಳೆದವು. ನಾರಾಯಣಗುರು ವೃತ್ತದಲ್ಲಿ ತುಳುನಾಡ ಕೊಂಬು ಚೆಂಡೆ, 10 ಮಂದಿಯಿಂದ ಶಂಕನಾದ, 12 ತಂತ್ರಿಗಳ ವೇದಘೊಷ ಇದ್ದರೆ, ಲಾಲ್​ಭಾಗ್​ನಲ್ಲಿ ಹುಲಿವೇಷ ಕುಣಿತ, ಬಲ್ಲಾಲ್​ಭಾಗ್ ಬಳಿ ಭರತನಾಟ್ಯ, ಘಟೋದ್ಗಜ, ಹನುಮಂತನ ವೇಷಧಾರಿಗಳು, ದೀಪ ಕಂಪರ್ಟ್ ಬಳಿ ವಯಲಿನ್ ಜೊತೆಗೆ ಕುಣಿತ ಭಜನೆ, ಬಿಜೆಪಿ ಕಚೇರಿ ಬಳಿ ಮಹಿಷವಧೆ ಯಕ್ಷಗಾನ ಆಯೋಜಿಸಲಾಗಿತ್ತು. ರೋಡ್ ಶೋ ವೇಳೆ ಪ್ರಧಾನಿ ಮೋದಿ ಕಲಾಪ್ರಕಾರಗಳನ್ನು ವೀಕ್ಷಿಸುತ್ತ ಸಾಗಿದರು.

ಇದನ್ನೂ ಓದಿ: ಕರ್ನಾಟಕ ಇತರ ರಾಜ್ಯಗಳಿಗೆ ಎಟಿಎಂ ಆಗಿದೆ: ರಾಜ್ಯ ಸರ್ಕಾರದ ವಿರುದ್ಧ ಮೋದಿ ಗಂಭೀರ ಆರೋಪ

Last Updated : Apr 14, 2024, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.